ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಪರವಾಗಿ ನಿಂತಿರುವ ಮಠಾಧೀಶರ ಸಾಲಿಗೆ ಜಾತಿ-ಮತ, ಪಂಥ ಭೇದವಿಲ್ಲದೆ ಮತ್ತಷ್ಟು ಸ್ವಾಮೀಜಿಗಳ ಸೇರ್ಪಡೆಯಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ, ಬಿಎಸ್​ವೈ ವಿಚಾರದಲ್ಲಿ ಜನಾಭಿಪ್ರಾಯಕ್ಕೆ ವಿರುದ್ಧವಾದ ತೀರ್ಮಾನ ಕೈಗೊಳ್ಳದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಒತ್ತಡ ಹೇರುವುದಕ್ಕಾಗಿ 500ಕ್ಕೂ ಹೆಚ್ಚು ಸಾಧು-ಸಂತರ ನಿಯೋಗ ದೆಹಲಿಗೆ ತೆರಳಲು ಚಿಂತನೆ ನಡೆದಿದೆ. ಇನ್ನೊಂದೆಡೆ, ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕದಲ್ಲಾಗುತ್ತಿರುವ ಬೆಳವಣಿಗೆ ಕಂಡು ಬಿಜೆಪಿಯ ದೆಹಲಿ ನಾಯಕರು ಕಂಗಾಲಾಗಿದ್ದಾರೆ.
ವೀರಶೈವ-ಲಿಂಗಾಯತ ಸಮುದಾ ಯದ ಮಠಗಳ ಜತೆಗೆ ಇತರ ಸಮುದಾಯಗಳ ವಿವಿಧ ಮಠಾಧೀಶರು ಸಹ ಧ್ವನಿ ಎತ್ತಿದ್ದಾರೆ. ರಾಜ್ಯ ಮತ್ತು ಪಕ್ಷದ ಒಳಿತಿಗಾಗಿ ಬಿಎಸ್​ವೈ ಸಿಎಂ ಸ್ಥಾನದಲ್ಲಿ ಮುಂದುವರಿದು, ಉಳಿದ 2 ವರ್ಷ ಅವಧಿ ಪೂರ್ಣಗೊಳಿಸಲೆಂಬ ಒತ್ತಡ ಹೇರಿದ್ದಾರೆ. ಸಿಎಂ ನಿವಾಸಕ್ಕೆ ಮಠಾಧೀಶರ ಭೇಟಿ ಮುಂದು ವರಿದಿದೆ. ನಾಯಕತ್ವ ಬದಲಾವಣೆ ವದಂತಿಗಳ ವಾಸ್ತವಾಂಶ ತಿಳಿಯಲು ಪ್ರಯತ್ನಿಸಿದ್ದಾರೆ. ಯಡಿಯೂರಪ್ಪ ಜತೆ ರ್ಚಚಿಸಿ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.
ಅಪ್ರಜಾ ಸತ್ತಾತ್ಮಕವಾಗಿ ಸರ್ಕಾರ ರಚಿಸಿದರೆಂಬ ದೊಡ್ಡ ಅಪವಾದವನ್ನು ತಲೆ ಮೇಲೆ ಹೊತ್ತು ಯಡಿಯೂರಪ್ಪ ಬಿಜೆಪಿಗೆ ಅಧಿಕಾರ ತಂದುಕೊಟ್ಟರು. ಅಧಿಕಾರಕ್ಕೆ ಅವರು ಬೇಕು, ಆಡಳಿತ ನಡೆಸುವುದಕ್ಕೆ ಬೇಡವೆಂದರೆ ಹೇಗೆ? ಇದ್ಯಾವ ನ್ಯಾಯ ? ಎಂದಿದ್ದಾರೆ ನಿಡುಮಾಮಿಡಿ ಮಠದ ಪೀಠಾಧಿಪತಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ
ಜಾತಿ-ಜನಾಂಗದ ನಡುವೆ ತಾರತಮ್ಯವಿಲ್ಲದೆ ಅಧಿಕಾರ ನಡೆಸುತ್ತಿರುವ ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಬೇಕು. ಅನುಭವಿ, ಮುತ್ಸದ್ದಿ ನಾಯಕನನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಅನಗತ್ಯವಾಗಿ ತೊಂದರೆ ಕೊಡುವುದನ್ನು ನಿಲ್ಲಿಸಿ, ರಾಜ್ಯದ ಆಡಳಿತ ಸುಗಮ, ಅಭಿವೃದ್ಧಿ ಕಾರ್ಯ ಸುಸೂತ್ರವಾಗಿ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎನ್ನುವುದು ಕಾಗಿನೆಲೆ ಶಾಖಾ ಪೀಠ, ಬೆಂಗಳೂರು ವಿಭಾಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅಭಿಮತ.
ವರಿಷ್ಠರಿಗೆ ಶಾಕ್:ರಾಜ್ಯದಲ್ಲಿ 2 ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಬಿಜೆಪಿ ಹೈಕಮಾಂಡ್​ಗೆ ಶಾಕ್ ನೀಡಿವೆ. ನಿರೀಕ್ಷೆ ಮಾಡದಿರುವ ರೀತಿಯಲ್ಲಿ ಮಠಾಧೀಶರು ಬಿಎಸ್​ವೈಗೆ ಬೆಂಬಲ ನೀಡುತ್ತಿದ್ದಾರೆ. ಇದು ಹೈಕಮಾಂಡ್​ಗೆ ನುಂಗಲಾರದ ತುತ್ತಾಗಿದೆ. ಯಡಿಯೂರಪ್ಪ ಅವರನ್ನು ಸುಲಭವಾಗಿ ಪರಿಗಣಿಸಲು ಸಾಧ್ಯವಿಲ್ಲವೆಂಬ ಸಂದೇಶ ಹೈಕಮಾಂಡ್​ಗೆ ರವಾನೆಯಾಗಿದೆ. ಇದರಿಂದಾಗಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ಪ್ರಕ್ರಿಯೆ ಕಷ್ಟವೆಂಬುದು ವರಿಷ್ಠರಿಗೆ ಮನವರಿಕೆಯಾಗಿದೆ.
ಪಕ್ಷ ನನಗೆ ಮಾತೃಸಮಾನ, ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ರಾಜಕೀಯ ಬೆಳವಣಿಗೆಯನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದು. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆ ಎಂದು ನಂಬಿರುವೆ.
ಶಾಸಕರಿಗೆ ಔತಣಕೂಟ ದಿಢೀರ್ ಮುಂದಕ್ಕೆ:ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕರಿಗೆ ಏರ್ಪಡಿಸಿದ್ದ ಔತಣ ಕೂಟ ದಿಢೀರ್ ಮುಂದೂಡಿಕೆಯಾಗಿದೆ. ಬಿಜೆಪಿ ಸರ್ಕಾರ ಜು.26ರಂದು ಎರಡು ವರ್ಷ ಪೂರ್ಣಗೊಳಿಸಲಿರುವ ಹಿನ್ನೆಲೆಯಲ್ಲಿ ಜು.25ರ ರಾತ್ರಿ 7ಕ್ಕೆ ಹೋಟೆಲ್ ಷಾಂಗ್ರಿಲಾದಲ್ಲಿ ಶಾಸಕರಿಗೆ ಭೋಜನ ಕೂಟಕ್ಕೆ ವ್ಯವಸ್ಥೆಯಾಗಿತ್ತು. ಈ ಮೊದಲು ಜು.26ರಂದು ಶಾಸಕಾಂಗ ಪಕ್ಷದ ಸಭೆ ಕರೆಯುವುದಾಗಿ ಹೇಳಿದ್ದರು. ಬಳಿಕ ಶಾಸಕರಿಗೆ ಔತಣ ಕೂಟವೆಂದು ಬದಲಾಯಿಸಿ ಜು.25ಕ್ಕೆ ಆಯೋಜಿಸಲು ನಿರ್ಧರಿಸಲಾಗಿತ್ತು. ಇದೀಗ ಬಿಎಸ್​ವೈ ಸೂಚನೆಯಂತೆ ಔತಣ ಕೂಟ ಮುಂದೂಡಿರುವುದನ್ನು ಸಿಎಂ ಕಚೇರಿ ಮೂಲಗಳು ಖಚಿತಪಡಿಸಿದ್ದು, ಆ.6ಕ್ಕೆ ಔತಣಕೂಟ ಆಯೋಜಿಸುವ ಸಾಧ್ಯತೆಗಳಿವೆ.
ಬಿಎಸ್​ವೈ ಜು.25ರಂದು 10 ಶಾಸಕರೊಂದಿಗೆ ವಿಡಿಯೋ ಸಂವಾದ ನಡೆಸಲಿರುವ ಹಿನ್ನೆಲೆಯಲ್ಲಿ ಔತಣಕೂಟ ಮುಂದೂಡಲಾಗಿದೆಂಬುದು ಮೇಲ್ನೋಟದ ಕಾರಣ. ಆದರೆ ನಾಯಕತ್ವ ಬದಲಾವಣೆ ಕುರಿತು ಊಹಾಪೋಹ, ಬಹಿರಂಗ ಚರ್ಚೆಗಳು ನಡೆದಿರುವ ಈ ಸಂದರ್ಭದಲ್ಲಿ ಶಾಸಕರಿಗೆ ಔತಣ ಕೂಟ ಏರ್ಪಡಿಸಿದರೆ ತಪು್ಪ ಸಂದೇಶ ರವಾನೆಯಾಗಲಿದೆ. ಅಲ್ಲದೆ, ಎರಡನೇ ವರ್ಷದ ಸಂಭ್ರಮ ಬದಲಿಗೆ ನಾಯಕತ್ವದ ಬದಲಾವಣೆ ಚರ್ಚೆಗೆ ಮತ್ತಷ್ಟು ರೆಕ್ಕೆ- ಪುಕ್ಕ ಮೂಡಲಿದೆ. ಹೀಗಾಗಿ ಔತಣ ಕೂಟದಲ್ಲಿ ಪಾಲ್ಗೊಳ್ಳಲು ಬಹುತೇಕ ಶಾಸಕರು ಹಿಂದೇಟು ಹಾಕಬಹುದು ಎಂಬ ಕಾರಣಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ಹೇಳಿವೆ. ಸಂಪುಟ ಸಭೆ ಮುಗಿಸಿ ಶಿವಮೊಗ್ಗ ಪ್ರವಾಸ ಹೋಗಬೇಕಾಗಿತ್ತು. ಇದನ್ನೂ ರದ್ದು ಮಾಡಲಾಗಿದೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:seven − 4 =
Remember me
