ಮುಂಬೈ:ಜನಪ್ರಿಯ ರಾಪರ್ ಮತ್ತು ಬಿಗ್ ಬಾಸ್ 16ರ ವಿಜೇತ ಎಂಸಿ ಸ್ಟಾನ್ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಕೆಲವು ಅಪರಿಚಿತ ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದು, 9 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿರುವ ತನ್ನ ಚಾನಲ್‌ಗೆ ಸಹಾಯ ಮಾಡುವಂತೆ ಸ್ಟಾನ್​ ಯೂಟ್ಯೂಬ್ ಇಂಡಿಯಾಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಮಗಳಿಂದಲೇ ಬಯಲಾಯ್ತು ನಟಿ ಲಕ್ಷ್ಮೀಗಿದ್ದ ಅಫೇರ್! ದಾಂಪತ್ಯ ದ್ರೋಹದ ಗುಟ್ಟು ಬಿಚ್ಚಿಟ್ಟ ಮಾಜಿ ಗಂಡ
ಇಂದು ಬೆಳಗ್ಗೆ ತನ್ನಇನ್​ಸ್ಟಾಗ್ರಾಮ್​ನಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡ ಸ್ಟಾನ್, ತನ್ನ ಯೂಟ್ಯೂಬ್​ ಮುಖಪುಟದಲ್ಲಿ ದುರುದ್ದೇಶಪೂರಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರ ವಿರುದ್ಧ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದರು. ಯೂಟ್ಯೂಬ್​ಗೆ ಟ್ಯಾಗ್ ಮಾಡಿ ಪ್ರಶ್ನಿಸಿದ ಸ್ಟಾನ್​, ನನ್ನ ಅಧಿಕೃತ ಚಾನಲ್ ಹ್ಯಾಕ್ ಆಗಿದೆ! ಸರಿಪಡಿಸಿಕೊಡಿ ಎಂದು ತಮ್ಮ ಸ್ಟೋರಿಯಲ್ಲಿ ಪೋಸ್ಟ್ ಮಾಡಿ, ಕಳವಳ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ಬಿಗ್ ಬಾಸ್​ ವಿಜೇತ, “ಹ್ಯಾಕ್ ಮಾಡಿದ ಚಾನಲ್ ಬಿಟ್‌ಕಾಯಿನ್ ಗಳಿಕೆಗೆ ಸಂಬಂಧಿಸಿದ ಕ್ಯೂಆರ್​ ಕೋಡ್ ಅನ್ನು ಫ್ಲ್ಯಾಷ್ ಮಾಡುವುದನ್ನು ನೀವು ಕಾಣಬಹುದು. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಡಿ ಮತ್ತು ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ, ಇದು ಹಗರಣವಾಗಬಹುದು” ಎಂದು ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ:ಫಿಟ್​ನೆಸ್​ ಪಾಸಾದ ರಿಷಭ್​ ಪಂತ್: ರಾಜಸ್ಥಾನ ರಾಯಲ್ಸ್​ ತಂಡದ ಪ್ರಮುಖ ವೇಗಿ ಸೇರಿ ಇಬ್ಬರು ಐಪಿಎಲ್​ನಿಂದ ಹೊರಕ್ಕೆ..!
ಎಂಸಿ ಸ್ಟಾನ್ ದೇಶದ ಅತ್ಯಂತ ಪ್ರಸಿದ್ಧ ರಾಪರ್‌ಗಳಲ್ಲಿ ಒಬ್ಬರಾಗಿದ್ದು, ಬಿಗ್ ಬಾಸ್ 16ರ ವಿಜೇತರಾಗಿ ಹೊರಹೊಮ್ಮಿದ್ದರು. ಶಿವ ಠಾಕರೆ, ಶಾಲಿನ್ ಭಾನೋಟ್, ಪ್ರಿಯಾಂಕಾ ಚಾಹರ್ ಚೌಧರಿ, ಟೀನಾ ದತ್ತಾ, ಸಾಜಿದ್ ಖಾನ್, ಅರ್ಚನಾ ಗೌತಮ್, ಅಬ್ದು ರೋಜಿಕ್ಮ್ ಅವರೊಡನೆ ಭಾರೀ ಪೈಪೋಟಿಯಿಂದ ಸೀಸನ್​ 16ರ ಟ್ರೋಫಿ ವಿನ್ನರ್ ಆಗಿ ಇಂದು ಜಾಗತಿಕ ಮಟ್ಟದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ,(ಏಜೆನ್ಸೀಸ್).
ಹಾರ್ದಿಕ್ ಇಲ್ಲದೆ ಈ ತಂಡ ಉತ್ತವಾಗಿದೆ; ಪಾಂಡ್ಯ ವಿರುದ್ಧ ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಕ್ರಿಕೆಟಿಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + seven =
Remember me
