ಹೈದರಾಬಾದ್​:ತೆಲುಗು ಮ್ಯಾಟ್ರಿಮೋನಿಯಲ್ ವೆಬ್​ಸೈಟ್​ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಅನಿವಾಸಿ ಭಾರತೀಯರಿಗೆ ಗಾಳ ಹಾಕಿ ವಂಚಿಸುತ್ತಿದ್ದ ವಂಚಕಿಯನ್ನು ಹೈದರಾಬಾದ್​ನ ರಾಚಕೊಂಡ ಪೊಲೀಸರು ಬಂಧಿಸಿದ್ದಾರೆ.
ಕೊರೆಮ್​ ಸ್ವಾತಿ ಬಂಧಿತ ಆರೋಪಿ. ಈಕೆ ಆಂಧ್ರಪ್ರದೇಶದ ನೆಲ್ಲೊರ್​ ಮೂಲದವಳು. ಅನೇಕ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡಿರುವ ಈಕೆ ಅರ್ಚನಾ, ಜುಟೂರಿ ವರಪ್ರಸಾದ್ ಅರ್ಚನಾ, ಜುಟೂರಿ ಇಂದಿರಾ ಪ್ರಿಯದರ್ಶಿನಿ ಮತ್ತು ಪುಷ್ಟೈ ಸೇರಿದಂತೆ ಮುಂತಾದ ಹೆಸರುಗಳಲ್ಲಿ ವಂಚಿಸಿದ್ದಾಳೆ. ಎಸ್​ವಿ ಯೂನಿವರ್ಸಿಟಿಯಲ್ಲಿ ಎಂಬಿಎ ಪೂರ್ಣಗೊಳಿಸಿರುವ ಸ್ವಾತಿ, ನೆಲ್ಲೊರ್​ನ ರಂಗನಾಯಕುಲುಪೇಟಾದ ಮೂಲದ ಪ್ರಾಧ್ಯಾಪಕ ಕೊರಮ್​ ದುರ್ಗಾ ಪ್ರವೀಣ್​ ಎಂಬಾತನ್ನು ಮದುವೆ ಆಗಿದ್ದಳು.
ಮದುವೆ ಆಗುವುದಾಗಿ ನಂಬಿಸಿ ಅನೇಕರಿಗೆ ವಂಚನೆ ಮಾಡಿರುವ ಅನೇಕ ಪ್ರಕರಣಗಳಲ್ಲಿ ರಾಚಕೊಂಡ ಮತ್ತು ಹೈದರಾಬಾದ್​ ಸೈಬರ್​ ಕ್ರೈಂ ಪೊಲೀಸರು ಈಗಾಗಲೇ ಅನೇಕ ಬಾರಿ ಸ್ವಾತಿಯನ್ನು ಬಂಧಿಸಿದ್ದಾರೆ. ಜೈಲಿಗೂ ಹೋಗಿದ್ದ ಆಕೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ ತನ್ನ ದುರ್ಬುದ್ಧಿಯನ್ನು ಮಾತ್ರ ನಿಲ್ಲಿಸಿಲ್ಲ.
ಇದನ್ನೂ ಓದಿರಿ:VIDEO: 21ನೇ ವಯಸ್ಸಿಗೆ ಡಿಎಸ್‌ಪಿ ಹುದ್ದೆ ಸ್ವೀಕರಿಸಿದ ಸ್ಟಾರ್ ಅಥ್ಲೀಟ್ ಹಿಮಾ ದಾಸ್
ಪೊಲೀಸ್​ ಮೂಲಗಳ ಪ್ರಕಾರ ಸ್ವಾತಿ ತೆಲುಗು ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ಗೂಗಲ್​ನಿಂದ ಡೌನ್​ಲೋಡ್​ ಮಾಡಿದಂತಹ ನಕಲಿ ಫೋಟೋಗಳನ್ನು ಬಳಸಿ ಪ್ರೊಫೈಲ್​ ಸೃಷ್ಟಿಸುತ್ತಿದ್ದಳು. ಕೇವಲ ವಿದೇಶದಲ್ಲಿ ನೆಲೆಸಿದ್ದವರಿಗೆ ಮಾತ್ರ ಬಲೆ ಬೀಸುತ್ತಿದ್ದಳು. ನಕಲಿ ವಿದೇಶಿ ಫೋನ್​ ನಂಬರ್​ ಸಹ ಪ್ರೊಫೈಲ್​ನಲ್ಲಿ ಉಲ್ಲೇಖಿಸಿದ್ದಳು. ಅನೇಕರು ಫೋಟೋ ನೋಡಿ ಆಕೆಯೊಂದಿಗೆ ಕರೆ ಮಾಡಿ ಮಾತನಾಡುವಾಗ ಧ್ವನಿ ಏರಿಳಿತ ಸಾಫ್ಟ್​ವೇರ್​ ಬಳಸಿ ಎಲ್ಲರನ್ನು ಯಾಮಾರಿಸುತ್ತಿದ್ದಳು. ಎನ್​ಆರ್​ಐ ಮತ್ತು ಅವರ ಪಾಲಕರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಂತೆ ಅವರ ಮದುವೆ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುತ್ತಿದ್ದಳು.
ಇದಾದ ಬಳಿಕ ತಾನು ಅಮೆರಿಕದಿಂದ ಕೆಲ ಕೆಲಸದ ಮೇಲೆ ಭಾರತಕ್ಕೆ ಭೇಟಿ ನೀಡಿರುವುದಾಗಿ ಬುರುಡೆ ಬಿಡುತ್ತಿದ್ದಳು. ಯಾವಾಗ ವರನ ಕಡೆಯವರು ಭೇಟಿ ಮಾಡಬೇಕೆಂದು ಕೇಳಿದಾಗ ಏನೇನೋ ಕಾರಣ ಹೇಳಿ ಅವರಿಂದ ಹೆಚ್ಚಿನ ಪಡೆದುಕೊಂಡ ಬಳಿಕ ಅವರ ಫೋನ್​ ಕರೆಗೆ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸುತ್ತಿದ್ದಳು.
ಹೀಗೆ ಅನೇಕರಿಗೆ ಈಕೆ ವಂಚಿಸಿದ್ದು, ಕೆಲವರು ನೀಡಿದ ದೂರಿನ ಮೇರೆಗೆ ವಂಚಕಿ ಸ್ವಾತಿಯನ್ನು ರಾಚಕೊಂಡ ಪೊಲೀಸರು ಬಂಧಿಸಿ ಮತ್ತೊಮ್ಮೆ ಜೈಲಿಗೆ ಕಳುಹಿಸಿದ್ದಾರೆ.(ಏಜೆನ್ಸೀಸ್​)
600 ವಿಕೆಟ್‌ಗಳ ಸರದಾರ ಅಶ್ವಿನ್ ಕ್ರಿಕೆಟಿಗನಾಗಿದ್ದು ಆಕಸ್ಮಿಕವಂತೆ!

“ಕೆಂಪುಕೋಟೆಗೆ ಹೋಗಲು ನಾನು ಯಾರಿಗೂ ಹೇಳಿಲ್ಲ” : ಕೋರ್ಟ್​ ಮುಂದೆ ದೀಪ್ ಸಿಧು

ಬೆಳಗಾವಿ, ಮಸ್ಕಿ, ಬಸವಕಲ್ಯಾಣ, ಸಿಂದಗಿ ಉಪ ಚುನಾವಣೆಗೆ ಪ್ರತ್ಯೇಕ ಅಧಿಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 20 =
Remember me
