ನವದೆಹಲಿ:ರಾಷ್ಟ್ರರಾಜಧಾನಿ ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ) ಚುನಾವನೆಯಲ್ಲಿ ಆಮ್​ ಆದ್ಮಿ ಪಕ್ಷ(ಎಎಪಿ) ಭರ್ಜರಿ ಗೆಲುವು ಸಾಧಿಸಿದ್ದು, ಆಡಳಿತಾರೂಢ ಬಿಜೆಪಿ ಹೀನಾಯ ಸೋಲುಂಡಿದೆ. ಆ ಮೂಲಕ 15 ವರ್ಷದ ಬಿಜೆಪಿ ಆಡಳಿತ ಅಂತ್ಯಗೊಂಡಿದ್ದು, ಅಧಿಕಾರದ ಚುಕ್ಕಾಣಿ ಎಎಪಿ ಪಾಲಾಗಿದೆ.
ದೆಹಲಿ ಮಹಾ ನಗರ ಪಾಲಿಕೆಯ 250 ವಾರ್ಡ್​ಗಳಿಗೆ ಡಿಸೆಂಬರ್​ 4ರಂದು ಮತದಾನ ನಡೆದಿತ್ತು. ಬಿಜೆಪಿ ಮತ್ತು ಆಮ್​ ಆದ್ಮಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಇಂದು(ಡಿ.7) ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಬೆಳಗ್ಗೆಯಿಂದ ಬಿಜೆಪಿ ಮತ್ತು ಎಎಪಿ ನಡುವೆ ನೆಕ್​ ಟು ನೆಕ್​ ಫೈಟ್​ ಏರ್ಪಟ್ಟಿತ್ತು. ಅನೇಕ ಬಾರಿ ಬಿಜೆಪಿ, ಎಎಪಿಯನ್ನು ಹಿಂದಿಕ್ಕಿತ್ತಾದರೂ ಅಂತಿಮವಾಗಿ ಎಎಪಿ ಒಟ್ಟು 134 ವಾರ್ಡ್​ಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಾಲಿಕೆ ಗಾದಿಯನ್ನ ತನ್ನದಾಗಿಸಿಕೊಂಡಿದೆ. ಬಿಜೆಪಿ 104 ಸ್ಥಾನ ಮಾತ್ರ ಪಡೆಯುವಲ್ಲಿ ಸಫಲವಾಯಿತು.
Delhi CM and AAP national convenor Arvind Kejriwal, Dy CM Manish Sisodia and Punjab CM Bhagwant Mann address the party workers as the party comfortably crosses the majority mark to win the MCD elections
AAP wins 132 seats; BJP at 104 – counting underwaypic.twitter.com/jzQ7luUrpM
— ANI (@ANI)December 7, 2022

ಇನ್ನು ಕಾಂಗ್ರೆಸ್​ ಕೇವಲ 9 ವಾರ್ಡ್​ಗಳಲ್ಲಿ ಗೆದ್ದಿದ್ದು, ಸ್ವತಂತ್ರ ಅಭ್ಯರ್ಥಿಗಳು 3 ವಾರ್ಡ್​ಗಳಲ್ಲಿ ಜಯ ಸಾಧಿಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಶೇ.50.48 ಮತದಾನವಾಗಿತ್ತು. ಒಟ್ಟು 1,340 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.
ಸ್ಪಷ್ಟ ಬಹುಮತ ಬರುತ್ತಿದ್ದಂತೆ ದೇಹಲಿ ಮಾತ್ರವಲ್ಲ, ದೇಶಾದ್ಯಂತ ಆಪ್​ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ತುಮಕೂರಲ್ಲಿ ‘ನಾರಾಯಣ ದೇವಾಲಯ’ ಉದ್ಘಾಟನೆ: ಇದು ಕ್ಯಾಷ್​ ಕೌಂಟರ್​ ಇಲ್ಲದ ಮೊದಲ ಆಸ್ಪತ್ರೆ

ಕಲಬುರಗಿಯಲ್ಲಿ ಭೀಕರ ಅಪಘಾತ: ಸರ್ಕಲ್​ ಇನ್​ಸ್ಪೆಕ್ಟರ್​ ರವಿ ಉಕ್ಕುಂದ, ಪತ್ನಿ ದುರ್ಮರಣ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + 15 =
Remember me
