ಹೊಸದಿಲ್ಲಿ:2024ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ತಮ್ಮ ಪಕ್ಷ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ ಬಹುಜನ ಸಮಾಜ ಪಕ್ಷ (BSP) ಮುಖ್ಯಸ್ಥೆ ಮಾಯಾವತಿ, ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಕೂಡ ಮಾತನಾಡಿದ್ದಾರೆ.
ಇದನ್ನೂ ಓದಿ:ನಾನು ಪ್ರಧಾನಿ ಮೋದಿ ಟೀಕಾಕಾರ, ಹೀಗಾಗಿ 3 ರಾಜಕೀಯ ಪಕ್ಷಗಳು ನನಗೆ ಟಿಕೆಟ್ ಆಫರ್ ಮಾಡಿವೆ: ನಟ ಪ್ರಕಾಶ್ ರಾಜ್
“ಬಿಎಸ್‌ಪಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಆದರೆ ಚುನಾವಣೋತ್ತರ ಮೈತ್ರಿಗೆ ಆಯ್ಕೆ ಮುಕ್ತವಾಗಿದೆ. ಉತ್ತರಪ್ರದೇಶದಲ್ಲಿ ನಮ್ಮ ಪಕ್ಷವು ಮತ್ತೊಂದು ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಿದಾಗ, ಮತಗಳು ಮೈತ್ರಿಗೆ ವರ್ಗಾವಣೆಯಾಗುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅರ್ಹರಿಗೆ ಅವಕಾಶ; ವಿಜಯೇಂದ್ರ ನಿರ್ಧಾರ ಸರಿಯಿದೆ ಎಂದ ಮಾಜಿ ಸಚಿವ ಸೋಮಣ್ಣ
ಉತ್ತರ ಪ್ರದೇಶದ 18ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮಾಯಾವತಿ, ಸೋಮವಾರ 68ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಈ ವೇಳೆ ರಾಜಕೀಯದಿಂದ ನಿವೃತ್ತಿಯಾಗುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ ಅವರು, “ಬಿಜೆಪಿ ಜಾತಿವಾದ ಮತ್ತು ಕೋಮುವಾದದ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಅವರು ಅಧಿಕಾರದಲ್ಲಿ ಇರುವುದನ್ನು ನೋಡಲು ಜನರು ಬಯಸುವುದಿಲ್ಲ” ಎಂದು ನೇರ ವಾಗ್ದಾಳಿ ನಡೆಸಿದರು.
“ಉದ್ಯೋಗ ನೀಡುವ ಬದಲು ಅಲ್ಪ ಪ್ರಮಾಣದ ಉಚಿತ ಪಡಿತರ ಕೊಡುವ ಮೂಲಕ ಜನರನ್ನು ಅವಲಂಬಿತರನ್ನಾಗಿ ಮಾಡುತ್ತಿದೆ” ಎಂದು ಆರೋಪಿಸಿದರು,(ಏಜೆನ್ಸೀಸ್).
‘ನನಗೆ ಈ ನಟ ಅಂದ್ರೆ ತುಂಬ ಇಷ್ಟ’! ’12th ಫೇಲ್‌’ ನಟಿ ಮೇಧಾ ಶಂಕರ್​ ಹೆಸರಿಸಿದ ಸ್ಟಾರ್​ ಇವರೇ ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + five =
Remember me
