ನವದೆಹಲಿ:ಇತ್ತೀಚೆಗೆ ಮೃತಪಟ್ಟ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಕುರಿತಂತೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.ಸುಶಾಂತ್‌ ಅವರ ಕೊನೆಯ ಚಿತ್ರ ದಿಲ್ ಬೇಚರಾ. ಇದರಲ್ಲಿ ಇವರ ಜತೆ ನಡೆಸಿರುವ ನಟಿ ಸಂಜನಾ ಸಂಘಿ ಅವರ ಹೇಳಿಕೆಯನ್ನು ಪೊಲೀಸರು ಇಂದು ದಾಖಲಿಸಿಕೊಂಡರು.
2008ರ ವೇಳೆ ಮೀಟೂ ಅಭಿಯಾನ ಉತ್ತುಂಗದಲ್ಲಿ ಇತ್ತು. ಆಗ ಬಾಲಿವುಡ್‌ ಸೇರಿದಂತೆ ಅನೇಕ ಚಿತ್ರ ತಾರೆಯರು ತಮಗೆ ಚಿತ್ರರಂಗದಲ್ಲಿ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾತನಾಡಿದ್ದರು. ಈ ಸಮಯದಲ್ಲಿ ನಟಿ ಸಂಜನಾ ಸಂಘಿ ಅವರ ಮೇಲೂ ಲೈಂಗಿಕ ದೌರ್ಜನ್ಯ ಆಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಸಮಯದಲ್ಲಿ ಕೇಳಿ ಬಂದುದು ನಟ ಸುಶಾಂತ್‌ ಹೆಸರು.
ಇದು ಎಲ್ಲೆಡೆ ಪ್ರಚಾರ ಕೂಡ ಆಗಿತ್ತು. ಈ ಬಗ್ಗೆ ಪೊಲೀಸರು ಸಂಜನಾ ಅವರ ಬಳಿ ವಿಚಾರಿಸಿದರು. ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.
ಇದನ್ನೂ ಓದಿ:ಸುಶಾಂತ್‌ ಟ್ವಿಟರ್‌ನ ಕಮೆಂಟ್‌ಗಳನ್ನು ಅಳಿಸಲಾಗುತ್ತಿದೆಯೆ? ಪೊಲೀಸರಿಂದ ತನಿಖೆ
ಈ ಸಮಯದಲ್ಲಿ ಸಂಜನಾ ಸುಶಾಂತ್‌ ಮೇಲಿರುವ ಎಲ್ಲಾ ಆರೋಪಗಳನ್ನೂ ತಳ್ಳಿಹಾಕಿದ್ದಾರೆ. ಇಂಥ ಘಟನೆ ನಡೆದೇ ಇಲ್ಲ. ಮೀ ಟೂ ಅಭಿಯಾನ ಭಾರತದಲ್ಲಿ ಹೆಚ್ಚಿನ ಸದ್ದು ಮಾಡಿದ್ದ ಸಮಯದಲ್ಲಿ ನಾನು ತಾಯಿಯ ಜತೆ ಅಮೆರಿಕದಲ್ಲಿ ಇದ್ದೆ. ಆಗ ದಿಲ್ ಬೇಚರಾ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ನನ್ನ ಭಾಗದ ಚಿತ್ರೀಕರಣ ಬಹುತೇಕ ಮುಗಿದಿತ್ತು. ಮುಂದಿನ ಡೇಟ್‌ಗೆ ತುಂಬಾ ದಿನಗಳು ಇದ್ದ ಹಿನ್ನೆಲೆಯಲ್ಲಿ ನಾನು ಅಮೆರಿಕಕ್ಕೆ ತೆರಳಿದ್ದೆ.
ಭಾರತದಲ್ಲಿ ನೋಡಿದರೆ ಕೆಲವರು ನನ್ನ ಹೆಸರನ್ನು ಸುಶಾಂತ್‌ ಜತೆ ಸೇರಿಸಿ ನನಗೂ ದೌರ್ಜನ್ಯ ಆಗಿರುವ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಇದರ ಬಗ್ಗೆ ನನಗೆ ತಿಳಿದೇ ಇರಲಿಲ್ಲ.ಅಮೆರಿಕದಿಂದ ಭಾರತಕ್ಕೆ ವಾಪಸಾದ ಸಮಯದಲ್ಲಿ ಈ ವಿಷಯ ತಿಳಿಯಿತು. ನನಗೆ ತುಂಬಾ ಅಚ್ಚರಿಯಾಯಿತು ಎಂದಿದ್ದಾರೆ. ಅದೇ ಸಮಯದಲ್ಲಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಕೂಡ ಇವೆಲ್ಲಾ ವದಂತಿ. ಸುಮ್ಮನೆ ನನ್ನ ಹೆಸರನ್ನು ತರಲಾಗಿದೆ ಎಂದೂ ಬರೆದುಕೊಂಡಿರುವ ಬಗ್ಗೆ ಅವರು ವಿವರಿಸಿದ್ದಾರೆ.
ಅಷ್ಟೇ ಅಲ್ಲದೇ ಸುಶಾಂತ್‌ ಆತ್ಮಹತ್ಯೆ ನನಗೆ ಅತೀವ ಆಘಾತವನ್ನು ತಂದಿದೆ. ಈ ಸಮಯದಲ್ಲಿ ಕೂಡ ನಾನು ವಿಡಿಯೋ ಮಾಡಿ ನನ್ನ ನೋವನ್ನು ತೋಡಿಕೊಂಡಿದ್ದೆ. ಅಭಿ ತೋ ಇತ್ನಾ ಕುಚ್ ಬಾಕಿ ಥಾ, ಸುಶಾಂತ್? ಅತಿ ಸೀಮಿತ ದಿನಗಳಲ್ಲಿ ನೀವು ಅಮೂಲ್ಯವಾದ ನೆನಪು ಶಾಶ್ವತವಾಗಿ ಕೊಟ್ಟಿದ್ದೀರಿ. ನಾನು ಕೃತಜ್ಞ ಎಂದು ಆಕೆ ಶೀರ್ಷಿಕೆ ಸಾಲಲ್ಲಿ ಬರೆದುಕೊಂಡಿದ್ದೆ ಎಂದಿದ್ದಾರೆ.
34 ವರ್ಷದ ನಟ 2020 ರ ಜೂನ್ 14 ರಂದು ತನ್ನ ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.(ಏಜೆನ್ಸೀಸ್‌)
ಪ್ಮಾಸ್ಮಾದಿಂದಾಗಿ ಬದುಕಿದೆ: ನಾನು ಪ್ಲಾಸ್ಮಾ ದಾನಮಾಡಿರುವೆ, ನೀವೂ ಮಾಡಿ ಎಂದ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 10 =
Remember me
