ಪುಣೆ:ಲಾಕ್​ಡೌನ್​ ಅವಧಿಯಲ್ಲಿ ಅಜ್ಜಿಯ ಮನೆಗೆ ಬಂದಿದ್ದ 16 ವರ್ಷದ ಬಾಲಕಿಗೆ ನೀಲಿಚಿತ್ರಗಳ ದೃಶ್ಯಗಳನ್ನು ತೋರಿಸಿದ ಸೋದರತ್ತೆ, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾಳೆ. ಇದಕ್ಕೆ ಆಕೆಯ ಬಾಯ್​ಫ್ರೆಂಡ್​ ಕೂಡ ಸಹಕರಿಸಿದ್ದ ಎಂದು ಹೇಳಲಾಗಿದ್ದು, ಇದೀಗ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್​ನ ಲಾಕ್​ಡೌನ್​ ಅವಧಿಯಲ್ಲಿ ಸುರಕ್ಷಿತವಾಗಿರಲಿ ಎಂದು 16 ವರ್ಷದ ಪುತ್ರಿ ಸೇರಿ ನನ್ನ ನಾಲ್ಕು ಮಕ್ಕಳನ್ನು ಉಂಡ್ರಿಯಲ್ಲಿರುವ ನನ್ನ ಅತ್ತೆ ಮನೆಗೆ ಕಳುಹಿಸಿದ್ದೆ. ನನ್ನ ನಾದಿನಿಯನ್ನು ಭೇಟಿಯಾಗಲು ಆಕೆಯ ಬಾಯ್​ಫ್ರೆಂಡ್​ ಆಗಾಗ್ಗ ಮನೆಗೆ ಬಂದು ಹೋಗುತ್ತಿದ್ದ. ಆ ಸಂದರ್ಭದಲ್ಲಿ ನನ್ನ ಪುತ್ರಿಗೆ ಅವರಿಬ್ಬರೂ ಪೋರ್ನ್ ದೃಶ್ಯಗಳನ್ನು (ನೀಲಿಚಿತ್ರಗಳು) ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಖೊಂಡ್ವಾ ಪೊಲೀಸ್​ ಠಾಣೆಯಲ್ಲಿ 30 ವರ್ಷದ ಮಹಿಳೆ ದೂರು ದಾಖಲಿಸಿದ್ದಾಳೆ.
ಈ ದೂರನ್ನು ಆಧರಿಸಿ ಬಾಲಕಿಯ ಸೋದರತ್ತೆ ಹಾಗೂ ಆಕೆಯ ಬಾಯ್​ಫ್ರೆಂಡ್​ ಅನ್ನು ಬಂಧಿಸಿರುವುದಾಗಿ ಖೋಂಡ್ವಾ ಠಾಣೆಯ ಮುಖ್ಯಸ್ಥ ವಿನಾಯಕ್​ ಗಾಯಕ್ವಾಡ್​ ತಿಳಿಸಿದ್ದಾರೆ. ಇವರಿಬ್ಬರ ವಿರುದ್ಧ ಮಹಿಳೆಯ ಶೀಲ ಭಂಗ ಮಾಡಲು ಯತ್ನ (ಐಪಿಸಿ 354) ಮತ್ತು ಪೋಕ್ಸೋ ಕಾಯ್ದೆಯ 8 ಮತ್ತು 12ನೇ ವಿಧಿಯನ್ವಯ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ರಾತ್ರಿ ಲವರ್​ ಜತೆ ಜಗಳವಾಡಿದ ಯುವತಿ ಬೆಳಗಾಗುವಷ್ಟರಲ್ಲಿ ಸಾವು: ಪೊಲೀಸ್​ ಬಲೆಗೆ ಬಿದ್ದ ಪ್ರಿಯಕರ
ಬಾಲಕಿಯ ತಾಯಿ ಪುಣೆಯ ಹೊರವಲಯದಲ್ಲಿ ಕೆಲಸ ಮಾಡುತ್ತಾರೆ. ಆದ್ದರಿಂದ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅವರನ್ನು ಉಂಡ್ರಿಯಲ್ಲಿರುವ ತನ್ನ ಅತ್ತೆ ಮನೆಗೆ ಕಳುಹಿಸಿದ್ದಳು. ಬಕ್ರೀದ್​ ಹಬ್ಬಕ್ಕೆಂದು ಮನೆಗೆ ಮರಳಿದಾಗ ಬಾಲಕಿ ತನ್ನ ಸೋದರತ್ತೆಯ ಕೃತ್ಯವನ್ನು ತಾಯಿಯ ಬಳಿ ಹೇಳಿಕೊಂಡಿದ್ದಳು. ಇದನ್ನು ಆಧರಿಸಿ ಸಂತ್ರಸ್ತೆಯ ತಾಯಿ ದೂರು ದಾಖಲಿಸಿದ್ದರು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರೂ ತಪ್ಪೊಪ್ಪಿಕೊಂಡರುವುದಾಗಿ ವಿವರಿಸಿದ್ದಾರೆ.
ಬಂಧಿತರಿಗೆ ಕೋವಿಡ್​: ಬಂಧಿಸಲ್ಪಟ್ಟಿರುವ ಸಂತ್ರಸ್ತೆಯ ಸೋದರತ್ತೆ ಮತ್ತು ಆಕೆಯ ಬಾಯ್​ಫ್ರೆಂಡ್​ ಇಬ್ಬರಿಗೂ ಕೋವಿಡ್​-19 ಪರೀಕ್ಷೆ ಮಾಡಲಾಗಿದ್ದು, ಕರೊನಾ ಪಾಸಿಟಿವ್​ ಎಂದು ವರದಿ ಬಂದಿದೆ. ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಅವರಿಬ್ಬರನ್ನೂ ಜೈಲಿನಲ್ಲೇ ಇರಿಸುವಂತೆ ಜೈಲ್​ ವಾರಂಟ್​ ಜಾರಿಯಾಗಿದ್ದರೂ, ಜೈಲು ಅಧಿಕಾರಿಗಳು ಮಾತ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದ್ದು, ಆ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
ತೀವ್ರ ಕುತೂಹಲ ಮೂಡಿಸಿದ ಸಚಿವ ರಾಜನಾಥ್​ ಸಿಂಗ್​ ಕುರಿತ ರಕ್ಷಣಾ ಸಚಿವಾಲಯದ ಟ್ವೀಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − three =
Remember me
