ಮುಂಬೈ:ದಶಕಗಳಿಂದಲೂ ಪೊಲೀಸರಿಗೆ ಸವಾಲಾಗಿದ್ದ ಮಟ್ಕಾ ದಂಧೆಗೆ ಬ್ರೇಕ್​ ಬಿದ್ದಿದ್ದೇ ಲಾಕ್​ಡೌನ್​ ಸಮಯದಲ್ಲಿ. ಅಪ್ಪಟ ನಗದು, ಬಿಳಿಹಾಳೆಯ ತುಂಡು ಚೀಟಿಗಳಲ್ಲಿ ನಡೆಯುತ್ತಿದ್ದ ಮಟ್ಕಾ ವ್ಯವಹಾರ ಸದ್ಯ ಅಕ್ಷರಶ: ನಿಂತು ಹೋಗಿದೆ. ಜತೆಗೆ, ಮಟ್ಕಾ ಕಿಂಗ್​ ಎಂದೇ ಕುಖ್ಯಾತನಾಗಿದ್ದ ರತನ್​ ಖತ್ರಿ ಕೂಡ ಇನ್ನಿಲ್ಲವಾಗಿದ್ದಾನೆ.
ಮುಂಬೈನ ನವ್​ಜೀವನ್​ ಸೊಸೈಟಿ ಪ್ರದೇಶದಲ್ಲಿ ನೆಲೆಸಿದ್ದ ರತನ್​ ಖತ್ರಿ(88) ಭಾನುವಾರ (ಮೇ10) ಮೃತಪಟ್ಟಿದ್ದಾನೆ. ಅಲ್ಲಿಗೆ ಓಪನ್​ ಕ್ಲೋಸ್​ ದಂಧೆಯ ‘ರಾಜ’ ಮರೆಯಾಗಿದ್ದಾನೆ.
ಖತ್ರಿ, ಪಾಕಿಸ್ತಾನದ ಕರಾಚಿಯಿಂದ ಆಗಮಿಸಿದ್ದ ಸಿಂಧಿ ಕುಟುಂಬಕ್ಕೆ ಸೇರಿದವನು. 1947ರ ದೇಶ ವಿಭಜನೆಯ ಸಮಯದಲ್ಲಿ ಈತನಿಗೆ ಹದಿಹರೆಯ. ದೇಶದಲ್ಲಿ ಬೆಟ್ಟಿಂಗ್​ ದಂಧೆ ಬೆಳೆಯಲು ಕಾರಣರಾದವರಲ್ಲಿ ಈತನೂ ಪ್ರಮುಖ. ನಂತರದಲ್ಲಿ ಇದು ಮಟ್ಕಾ ದಂಧೆಯಾಗಿ ರೂಪುಗೊಂಡಿತು. ದೇಶದಲ್ಲೇ ಅತ್ಯಂತ ದೊಡ್ಡ ದಂಧೆಯಾಗಿ ರೂಪುಗೊಂಡಿತು. ಇದರ ಜಾಲವನ್ನು ದೇಶದೆಲ್ಲೆಡೆ ವಿಸ್ತರಿಸುವಲ್ಲಿ ಖತ್ರಿ ಯಶಸ್ವಿಯಾದ. ಜತೆಗೆ ಹಲವು ದಶಕಗಳವರೆಗೆ ಇದರ ಮೇಲೆ ಅಧಿಪತ್ಯ ಸಾಧಿಸಿದ್ದ.
ಇದನ್ನೂ ಓದಿ;ತಬ್ಲಿಘಿಗಳನ್ನು ಭಯೋತ್ಪಾದಕರಂತೆ ಕಾಣಬೇಕು ಎಂದಿದ್ಯಾರು?
ಖತ್ರಿ ಆರಂಭದಲ್ಲಿ ಕಲ್ಯಾಣ್​ಜೀ ಭಗತ್​ ಜತೆಗೆ ಮಟ್ಕಾ ಆರಂಭಿಸಿದ. ಆದರೆ, ಕೆಲ ಸಮಯದ ನಂತರ ಆತನಿಂದ ದೂರವಾಗಿ ತನ್ನದೇ ಆದ ರತನ್​ ಮಟ್ಕಾ ಆರಂಭಿಸಿದ. ಇದು ಹಣದ ಮಳೆಯನ್ನೇ ಸುರಿಸಿತು. ಆ ಸಮಯದಲ್ಲೇ ದಿನಕ್ಕೆ ಒಂದು ಕೋಟಿ ರೂ.ವರೆಗೆ ವಹಿವಾಟು ನಡೆಯುತ್ತಿತ್ತು ಎಂದು ಅಂದಾಜಿಸಲಾಗಿದೆ. 1990ರ ವರರೆಗೂ ಮಟ್ಕಾ ದಂಧೆಯಲ್ಲಿ ಖತ್ರಿ ಸಕ್ರಿಯವಾಗಿದ್ದ. ಪೊಲೀಸ್ ದಾಳಿ ನಡೆಸಿ ಇದನ್ನು ನಿಯಂತ್ರಿಸುವಲ್ಲಿ ಯಶಸ್ಸು ಕಂಡರು.
ಆದರೆ, ರತನ್​ಲಾಲ್​ ಬಗ್ಗೆ ಹಲವು ಕತೆಗಳು ಹುಟ್ಟಿಕೊಂಡಿದ್ದವು. ಪೊಲೀಸರ ಮೂಗಿನಡಿಯಲ್ಲಿಯೇ ಈ ದಂಧೆ ನಡೆಯುತ್ತಿದ್ದರಿಂದ ‘ಖತ್ರಿಲಾಲ್​ನನ್ನು ಹಿಡಿಯಲು ಹೋದ ಪೊಲೀಸರು ಈವರೆಗೂ ವಾಪಸ್​ ಬಂದಿಲ್ಲ. ಖತ್ರಿಲಾಲ್​ ಎಲ್ಲಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ… ಹೀಗೆ ಜನರ ಬಾಯಲ್ಲಿ ಸುದ್ದಿಗಳು ಹರಿದಾಡುತ್ತಿದ್ದವು.
ಇದನ್ನೂ ಓದಿ;ಕರೊನಾ ಲಸಿಕೆ ಸಂಶೋಧನೆ ಮಾಹಿತಿಗೆ ಚೀನಾ ಹ್ಯಾಕರ್​ಗಳಿಂದ ಕನ್ನ…!
ಗ್​ಪಿನ್​ಗಳು ಹುಟ್ಟಿಕೊಂಡಿದ್ದರು. ಅವರದ್ದೇ ಆದ ಮಟ್ಕಾ ದಂಧೆಗಳನ್ನು ಆರಂಭಿಸಿದ್ದರು. ಸದ್ಯ ಆಯಾ ಪ್ರದೇಶಗಳಿಗೆ ಸೀಮಿತವಾಗಿ ಈ ದಂಧೆ ಚಾಲ್ತಿಯಲ್ಲಿದೆ. ಆದರೆ, ಲಾಕ್​ಡೌನ್​ ಕಾರಣದಿಂದಾಗಿ ಮಟ್ಕಾ ನಿಂತು ಹೋಗಿ ಬುಕ್ಕಿಗಳು ತರಕಾರಿ, ಹಣ್ಣು ಮಾರಾಟದಂತ ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ.
ಮಟ್ಕಾ ದಂಧೆ ಹೇಗೆ ನಡೆಯುತ್ತೆ:ಇದು ಎರಡು ಅಂಕಿಗಳ ಆಟ. ಆರಂಭದ ಸಂಖ್ಯೆಯನ್ನು ಓಪನ್​, ಎರಡನೇ ಸಂಖ್ಯೆಯನ್ನು ಕ್ಲೋಸ್​ ಎಂದು ಕರೆಯಲಾಗುತ್ತದೆ. ಹೀಗಾಗಿ ಇದನ್ನು ಓಸಿ ಎಂದು ಕರೆಯಲಾಗುತ್ತದೆ. ಗೆದ್ದರೆ ಒಂದು ರೂಪಾಯಿಗೆ ಎಂಬತ್ತು ರೂ. ನೀಡಲಾಗುತ್ತದೆ. ಆರಂಭದಲ್ಲಿ ನ್ಯೂಯಾರ್ಕ್​ ಕಾಟನ್​ ಮಾರ್ಕೆಟ್​ನಲ್ಲಿ ಆರಂಭಿಕ ಹಾಗೂ ಅಂತ್ಯದ ದರ ಆಧರಿಸಿ ಬಹುಮಾನದ ಎರಡು ಅಂಕಿಗಳನ್ನು ಗುರುತಿಸಲಾಗುತ್ತಿತ್ತು. ಬಳಿಕ ಆಯಾ ಮಟ್ಕಾ ದಂಧೆಕೋರರು ತಮ್ಮದೇ ಅಂಕಿಗಳನ್ನು ನೀಡುತ್ತಾರೆ. ಗ್ರಾಹಕರಿಗೆ ಅವರು ಬಯಸುವ ಅಂಕಿಗಳನ್ನು ಬಿಳಿ ಹಾಳೆಯ ಚೀಟಿಗಳ ಮೇಲೆ ಬರೆದು ಹಣ ಕಟ್ಟಿಸಿಕೊಳ್ಳಲಾಗುತ್ತದೆ. ಗೆದ್ದರೆ, ಸ್ಥಳದಲ್ಲಿಯೇ ನಗದು ಹಣ ನೀಡಲಾಗುತ್ತದೆ. ಈ ಕಾರಣಕ್ಕೆ ಜನಪ್ರಿಯತೆ ಪಡೆದು, ಪಿಡುಗಾಗಿ ಪರಿಣಮಿಸಿತ್ತು. ಸಾವಿರಾರು ಜನರು ಮಟ್ಕಾದಿಂದಾಗಿ ಮನೆ, ಆಸ್ತಿ ಕಳೆದುಕೊಂಡಿದ್ದಾರೆ.
ಕರೊನಾದೊಂದಿಗೆ ಬದುಕಲು ಕಲಿಯಿರಿ, ಇನ್ನೆರಡು ವರ್ಷ ಲಸಿಕೆ ಅನುಮಾನ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
