ಬೆಂಗಳೂರು:ನಾಲ್ಕು ವರ್ಷದ ಮಗಳ ತಾಯಿ ಈಗ ಮಿಸೆಸ್​ ಇಂಡಿಯಾ – ಪ್ರೈಡ್ ಆಫ್ ನೇಷನ್​ ಎನಿಸಿಕೊಂಡಿದ್ದಾರೆ. ಅಂದರೆ ಮಾವಿಸ್​ ನಾರ್ಟನ್​ ಅವರು ತಾಯಿಯಾದ ಮೇಲೂ ಸ್ಪರ್ಧಿಸಿ 2021ರ ಮಿಸೆಸ್​ ಇಂಡಿಯಾ – ಪ್ರೈಡ್​ ಆಫ್ ನೇಷನ್ ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಅಪ್​ ಆಗಿದ್ದಾರೆ.
ಕತಾರ್ ಏರ್​ವೇಸ್​​ನಲ್ಲಿ ಫ್ಲೈಟ್​ ಅಟೆಂಡೆಂಟ್​ ಆಗಿರುವ ಇವರು ನಿವೃತ್ತ ಕರ್ನಲ್​ ವಿಜಯ್ ಶರೋತ್ರಿ ಅವರ ಸೊಸೆ. ಮಾವಿಸ್ ಅವರು ಕತಾರ್ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದು, ಪತಿಯೂ ಬೆಂಗಳೂರಿನಲ್ಲಿ ಪೈಲಟ್ ಆಗಿರುತ್ತಾರೆ. ಮುಂಬೈನ ಬಾಂದ್ರಾದ ಸೇಂಟ್ ಆಂಡ್ರೂಸ್​ನಲ್ಲಿ ಶಿಕ್ಷಣ ಪೂರ್ಣಗೊಳಿಸಿದ ಮಾವಿಸ್ 21ನೇ ವಯಸ್ಸಿನಲ್ಲಿ ಕತಾರ್ ಏರ್‌ವೇಸ್‌ನಲ್ಲಿ ಫ್ಲೈಟ್​ ಅಟೆಂಡೆಂಟ್​ ಆಗಿ ಸೇರಿದ್ದಾರೆ. ಪ್ರಮಾಣೀಕೃತ ಸಮಗ್ರ ಆರೋಗ್ಯ ಹಾಗೂ ಕ್ಷೇಮ ತರಬೇತುದಾರರಾಗಿರುವ ಇವರು ಮಹಿಳೆಯರ ಅಂಗಸೌಷ್ಠವ ಸಮಸ್ಯೆ ಹಾಗೂ ಪ್ರಸವಾನಂತರದ ಖಿನ್ನತೆಯಿಂದ ಬಳಲುತ್ತಿರುವ ತಾಯಂದಿರನ್ನು ಸಬಲೀಕರಣಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.
ನನ್ನ ತಾಯಿಗೆ ಮೂವರು ಹೆಣ್ಣುಮಕ್ಕಳು, ಅಮ್ಮ ನನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಸದಾ ಹುರಿದುಂಬಿಸುತ್ತಿದ್ದರು. ನಾನು ಯಾವಾಗಲೂ ಇಂಥದ್ದೊಂದು ವೇದಿಕೆಯಲ್ಲಿ ಭಾಗಿಯಾಗಲು ಬಯಸುತ್ತಿದ್ದೆ. ಆದರೆ ಆ ವಯಸ್ಸಿನಲ್ಲಿ ನನಗೆ ನನ್ನ ಅಂಗಸೌಷ್ಠವ ಕೊರತೆ ಹಾಗೂ ನಾಚಿಕೆಯಿಂದಾಗಿ ಇಂಥದ್ದರಲ್ಲಿ ಭಾಗಿಯಾಗಲು ಅಷ್ಟು ಆತ್ಮವಿಶ್ವಾಸ ಇರಲಿಲ್ಲ. ಆದರೆ ನಾಲ್ಕು ವರ್ಷಗಳ ತಾಯ್ತನ ನನ್ನನ್ನು ಶಕ್ತಿಯುತವಾಗಿಸಿದ್ದಲ್ಲದೆ, ಏನನ್ನು ಬೇಕಾದರೂ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಹಾಗೂ ಧೈರ್ಯವನ್ನು ಮೂಡಿಸಿತು.

ಕೇವಲ ಒಂದು ಕನಸಿನೊಂದಿಗೆ ಪ್ರಾರಂಭವಾದದ್ದು ಇಂದು ಸುಂದರ ವಾಸ್ತವಾಂಶಕ್ಕೆ ರೂಪಾಂತರಗೊಂಡಿದೆ. ನೀವೂ ಅಷ್ಟೇ, ನಿಮ್ಮ ವೈವಾಹಿಕ ಸ್ಥಿತಿ ಹಾಗೂ ಸಮಾಜದ ಯಾವುದೇ ಅಭಿಪ್ರಾಯವನ್ನು ಲೆಕ್ಕಿಸದೆ ದೊಡ್ಡ ಸಾಧನೆಯನ್ನು ಮಾಡಲು ಸಮರ್ಥರಿದ್ದೀರಿ ಎಂಬ ನಂಬಿಕೆ ಹೊಂದಿರಿ.|ಮಾವಿಸ್​ ನಾರ್ಟನ್​ಮಿಸೆಸ್​  ಇಂಡಿಯಾ -ಪ್ರೈಡ್ ಆಫ್​ ನೇಷನ್​ 2021ರ ಫಸ್ಟ್​ ರನ್ನರ್​ ಅಪ್​
ನಾನು ನನ್ನ ನ್ಯೂನತೆಗಳನ್ನು ಅರಿಯಲು ಕಲಿತಿದ್ದೇನೆ. ನನ್ನ ದೇಹವನ್ನು ಗೌರವಿಸುತ್ತಿದ್ದೇನೆ ಹಾಗೂ ಹೆರಿಗೆಯ ಎಲ್ಲ ಕಷ್ಟಗಳನ್ನೂ ಎದುರಿಸಿದ್ದರಿಂದ ಆತ್ಮವಿಶ್ವಾಸ ಮೂಡಿತು. ಪರಿಣಾಮವಾಗಿ ಇಂಥ ಅದ್ಭುತ ಅವಕಾಶಗಳು ಹಾಗೂ ಸಾಹಸ ಪ್ರವೃತ್ತಿಯಿಂದ ತುಂಬಿರುವ ಈ ಪ್ರಯಾಣವನ್ನು ಆಶ್ಲೇಷಿಸುವುದೇ ಒಂದು ಪ್ರಮುಖವಾದ ವಿಷಯ ಎಂದು ಅವರು ಹೇಳಿಕೊಂಡಿದ್ದಾರೆ. ಕೆಲವೊಮ್ಮೆ ನಾವೇ ಗೋಡೆಗಳನ್ನು ನಿರ್ಮಿಸಿಕೊಳ್ಳುತ್ತೇವೆ. ಆದರೆ ಅವುಗಳನ್ನು ಮೆಟ್ಟಿ, ಅಡೆತಡೆಗಳನ್ನು ಮೀರಿ ಮುಂದುವರಿದಾಗ ನಮ್ಮ ಜೀವನದಲ್ಲಿ ಇಂಥ ಸುಂದರ ಸಂಗತಿಗಳು ಸಂಭವಿಸುತ್ತವೆ. ನಮ್ಮನ್ನು ನಾವು ನಂಬಿದಾಗ ಪವಾಡಗಳು ಆಗುತ್ತವೆ ಎಂದು ಮಾವಿಸ್​ ಪ್ರೋತ್ಸಾಹಕ ಮಾತುಗಳನ್ನು ಆಡಿದ್ದಾರೆ.
ಗ್ಲಾಮರ್​ ಗುರ್ಗಾಂವ್ ಸಂಸ್ಥೆಯ ನಿರ್ದೇಶಕಿ ಬರ್ಖಾ ನಂಗಿಯಾ ಅವರು ಈ ಮಿಸೆಸ್​ ಇಂಡಿಯಾ – ಪ್ರೈಡ್​ ಆಫ್​ ನೇಷನ್​ ಸ್ಪರ್ಧೆಯ ಸಂಸ್ಥಾಪಕರು. ಇವರು ನನಗೆ ಸ್ವಾತಂತ್ರ್ಯ ನೀಡುವ ಜತೆಗೆ ಸ್ಫೂರ್ತಿ ತುಂಬಿದ್ದಾರೆ. ಮಿಸೆಸ್​ ಇಂಡಿಯಾ – ಪ್ರೈಡ್ ಆಫ್​ ನೇಷನ್​ ಸ್ಪರ್ಧೆಯ ಪ್ರದರ್ಶನದ ಸಂಪೂರ್ಣ ತಂಡ ಹಾಗೂ ಗ್ಲಾಮರ್​ ಗುರ್ಗಾಂವ್​ನ ಪ್ರತಿಯೊಬ್ಬರೂ ನನ್ನ ಸಂಪೂರ್ಣ ಸಾಮರ್ಥ್ಯ ಅರಿತುಕೊಳ್ಳಲು ಸಹಕರಿಸಿದ್ದಕ್ಕೆ ನಾನು ಕೃತಜ್ಞಳು ಎಂದಿದ್ದಾರೆ ಮಾವಿಸ್.
ಕೊನೆಗೂ ಹೊರಬಿತ್ತು ಪುನೀತ್ ರಾಜಕುಮಾರ್ ಡೈರಿಯಲ್ಲಿದ್ದ ಆ ನಿರ್ಮಾಪಕರ ಹೆಸರು!

ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 5 =
Remember me
