ನವದೆಹಲಿ :ದೆಹಲಿ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ಭಾರೀ ಗದ್ದಲದ ನಡುವೆ ಕಲಾಪ ಆರಂಭವಾಯಿತು. ವಿಪಕ್ಷವಾದ ಬಿಜೆಪಿಯ ಶಾಸಕರು ಮತ್ತು ಆಡಳಿತಾರೂಢ ಆಮ್​ ಆದ್ಮಿ ಪಾರ್ಟಿ(ಎಎಪಿ)ಯ ಶಾಸಕರು ಸದನದ ಬಾವಿಗೆ ಬಂದು ಪರಸ್ಪರ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ತಂತಮ್ಮ ಸ್ಥಾನಗಳಿಗೆ ತೆರಳಲು ಸ್ಪೀಕರ್​ ರಾಮ್​ ನಿವಾಸ್​ ಗೋಯಲ್​ ಸೂಚಿಸಿದರು. ಆಗ ಸ್ಥಾನಕ್ಕೆ ತೆರಳದೆ ಗದ್ದಲ ಮುಂದುವರೆಸಿದ ಬಿಜೆಪಿಯ ಶಾಸಕರಾದ ವಿಜೇಂದರ್​ ಗುಪ್ತ ಮತ್ತು ಅನಿಲ್​ ಬಾಜಪೇಯಿ ಅವರನ್ನು ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಮಾರ್ಷಲ್​ಗಳೊಂದಿಗೆ ಹೊರಕಳುಹಿಸಲಾಯಿತು ಎನ್ನಲಾಗಿದೆ.
ಇದನ್ನೂ ಓದಿ:ರೌಂಡ್​ ಆಫ್​ 16ನಿಂದ ಹೊರಬಿದ್ದ ಮೇರಿ ಕೋಂ; ಪದಕದ ಆಸೆ ನಿರಾಸೆ
ಈ ಜಿದ್ದಾಜಿದ್ದಿಯಲ್ಲಿ ಎಎಪಿ ಶಾಸಕರ ಮೇಲೆ ಅವಹೇಳನಕಾರಿಯಾಗಿ ಮಾತಾಡಿದಿರಿ ಎಂದು ಬಿಜೆಪಿ ಶಾಸಕ ಓಂ ಪ್ರಕಾಶ್​ ಶರ್ಮಾ ಅವರಿಗೆ ಕ್ಷಮೆ ಕೋರಲು ಸ್ಪೀಕರ್​ ಹೇಳಿದರು. ಇದಕ್ಕೆ ನಿರಾಕರಿಸಿದ ಶರ್ಮ ಅವರನ್ನು ದಿನದ ಮಟ್ಟಿಗೆ ಸದನದಿಂದ ಅಮಾನತುಗೊಳಿಸಲಾಯಿತು ಎಂದು ವರದಿಗಳು ಹೇಳಿವೆ.(ಏಜೆನ್ಸೀಸ್)
16 ಕೋಟಿ ರೂ. ಮೌಲ್ಯದ ಕಲಾಕೃತಿಗಳು ಭಾರತಕ್ಕೆ ವಾಪಸ್​!

ರಾಜಭವನದಲ್ಲಿ ಹಣ್ಣಿನ ತೋಟ! ಗಿಡ ನೆಟ್ಟು ನೀರೆರೆದ ರಾಜ್ಯಪಾಲ ಗೆಹ್ಲೋತ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
