ಹೈದರಾಬಾದ್​:ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಎಂಬಿಬಿಎಸ್​ ವಿದ್ಯಾರ್ಥಿಯೊಬ್ಬ ತನ್ನ ಮರ್ಮಾಂಗ ಕತ್ತರಿಸಿಕೊಂಡು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಪಾಲಕರು ಮನೆಯಿಂದ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ದೀಕ್ಷಿತ್​ ರೆಡ್ಡಿ (21) ಮೃತ ವಿದ್ಯಾರ್ಥಿ. ಈತ ಸಿಕಂದರಬಾದ್​​ನಲ್ಲಿರುವ ಗಾಂಧಿ ಮೆಡಿಕಲ್​ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್​ ಓದುತ್ತಿದ್ದ. ಭಾನುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾನಸಿಕವಾಗಿ ತೀವ್ರವಾಗಿ ಕುಗ್ಗಿದ್ದರಿಂದ ಈ ದುಡುಕಿನ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕನಿಷ್ಠ ವೇತನಕ್ಕಾಗಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ : ಸರ್ಕಾರಿ ನೌಕರರು ಎಂದು ಪರಿಗಣಿಸಿ ಒಕ್ಕೋರಲ ಬೇಡಿಕೆ
ಮೃತ ದೀಕ್ಷಿತ್, ವಾರಗಂಲ್​ ಜಿಲ್ಲೆಯ ದೇವರಪ್ಪುಳ ಗ್ರಾಮದವನು. ಸೊಮಿರೆಡ್ಡಿ ಮತ್ತು ಕರುಣಾ ದಂಪತಿಯ ಪುತ್ರ. ಸುಮಾರು 20 ವರ್ಷಗಳ ಹಿಂದೆಯೇ ವಾರಂಗಲ್​ನಿಂದ ಹೈದರಾಬಾದ್​ ಉಪನಗರ ಪಾಪಿರೆಡ್ಡಿಗೆ ಬಂದು ನೆಲೆಸಿದ್ದರು. ದೀಕ್ಷಿತ್​ಗೆ ಓರ್ವ ಸಹೋದರಿ ಸಹ ಇದ್ದಾಳೆ. ಕೆಲವು ದಿನಗಳಿಂದ ದೀಕ್ಷಿತ ಮಾನಸಿಕ ರೋಗದಿಂದ ಬಳಲುತ್ತಿದ್ದ. ಯಾವಾಗಲೂ ಸಪ್ಪೆಯಾಗಿರುತ್ತಿದ್ದ. ಹೀಗಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ. ಈ ಹಿಂದೆಯೂ ಒಮ್ಮೆ ನಿದ್ರೆ ಮಾತ್ರೆಗಳನ್ನು ನುಂಗಿ ಸಾವಿಗೆ ಶರಣಾಗಲು ಯತ್ನಿಸಿದ್ದ. ಆದರೆ, ಅಪಾಯದಿಂದ ಪಾರಾಗಿದ್ದ.
ಆತ್ಮಹತ್ಯೆಗೆ ಯತ್ನಿಸಿದ ದಿನದಿಂದ ದೀಕ್ಷಿತ್​ ಮೇಲೆ ಪಾಲಕರು ವಿಶೇಷ ಗಮನ ಹರಿಸಿದ್ದರು. ವೈದ್ಯರ ಮೇಲ್ವಿಚಾರಣೆಯೊಂದಿಗೆ ದೀಕ್ಷಿತ್​ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಿರಿಯ ವಯಸ್ಸಿನಲ್ಲೇ ಮಾತ್ರೆಗಳನ್ನು ಸೇವಿಸಬೇಕಲ್ಲ ಎಂಬ ನೋವಿನಲ್ಲೂ ದೀಕ್ಷಿತ್​, ಖಿನ್ನತೆಗೆ ಜಾರಿದ್ದರು. ಆದರೆ, ಈ ಬಾರಿ ಪಾಲಕರು ಭಾನುವಾರ ಹೊರಗಡೆ ಹೋಗಿ, ಸಂಜೆ 5 ಗಂಟೆಗೆ ಮನೆಗೆ ಮರಳಿದರು. ಈ ವೇಳೆ ಎಷ್ಟೇ ಬಾಗಿಲು ಬಡಿದರು ದೀಕ್ಷಿತ್​ ಬಾಗಿಲ್​ ತೆರೆಯಲೇ ಇಲ್ಲ. ಬಳಿಕ ಕಿಟಕಿಯಿಂದ ನೋಡಿದಾಗ ದೀಕ್ಷಿತ್, ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಪಾಲಕರು ಆಘಾತದಿಂದ ಕುಸಿದುಬಿದ್ದರು.
ಇದನ್ನೂ ಓದಿ:ಜಗದಲ್ಲಿ ಸಿಂಹಪಾಲು, ಜನಸಂಖ್ಯೆಯ ಸವಾಲು: ಪ್ರಪಂಚದ ಪ್ರತಿ ನೂರು ಜನರಲ್ಲಿ 17 ಭಾರತೀಯರು
ತೀವ್ರ ಮಾನಸಿಕವಾಗಿ ಕುಂದಿದ್ದ ದೀಕ್ಷಿತ್​ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡು ಸಾವಿಗೆ ಶರಣಾಗಿದ್ದು, ಎಂಬಿಬಿಎಸ್​ ಓದುತ್ತಿದ್ದ ಮಗನನ್ನು ಕಳೆದುಕೊಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.(ಏಜೆನ್ಸೀಸ್​)
ಬದಲಾಯಿತು ಪಾಕ್​ ಮಹಿಳೆಯ ಜೀವನ ಶೈಲಿ: ಮಾಂಸಾಹಾರಿ ಸೀಮಾ ಈಗ ಸಸ್ಯಾಹಾರಿ, ನಿತ್ಯವೂ ದೇವರ ಸೇವೆ!

ಮದ್ವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ದಾರುಣ ಸಾವು: ಮುಗಿಲು ಮುಟ್ಟಿದ ಗಂಡನ ಆಕ್ರಂದನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eight =
Remember me
