ಉತ್ತರಪ್ರದೇಶ:ಉತ್ತರಪ್ರದೇಶದ(Uttarpradesh)ಬರ್ಸಾನಾದಲ್ಲಿರುವ ರಾಧಾರಾಣಿ ದೇವಸ್ಥಾನದ ಆಡಳಿತ ಮಂಡಳಿ ಶಾರ್ಟ್ಸ್, ಮಿನಿ ಸ್ಕರ್ಟ್‌ಗಳನ್ನು ಧರಿಸಿ ಬರುವ ಭಕ್ತರಿಗೆ ಇದೀಗ ಪ್ರವೇಶವನ್ನು ನಿರ್ಬಂಧಿಸಿದೆ.
ಇದನ್ನೂ ಓದಿ:ನಿಮ್ಮ ಮೂಳೆಗಳು ಗಟ್ಟಿಮುಟ್ಟಾಗಿ ಇರಬೇಕಾ? ಹಾಗಾದರೆ ಈ ಹಣ್ಣುಗಳನ್ನು ಸೇವಿಸಿ…
ದೇವಸ್ಥಾನದ ಆಡಳಿತ ಮಂಡಳಿ ಹಾಫ್ ಪ್ಯಾಂಟ್, ಬರ್ಮುಡಾ ಶಾರ್ಟ್ಸ್ ಮತ್ತು ಮಿನಿ ಸ್ಕರ್ಟ್‌ಗಳನ್ನು ಧರಿಸಿ ದೇವಾಲಯದೊಳಗೆ ಪ್ರವೇಶಿಸುವ ಭಕ್ತರನ್ನು(Devotees)ನಿರ್ಬಂಧಿಸುವ ನಿರ್ದೇಶನವನ್ನು ಇತ್ತೀಚೆಗೆ ಪ್ರಕಟಿಸಿದೆ. ಅತೀ ಮುಖ್ಯವಾಗಿ ರಾತ್ರಿ ಧರಿಸುವ ನೈಟ್ ಪ್ಯಾಂಟ್ ಮತ್ತು ಹರಿದ ಜೀನ್ಸ್ ಬಟ್ಟೆಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.
ಗುರುವಾರ ದೇವಸ್ಥಾನದ ಹೊರಗೆ ಅಂಟಿಸಲಾದ ಪೋಸ್ಟರ್ ಪ್ರಕಾರ, ಈ ಆದೇಶವು ಒಂದು ವಾರದಲ್ಲಿ ಜಾರಿಗೆ ಬರಲಿದೆ ಎಂದು ದೇವಸ್ಥಾನದ ಅಧಿಕಾರಿ ರಾಸ್ಬಿಹಾರಿ ಗೋಸ್ವಾಮಿ ಅವರು ಸ್ಥಳೀಯ ಸುದ್ದಿಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಕೆಲವು ತಿಂಗಳ ಹಿಂದೆ ಮಥುರಾದ(Mathura)ರಾಧಾ ದಾಮೋದರ್ ದೇವಾಲಯವು ಅಂತಹ ಬಟ್ಟೆಗಳನ್ನು ಧರಿಸುವ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದ ನಂತರ ಈ ಸುತ್ತೋಲೆ ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿ:ಪರಮೇಶ್ವರ್​ ಗೃಹ ಖಾತೆಯನ್ನು ಪ್ರಿಯಾಂಕ ಖರ್ಗೆಗೆ ಲೀಸ್​ ಕೊಟ್ಟಿದ್ಧಾರೆ: ನಳಿನ್​ ಕುಮಾರ್​ ಕಟೀಲ್​
ಇತ್ತೀಚಿಗೆ ಶಿಮ್ಲಾದ ಶತಮಾನಗಳಷ್ಟು ಹಳೆಯದಾದ ಜೈನ ದೇವಾಲಯವು ಕೂಡ ಭಕ್ತರಿಗೆ ತುಂಡುಡುಗೆ ಧರಿಸಿ ಬರುವ ಭಕ್ತರ ಪ್ರವೇಶವನ್ನು ನಿರ್ಬಂಧಿಸಿದೆ. ಈ ಬಗ್ಗೆ ಮಾತನಾಡಿರುವ ದೇವಾಲಯದ ಅಧಿಕಾರಿಗಳು, ಹಿಂದೂ ಸಂಸ್ಕೃತಿಯ ಶಿಸ್ತು, ಸಜ್ಜನಿಕೆ ಮತ್ತು ಮೌಲ್ಯಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ನಿಯಮಗಳನ್ನು ಜಾರಿ ಮಾಡಿದ್ದೇವೆ ಎಂದು ಹೇಳುವ ಮುಖೇನ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ,(ಏಜೆನ್ಸೀಸ್).

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + fourteen =
Remember me
