ಭೋಪಾಲ್​​:ಇನ್ನೇನು ಹಸೆಮಣೆ ಏರಬೇಕಿದ್ದ ಮದುಮಗಳು ಸಾವನ್ನಪ್ಪಿರುವ ದುರಂತ ಘಟನೆ ಮಧ್ಯಪ್ರದೇಶದ ಛಿಂದವಾಡದಲ್ಲಿ ನಡೆದಿದೆ.
ನಾಳೆಯ ಹೊಸ ಜೀವನದ ಕನಸಿನಲ್ಲಿದ್ದ ಈಕೆಗೆ ವಿಧಿ ಬೇರೆಯೇ ಬರೆದಿತ್ತು. ಮನೆಯಲ್ಲಿ ಮದುವೆಯ ತಯಾರಿ ಜೋರಾಗಿಯೇ ಸಾಗುತ್ತಿತ್ತು. ಎಲ್ಲಾ ಸಿದ್ಧತೆ ನಡೆಸಿ ಮಂಟಪಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಈಕೆಯೇ ಸಾವನ್ನಪ್ಪಿರುವುದು ದುರಂತವೇ ಸರಿ.
ಎಂಬಿಬಿಎಸ್​ ಮಾಡಿದ್ದ ಈಕೆಗೆ ಮದುವೆ ನಿಶ್ಚಯವಾಗಿತ್ತು. ಮೇ 20 ರಂದೇ ಮದುವೆ ಇತ್ತು. ಆದರೆ ದುರಾದೃಷ್ಟವಶಾತ್​​ ಈಕೆ ತಿಂದ ಉಪಹಾರ ಈಕೆಯನ್ನೇ ಪ್ರಾಣವನ್ನು ತೆಗೆದುಕೊಂಡುಬಿಟ್ಟಿದೆ.
ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಡೋಕ್ಲಾ ಎಂಬ ಉಪಹಾರವನ್ನು ಮಾಡಲಾಗುತ್ತದೆ. ಇದನ್ನೇ ತಿಂದಿರುವ ಈಕೆ ಗಂಟಲಿನಲ್ಲಿ ಸಿಕ್ಕಿಹಾಕೊಂಡು ಸಾವನ್ನಪ್ಪಿದ್ದಾಳೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಈಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಈಕೆಯ ಹೆಸರು ಮೇಘಾ, ಡೋಕ್ಲಾ ತಿಂದಾಗ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿತ್ತು, ಆಕೆ ನೀರು ಕುಡಿದರೂ ಒಳಗಡೆ ಹೋಗಿಲ್ಲ, ಹೆಚ್ಚು ಕೆಮ್ಮುತ್ತಿದ್ದ ಈಕೆಯನ್ನು ನೋಡಿದ  ಮನೆಯವರು ಗಾಬರಿಗೊಂಡ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೂ ಪ್ರಯೋಜನವಾಗಲಿಲ್ಲ.
ಎಂಬಿಬಿಎಸ್​ ಮುಗಿಸಿದ್ದ ಮೇಘಾ ಮುಂಬೈಯಲ್ಲಿ ವೈದ್ಯೆಯಾಗಿ ವೃತ್ತಿ ಆರಂಭಿಸಿದ್ದರು. ಆದರೆ ಜೀವನ ಆರಂಭಕ್ಕೂ ಮುನ್ನ ಅಂತ್ಯ ಕಂಡಿದ್ದು ನಿಜಕ್ಕೂ ದುರಂತ ಸಂಗತಿ.(ಏಜೆನ್ಸೀಸ್​​)
ಐದು ವರ್ಷಗಳಿಂದ ಬಟ್ಟೆಯೇ ಧರಿಸಿಲ್ಲ, ಬಟ್ಟೆ ಅಂದ್ರೆನೇ ಆಗಿಬರಲ್ಲ ಎಂದು ಈ ಮಹಿಳೆ ಮಾಡಿಕೊಂಡಿದ್ದೇನು ಗೊತ್ತಾ?

ರಾಜಕಾಲುವೆಯಲ್ಲಿ ತೇಲಿಬಂದ ಮಗುವಿನ ಮೃತದೇಹ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:18 − 8 =
Remember me
