ಈ ಪ್ರಶ್ನೆಗೆ ಸರಳ ಉತ್ತರವೆಂದರೆ ಆದಾಯ ಕಡಿಮೆ ಇರುವವರು ಎಂಬುದು. ಇದೇ ಮಾನದಂಡವನ್ನು ಆಧರಿಸಿ ಈ ಹಿಂದಿನಿಂದಲೂ ಬಡತನವನ್ನು ಅಳೆಯಲು ಆದಾಯದ ಏಕೈಕ ಸೂಚಕವನ್ನೇ ಕೇಂದ್ರೀಕರಿಸಿಕೊಂಡು ಬರಲಾಗಿದೆ. ಅಂದರೆ, ವಿತ್ತೀಯ ಮತ್ತು ಬಳಕೆ ಸಾಮರ್ಥ್ಯದ ಅಂಶಗಳು ಮಾತ್ರ ಬಡತನ ಅಳೆಯುವ ಮಾನದಂಡಗಳಾಗಿದ್ದವು. ಹೀಗಾಗಿ, ವಿತ್ತೀಯವಲ್ಲದ ಇತರ ಅಂಶಗಳ ಕೊರತೆಯು ಜೀವನಮಟ್ಟದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಗುರುತಿಸಲು ಈ ಮಾನದಂಡಗಳು ವಿಫಲವಾಗಿವೆ ಎಂಬ ಟೀಕೆ ಕೇಳಿಬರುತ್ತಿತ್ತು.
ಈ ಹಿನ್ನೆಲೆಯಲ್ಲಿ ಭಾರತದ ನೀತಿ ಆಯೋಗವು ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕ ಮಾದರಿಯಲ್ಲಿ ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕವನ್ನು ಅಳವಡಿಸಿಕೊಂಡು ವರದಿ ಸಿದ್ಧಪಡಿಸಿದೆ. ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕವನ್ನು ಆಕ್ಸ್​ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಇನಿಶಿಯೇಟಿವ್ (ಒಪಿಎಚ್​ಐ) ಮತ್ತು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್​ಡಿಪಿ) ಜಂಟಿಯಾಗಿ ರೂಪಿಸಿವೆ. ಇದು ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದಲ್ಲಿನ ಅಭಾವಗಳನ್ನು ಗಮನಿಸುತ್ತದೆ.
ಕೇಂದ್ರ ಸರ್ಕಾರದ ವಿವಿಧ ಕ್ಷೇತ್ರಗಳ ತಜ್ಞರುಗಳನ್ನು ಒಳಗೊಂಡ ತಂಡವಾದ ನೀತಿ ಆಯೋಗವು 2021ರ ನವೆಂಬರ್​ನಲ್ಲಿ ಭಾರತದ ಮೊದಲ ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕ ಕುರಿತ ಅಡಿಪಾಯದ ವರದಿಯನ್ನು ಪ್ರಕಟಿಸಿದೆ. ಒಪಿಎಚ್​ಐ ಮತ್ತು ಯುಎನ್​ಡಿಪಿ ಇದರ ದರ ತಾಂತ್ರಿಕ ಪಾಲುದಾರರಾಗಿದ್ದರು.
ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕ ರೀತಿಯಲ್ಲಿ, ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕವು ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟ- ಈ ಮೂರು ಸಮಾನ ತೂಕದ ಆಯಾಮಗಳನ್ನು ಹೊಂದಿದೆ. 12 ಸೂಚಕಗಳು ಈ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಇವುಗಳಲ್ಲಿ ಪೌಷ್ಟಿಕತೆ, ಮಗು ಮತ್ತು ಹದಿಹರೆಯದವರ ಮರಣ, ತಾಯಿಯ ಆರೋಗ್ಯ, ಶಾಲಾ ಶಿಕ್ಷಣ, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು ಸೇರಿವೆ. ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕವು ಮೊದಲನೇ ವರದಿಯು 2015-16ರ ನಡುವಿನ ಅವಧಿಯ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು (ಎನ್​ಎಫ್​ಎಚ್​ಎಸ್) ಆಧರಿಸಿದೆ. ಇದೇ ರೀತಿ ಎರಡನೇ ವರದಿಯು 2019-21ರ ನಡುವಿನ ಅವಧಿಯ ಎನ್​ಎಫ್​ಎಚ್​ಎಸ್ ಆಧರಿಸಿದೆ. 2015-16ರ ಅವಧಿಯ ಎನ್​ಎಫ್​ಎಚ್​ಎಸ್ 4 ಮತ್ತು 2019-21ರ ಅವಧಿಯ ಎನ್​ಎಫ್​ಎಚ್​ಎಸ್ 5 ಈ ಎರಡೂ ಸಮೀಕ್ಷೆಗಳ ನಡುವಿನ ವಿವರಗಳನ್ನು ಹೋಲಿಕೆಯ ಮೂಲಕ ಬಹುಆಯಾಮದ ಬಡತನವನ್ನು ಕಡಿಮೆ ಮಾಡುವಲ್ಲಿ ಭಾರತವು ಸಾಧಿಸಿದ ಪ್ರಗತಿಯನ್ನು ಕಂಡುಕೊಳ್ಳಲಾಗಿದೆ. ಇದನ್ನು ಆಧರಿಸಿಯೇ ನವೆಂಬರ್ 2021ರಲ್ಲಿ ಬಿಡುಗಡೆಯಾದ ಭಾರತದ ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕವು ಅಡಿಪಾಯದ ವರದಿಯನ್ನು ರೂಪಿಸಲಾಗಿದೆ. 2030ರ ವೇಳೆಗೆ ಬಡತನ ಪ್ರಮಾಣವನ್ನು ಇನ್ನೂ ಅರ್ಧದಷ್ಟು ಕಡಿಮೆ ಮಾಡುವ ಗುರಿಯನ್ನು ಭಾರತ ಹೊಂದಿದೆ.
ಯುಎನ್​ಡಿಪಿ ವರದಿಯಿಂದಲೂ ದೃಢೀಕರಣ:ಕಳೆದ ಜುಲೈ ತಿಂಗಳ ಆರಂಭದಲ್ಲಿ ತನ್ನ ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕ ವರದಿಯನ್ನು ಯುಎನ್​ಡಿಪಿ ಬಿಡುಗಡೆ ಮಾಡಿದೆ. ಭಾರತದಲ್ಲಿ 15 ವರ್ಷಗಳ ಅವಧಿಯಲ್ಲಿ (2005-06 ಮತ್ತು 2019-21ರ ನಡುವೆ) ಅಂದಾಜು 41.5 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರಬಂದಿದ್ದಾರೆ ಎಂದು ಈ ವರದಿ ಹೇಳಿದೆ. ಈ ಮೂಲಕ ಬಡತನ ಕಡಿಮೆಯಾಗಿರುವುದು ವಿಶ್ವ ಸಂಸ್ಥೆ ವರದಿ ಕೂಡ ದೃಢಪಡಿಸಿದೆ.
ಪ್ರಗತಿಗೆ ಕಾರಣಗಳೇನು?:ಭಾರತದಲ್ಲಿ ಬಹುಆಯಾಮದ ಬಡತನ ಪ್ರಮಾಣ ಕಡಿಮೆಯಾಗಿರುವುದರ ಶ್ರೇಯಸ್ಸನ್ನು ನೀತಿ ಆಯೋಗದ ವರದಿಯು ಸರ್ಕಾರದ ಉದ್ದೇಶಿತ ನೀತಿಗಳು, ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೀಡುತ್ತದೆ. ಶಿಕ್ಷಣ, ಪೋಷಣೆ, ನೀರು, ನೈರ್ಮಲ್ಯ, ಅಡುಗೆ ಇಂಧನ, ವಿದ್ಯುತ್ ಮತ್ತು ವಸತಿ ಮೊದಲಾದ ನಿರ್ಣಾಯಕ ಕ್ಷೇತ್ರಗಳಲ್ಲಿ ಹೂಡಿಕೆಯ ಮೇಲೆ ಸರ್ಕಾರದ ಗಮನವು ಈ ಸಕಾರಾತ್ಮಕ ಫಲಿತಾಂಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಪ್ರಮುಖ ಸರ್ಕಾರಿ ಯೋಜನೆಗಳಾದ ಸ್ವಚ್ಛ ಭಾರತ್ ಮಿಷನ್ , ಜಲ ಜೀವನ್ ಮಿಷನ್ , ಪೋಶಣ್ ಅಭಿಯಾನ, ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ), ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಮುಂತಾದವುಗಳು ಈ ಪ್ರಗತಿಗೆ ಗಣನೀಯ ಕೊಡುಗೆ ನೀಡಿವೆ ಎಂದು ನೀತಿ ಆಯೋಗ ಹೇಳಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
