ನವದೆಹಲಿ:ಮೆಕ್‌ಡೊನಾಲ್ಡ್ಸ್ ಫಾಸ್ಟ್​​ಫುಡ್​ ಸಂಸ್ಥೆ ಇದೀಗ ತಮ್ಮ ಬರ್ಗರ್‌ಗಳಲ್ಲಿ ಟೊಮ್ಯಾಟೊಗಳನ್ನು ಬಳಸುವುದಿಲ್ಲ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ:ಮೈಷುಗರ್‌ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ: ಸಚಿವರಾದ ಚಲುವರಾಯಸ್ವಾಮಿ, ಶಿವಾನಂದ ಪಾಟೀಲ್ ಭಾಗಿ
ಫಾಸ್ಟ್​​​ಫುಡ್ ಸಂಸ್ಥೆ ಮೆಕ್‌ಡೊನಾಲ್ಡ್ ತಮ್ಮ ಗ್ರಾಹಕರಿಗೆ ಎಂದಿನಂತೆ ಬರ್ಗರ್​​ಗಳನ್ನು ಉತ್ತಮ ಗುಣಮಟ್ಟದಲ್ಲಿ ನೀಡಲಿದ್ದು, ಟೊಮ್ಯಾಟೊ ಬಳಕೆಯನ್ನು ಮಾತ್ರ ಕಡಿತಗೊಳಿಸುತ್ತಿದ್ದೇವೆ ಎಂದು ಹೇಳಿದೆ. ದೇಶಾದ್ಯಂತ ಹಲವೆಡೆ ಟೊಮ್ಯಾಟೊ ಪೂರೈಕೆಯಲ್ಲಿ ಕೊರತೆಯನ್ನು ಅನುಭವಿಸುತ್ತಿರುವ ಹಿನ್ನೆಲೆ ಮತ್ತು ಬೆಲೆಯಲ್ಲಿ ದಿಢೀರ್​​ ಏರಿಕೆ ಕಂಡುಬಂದಿರುವುದೇ ಟೊಮ್ಯಾಟೊ ಕೈಬಿಡಲು ಪ್ರಮುಖ ಕಾರಣ ಎಂದು ಸಂಸ್ಥೆ ಹೇಳಿದೆ.
ಟೊಮ್ಯಾಟೊ ದರ ಏರಿಕೆ ಮತ್ತು ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾರಣ ಈ ಕ್ರಮವು ಮುನ್ನೆಲೆಗೆ ಬಂದಿದೆ. ಕೆಲವು ಪ್ರದೇಶಗಳಲ್ಲಿ, ಟೊಮ್ಯಾಟೊಗಳ ಸಗಟು ಬೆಲೆಗಳು ಒಂದು ತಿಂಗಳೊಳಗೆ 300% ರಷ್ಟು ಏರಿಕೆಯಾಗಿದ್ದು, ಹಲವು ನಗರಗಳಲ್ಲಿ ಈ ವಾರ ಕೆಜಿಗೆ 160 ರೂ. ಇದೆ. ಇನ್ನು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಟೊಮ್ಯಾಟೊ ಕೆಜಿಗೆ 250 ರೂ. ಗಡಿ ತುಲುಪಿದೆ,(ಏಜೆನ್ಸೀಸ್).

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 15 =
Remember me
