ಹೈದರಾಬಾದ್​:ಎಂಬಿಯ ವಿದ್ಯಾರ್ಥಿಯೊಬ್ಬ ತನ್ನ ಕ್ಲಾಸ್​ಮೇಟ್​ ಫೋಟೋವನ್ನು ಡೇಟಿಂಗ್​ ಸೈಟ್​ನಲ್ಲಿ ಪೋಸ್ಟ್​ ಮಾಡಿ ಕಾಲ್​ಗರ್ಲ್​ ಎಂದು ಚಾರಿತ್ರ್ಯ ಹರಣ ಮಾಡಿದ ಆರೋಪದಲ್ಲಿ ಹೈದರಾಬಾದ್​ನ ರಾಚಕೊಂಡ ಸೈಬರ್​ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಿದ್ಯಾರ್ಥಿಯನ್ನು ಸಮೀರ್​ ಎಂದು ಗುರುತಿಸಲಾಗಿದೆ. ಪ್ರೀತಿಯನ್ನು ನಿರಾಕರಿಸಿದಕ್ಕೆ ಈ ಕೃತ್ಯವನ್ನು ಎಸಗಿದ್ದಾನೆ. ಕಿಂಗ್​ ಕೋಥಿ ನಿವಾಸಿಯಾಗಿರುವ ಸಮೀರ್​ ಇಬ್ರಾಹಿಂಪಟ್ನಂ ಬಳಿಯ ಎಂಆರ್​ಎಂ ಕಾಲೇಜಿನಲ್ಲಿ ಎಂಬಿಎ ವಿದ್ಯಾರ್ಥಿಯಾಗಿದ್ದಾನೆ.
ಇದನ್ನೂ ಓದಿರಿ:ಗೆಲ್ಲುತ್ತಿದ್ದಂತೆ ತನ್ನ ದುರ್ಬುದ್ಧಿ ತೋರಿದ ಗ್ರಾಪಂ ಸದಸ್ಯ: ಮಹಿಳೆಗೆ ಇಟ್ಟ ಬೇಡಿಕೆ ಮನಕುಲ ತಲೆತಗ್ಗಿಸುವಂಥದ್ದು!
ನಾನು ನಿನ್ನ ಕ್ಲಾಸ್​ಮೇಟ್​ ಎಂದು ಯುವತಿಯೊಬ್ಬಳನ್ನು ಸಮೀರ್ ಆರಂಭದಲ್ಲಿ​ ಪರಿಚಯ ಮಾಡಿಕೊಂಡಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಪ್ರತಿನಿತ್ಯ ಇಬ್ಬರು ಪರಸ್ಪರ ಚಾಟ್​ ಮಾಡುತ್ತಿದ್ದರು. ಒಂದು ವರ್ಷದ ಬಳಿಕ ಸಮೀರ್​ ತನ್ನ ಪ್ರೀತಿಯ ಪ್ರಸ್ತಾಪವನ್ನು ಯುವತಿ ಮುಂದಿಟ್ಟಿದ್ದ. ಆದರೆ, ಪ್ರೀತಿಯನ್ನು ಒಪ್ಪದ ಯುವತಿ ಆತನೊಂದಿಗೆ ಮಾತನಾಡುವುದನ್ನು ಕಡಿದುಕೊಂಡಿದ್ದಳು.
ಇದರಿಂದ ಅಸಮಾಧಾನದ ಜತೆಗೆ ಕುಪಿತಗೊಂಡ ಸಮೀರ್​ ತನ್ನ ಸ್ಮಾರ್ಟ್​ಫೋನ್​ನಲ್ಲಿ ಹೊಸ ಜಿಮೇಲ್ ಖಾತೆ ತೆರೆದು​ ಡೇಟಿಂಗ್​ ವೆಬ್​ಸೈಟ್​ನಲ್ಲಿ ನಕಲಿ ಖಾತೆ ಸೃಷ್ಟಿಸಿ, ಇಂಟರ್ನೆಟ್​ ಮೂಲಕ ಪೋರ್ನ್​ ಫೋಟೋಗಳನ್ನು ಡೌನ್​ಲೋಡ್​ ಮಾಡಿಕೊಂಡು ಅದನ್ನು ನಕಲಿ ಖಾತೆಯಲ್ಲಿ ಪೋಸ್ಟ್​ ಮಾಡುತ್ತಿದ್ದ. ಖಾತೆಯ ಪ್ರೊಫೈಲ್​ಗೆ ಯುವತಿಯ ಫೋಟೋ ಬಳಸಿದ್ದ. ಅಲ್ಲದೆ, ಕಾಲ್​ಗರ್ಲ್​ ಎಂದು ಬರೆದು ಆಕೆಯ ನಂಬರ್​ ಸಹ ಉಲ್ಲೇಖಿಸಿದ್ದ.
ಇದನ್ನೂ ಓದಿ:ಸಂಚಾರ ಪೊಲೀಸರ ಕಿರಿಕಿರಿ: ದಂಡ ವಸೂಲಿ ಹೆಸರಲ್ಲಿ ಕಿರುಕುಳ, ಕಾನೂನು ಅರಿವಿನ ಕೊರತೆ
ಇದರಿಂದಾಗಿ ಯುವತಿಗೆ ಅನೇಕ ಅನಾಮಿಕ ಕರೆಗಳು ಬರತೊಡಗಿದವು. ಅಶ್ಲೀಲವಾಗಿ ಮಾತನಾಡಲು ಆರಂಭಿಸಿದರು. ಇದರಿಂದ ಬೇಸರಗೊಂಡಿದ್ದ ಯುವತಿಗೆ ಸಮೀರ್​ನ ಕೃತ್ಯ ಹೇಗೋ ಬಯಲಾಗಿದೆ. ತಕ್ಷಣ ರಾಚಕೊಂಡ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶುಕ್ರವಾರ ಸಮೀರ್​ನನ್ನು ಬಂಧಿಸಿ ಆತನಿಂದ ಸಿಮ್​ ಕಾರ್ಡ್​ ಮತ್ತು ಸ್ಮಾರ್ಟ್​ಫೋನ್​ ಅನ್ನು ವಶಪಡಿಸಿಕೊಂಡಿದ್ದಾರೆ.(ಏಜೆನ್ಸೀಸ್​) ​
ಗೆಲ್ಲುತ್ತಿದ್ದಂತೆ ತನ್ನ ದುರ್ಬುದ್ಧಿ ತೋರಿದ ಗ್ರಾಪಂ ಸದಸ್ಯ: ಮಹಿಳೆಗೆ ಇಟ್ಟ ಬೇಡಿಕೆ ಮನಕುಲ ತಲೆತಗ್ಗಿಸುವಂಥದ್ದು!

ಕುಡಿದು ಬಂದ ಗಂಡನನ್ನು ಕುಟ್ಟಾಣಿಯಲ್ಲೇ ಕುಟ್ಟಿ ಕೊಂದ ಹೆಂಡತಿ!

ಅಮ್ಮ ಮಗಳನ್ನು ರಸ್ತೆಯಲ್ಲೇ ರೇಪ್​ ಮಾಡಿದ ಕಾಮುಕರು! ರಕ್ಷಿಸುವುದನ್ನು ಬಿಟ್ಟು ವಿಡಿಯೋ ಮಾಡಿ ಪೋಸ್ಟ್ ಮಾಡಿದ ಸ್ಥಳೀಯ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × four =
Remember me
