ವಾರಾಣಸಿ:ನಿಯಮಿತ ಲಗೇಜ್​ಗಿಂತ ಹೆಚ್ಚು ಲಗೇಜ್​ ಹೊಂದಿದ್ದ ಕಾರಣ ಏರ್​ ಇಂಡಿಯಾದ ಸಿಬ್ಬಂದಿ ಮಾರಿಷಸ್​ ದೇಶದ ಅಧ್ಯಕ್ಷರಿಗೇ ವಿಮಾನವನ್ನು ಹತ್ತುವುದಕ್ಕೆ ಅನುಮತಿ ನೀಡಿಲ್ಲ. ವಾರಾಣಸಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಲಗೇಜ್​ಗೆ ಶುಲ್ಕ ಪಾವತಿಸಿದ ನಂತರವೇ ವಿಮಾನ ಹತ್ತುವಂತೆ ಪೃಥ್ವಿರಾಜ್​ಸಿಂಗ್​ ರೂಪನ್​ ಅವರನ್ನು ತಡೆಹಿಡಿಯಲಾಗಿದೆ.
ಮಾರಿಷಸ್​ ದೇಶದ ಅಧ್ಯಕ್ಷರಾಗಿರುವ ಪೃಥ್ವಿರಾಜ್​ಸಿಂಗ್​ ಅವರು ಆರು ಜನರ ನಿಯೋಗದೊಂದಿಗೆ ವಾರಾಣಸಿಗೆ ಎರಡು ದಿನಗಳ ಪ್ರವಾಸಕ್ಕೆ ಬಂದಿದ್ದರು. ವಾರಾಣಸಿಯಿಂದ ದೆಹಲಿಗೆ ಹೊರಟ ಅವರನ್ನು ಏರ್​ ಇಂಡಿಯಾ ಸಿಬ್ಬಂದಿಗಳು ತಡೆದಿದ್ದಾರೆ. ಅವರ ಬಳಿ ಹೆಚ್ಚಿನ ಲಗೇಜ್​ ಇದ್ದ ಕಾರಣ ಅದಕ್ಕೆ ಶುಲ್ಕ ಪಾವತಿಸಿದ ನಂತರವೇ ಅವರಿಗೆ ವಿಮಾನ ಹತ್ತಲು ಅನುಮತಿ ನೀಡುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ವಿಮಾನ ನಿಲ್ದಾಣದ ನಿರ್ದೇಶಕ ಆಕಾಶ್​ದೀಪ್​ ಮಥೂರ್​ ಸ್ಥಳಕ್ಕೆ ಬಂದಿದ್ದು, ಅತಿಥಿಗಳಿಗೆ ವಿಮಾನದಲ್ಲಿ ತೆರಳಲು ಅವಕಾಶ ಮಾಡಿಕೊಡುವಂತೆ ಸಿಬ್ಬಂದಿಗೆ ತಿಳಿಸಿದ್ದಾರೆ. ಹಾಗಿದ್ದರೂ ಸಿಬ್ಬಂದಿ ನಿಯಮ ಪಾಲನೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಏವಿಯೇಷನ್​ ಸಚಿವ ಮತ್ತು ಏರ್​ ಇಂಡಿಯಾದ ಹಿರಿಯ ಅಧಿಕಾರಿಗಳು ಸಿಬ್ಬಂದಿಯ ಬಳಿ ಅತಿಥಿಗಳಿಗೆ ಹೆಚ್ಚಿನ ಶುಲ್ಕ ವಿಧಿಸದಿರುವಂತೆ ಹೇಳಿದ ನಂತರವೇ ಅತಿಥಿ ನಿಯೋಗಕ್ಕೆ ವಿಮಾನ ಹತ್ತಲು ಅನುಮತಿ ನೀಡಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 4 =
Remember me
