ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿಗೆ ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕೆಂದು ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಸ್ಥಳಿಯ ನ್ಯಾಯಾಲಯದ ನ್ಯಾ. ರಾಜೀವ್​ ಭಾರತಿ ಒಪ್ಪಿಗೆ ಸೂಚಿಸಿದ ತೀರ್ಪು ಪ್ರಕಟಿಸಿದ್ದಾರೆ. ಕೃಷ್ಣ ಜನ್ಮಸ್ಥಾನ ಹಾಗೂ ಮಂದಿರದ ಭೂಮಿಯನ್ನು ಅತಿಕ್ರಮಿಸಿಕೊಂಡ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಅಜಿರ್ದಾರರು ಆರೋಪಿಸಿದ್ದಾರೆ.
17ನೇ ಶತಮಾನದ ಶಾಹಿ ಈದ್ಗಾ ಮಸೀದಿಯನ್ನು ಈ ಸ್ಥಳದಿಂದ ತೆರವುಗೊಳಿಸಬೇಕು. ಈದ್ಗಾ ಮಸೀದಿಯನ್ನು 1669&70ರಲ್ಲಿ ಮೊಲ್​ ಚಕ್ರವತಿರ್ ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಭೂಮಿಯಲ್ಲಿ ನಿಮಿರ್ಸಲಾಗಿದೆ ಎಂದು ಅಜಿರ್ಯಲ್ಲಿ ವಿವರಿಸಲಾಗಿದೆ. ಲಖನೌ ನಿವಾಸಿ ರಂಜನಾ ಅಗ್ನಿಹೋತ್ರಿ ಅವರು ಮಥುರಾದ ಕೇಶವ್​ ದೇವ ದೇವಸ್ಥಾನದ ಬಾಲ ಭಗವಾನ್​ ಕೃಷ್ಣನ ಸ್ನೇಹಿತ ಎಂದು ಅಜಿರ್ ಸಲ್ಲಿಸಿದ್ದರು. ಕೃಷ್ಣನ ಆರಾಧಕರಾದ ನಮಗೆ ಅವರ ಆಸ್ತಿಯನ್ನು ಮರು ಸ್ಥಾಪಿಸುವಂತೆ ಕೋರಿ ಮೊಕದ್ದಮೆ ಹೂಡುವ ಹಕ್ಕಿದೆ. ಜನ್ಮಭೂಮಿಯ ಮೇಲೆ ಮಸೀದಿ ನಿಮಿರ್ಸಿರುವು ತಪ್ಪು. ಆಸ್ತಿ ಹಂಚಿಕೆ ವಿಚಾರದಲ್ಲಿ ಹಲವು ವರ್ಷಗಳ ಹಿಂದೆಯೇ ರಾಜಿ ಮಾಡಿಕೊಳ್ಳಲಾಗಿತ್ತು. ಆದರೆ ಆ ರಾಜಿಯು ಕಾನೂನುಬಾಹಿರವಾಗಿದೆ ಎಂದು ಅಜಿರ್ದಾರರ ಪರ ವಕೀಲ ಗೋಪಾಲ್​ ಖಂಡೇಲ್ವಾಲ್​ ಹೇಳಿದ್ದಾರೆ.
ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿವಾದಿತ ಸ್ಥಳದ ಉತ್ಖನನ ನಡೆಸಬೇಕು ಮತ್ತು ಉತ್ಖನನದ ತನಿಖಾ ವರ ಸಲ್ಲಿಸಬೇಕು ಎಂದು ಅಜಿರ್ಯಲ್ಲಿ ಒತ್ತಾಯಿಸಲಾಗಿದೆ. ಮಥುರಾದ ಸಿವಿಲ್​ ನ್ಯಾಯಾಲಯವು 1991ರ ಆರಾಧನಾ ಸ್ಥಳಗಳ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಈ ಹಿಂದೆ ವಜಾಗೊಳಿಸಿತ್ತು. ಮಥುರಾದ ಸೆಷನ್ಸ್​ ನ್ಯಾಯಾಲಯದಲ್ಲಿ ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಮೇ 6 ರಂದು ಕೊನೆಗೊಂಡಿತ್ತು. ರಂಜನಾ ಅಗ್ನಿಹೋತ್ರಿ ಮತ್ತು ಇತರ ಆರು ಮಂದಿ ಕಳೆದ ವರ್ಷ ಸಿವಿಲ್​ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪ್ರಕರಣದಲ್ಲಿ ಜನ್ಮಸ್ಥಾನದ ಮೇಲೆ ಹಕ್ಕನ್ನು ಕೋರಿ ಅಜಿರ್ ಸಲ್ಲಿಸಿದ್ದರು. ಸುನ್ನಿ ಸೆಂಟ್ರಲ್​ ವಕ್ಫ್​ ಬೋರ್ಡ್​, ಶಾಹಿ ಈದ್ಗಾ ಮಸೀದಿ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್​ ಮತ್ತು ಶ್ರೀಕೃಷ್ಣ ಜನ್ಮಭೂಮಿ ಸೇವಾ ಸಂಸ್ಥಾನವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + fourteen =
Remember me
