ನವದೆಹಲಿ:ಮನೆಯಲ್ಲಿ ಕೆಟ್ಟುಹೋಗಿದ್ದ ರೆಫ್ರಿಜರೇಟರ್ ರಿಪೇರಿಗೆಂದು ಬಂದವ ಮನೆಯೊಡತಿಯನ್ನು ಹಿಂದಿನಿಂದ ತಬ್ಬಿಕೊಂಡಿದ್ದಲ್ಲದೆ, ಆಕೆಯ ಪುತ್ರಿಯೊಂದಿಗೆ ಕೂಡ ಅಸಭ್ಯವಾಗಿ ವರ್ತಿಸಿದ್ದಾನೆ. ಆದರೆ ಮಗಳೊಂದಿಗೆ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕಾನೂನಿನ ಕುಣಿಕೆಯಿಂದ ಆತ ಪಾರಾಗಿದ್ದರೂ, ಗೃಹಿಣಿಯನ್ನು ಹಿಂದಿನ ತಬ್ಬಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಕಶಾಸ್ತಿಯಂತೂ ಆಗಿದೆ.
ಫ್ರಿಡ್ಜ್​ ರಿಪೇರಿಗೆಂದು ಒಂದು ದಿನ ಮಧ್ಯಾಹ್ನ 2.30ರ ಸುಮಾರಿಗೆ ಸಂತ್ರಸ್ತೆಯ ಮನೆಗೆ ಬಂದಿದ್ದ ಈ ಮೆಕ್ಯಾನಿಕ್​, ಮನೆಯೊಡತಿಯ ಪತಿ ಮನೆಯಲ್ಲಿ ಇಲ್ಲದ್ದನ್ನು ಗಮನಿಸಿದ್ದ. ಬಳಿಕ ರಿಪೇರಿಗೆ ಅಗತ್ಯವಿರುವ ಸ್ಪೇರ್ ಪಾರ್ಟ್​ ತರಲು ಹೋಗಿ ಮರಳಿದ ಆತ ಮನೆಯೊಡತಿಯ ಅಂಗಾಂಗಳನ್ನು ಸ್ಪರ್ಶಿಸಿದ್ದಾನೆ. ಅದಕ್ಕೂ ಮುನ್ನ ಆಕೆಯ ಐದು ವರ್ಷದ ಪುತ್ರಿಯ ಕೆನ್ನೆಯನ್ನು ಸವರಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಮನೆಯೊಡತಿ ಗದರಿದ್ದಳು. ಆದರೆ ಕೆಲವೇ ನಿಮಿಷಗಳಲ್ಲಿ ಅಡುಗೆ ಮನೆಯಲ್ಲಿದ್ದ ಮನೆಯೊಡತಿಯ ಬಳಿಗೆ ಹೋಗಿ ಆಕೆಯನ್ನು ಹಿಂದಿನಿಂದ ಬಾಚಿ ತಬ್ಬಿಕೊಂಡಿದ್ದಾನೆ. ಬೆಚ್ಚಿಬಿದ್ದ ಆಕೆ ಎಷ್ಟು ತಪ್ಪಿಸಿಕೊಳ್ಳಲು ಯತ್ನಿಸಿದರೂ ಆತ ಬಿಡದ್ದರಿಂದ ಸಹಾಯಕ್ಕಾಗಿ ಕೂಗಿದ್ದಳು. ಕೂಡಲೇ ಸೂಪರ್​ವೈಸರ್​ನ ನೆರವು ಪಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಳು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರೂ ಆತ ಜಾಮೀನಿನ ಮೇಲೆ ಹೊರಬಂದಿದ್ದ.
ಇದನ್ನೂ ಓದಿ:ಎರಡು ಸಲ ತಾಳಿ ಕಿತ್ತೆಸೆದರೂ ಬಿಡಲಿಲ್ಲ, ನನಗಾದ ಅನ್ಯಾಯ ಯಾರಿಗೂ ಆಗಬಾರದು: ಎಲ್ಲ ಹೇಳಿಕೊಂಡ ಸಂತ್ರಸ್ತೆ…
2017ರ ಜೂನ್​ನಲ್ಲಿ ದೆಹಲಿಯ ಮನೆಯೊಂದರಲ್ಲಿ ಈ ಪ್ರಕರಣ ನಡೆದಿದ್ದು, ಆ ಕುರಿತ ನ್ಯಾಯಾಲಯದ ತೀರ್ಪು ಪ್ರಕಟಗೊಂಡಿದೆ. ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನಿಗೆ 1 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಆದರೆ ಆಕೆಯ 5 ವರ್ಷದ ಮಗಳ ಕೆನ್ನೆ ಸವರಿ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣದಿಂದ ಆತ ಪಾರಾಗಿದ್ದಾನೆ. ಪ್ರಕರಣದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಕುರಿತು ಅನುಮಾನವಿದ್ದರೂ ಹಾಗೂ ಬಾಲಕಿಯ ತಾಯಿಯೇ ಆರೋಪ ಹೊರಿಸಿದ್ದರೂ, ಬಾಲಕಿಯ ಕೆನ್ನೆ ಮುಟ್ಟಿದ ಮಾತ್ರಕ್ಕೆ ಲೈಂಗಿಕ ಕಿರುಕುಳ ಎಂದು ಪರಿಗಣಿಸುವ ಅವಕಾಶ ಕಾನೂನಿನಲ್ಲಿ ಇಲ್ಲ ಎಂದು ನ್ಯಾಯಾಲಯ ಆ ಕುರಿತ ಪ್ರಕರಣವನ್ನು ಕೈಬಿಟ್ಟಿದೆ. (ಏಜೆನ್ಸೀಸ್)
ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!

ಅವರ ಮನೆಯಲ್ಲಿ ಎಮ್ಮೆ ಸತ್ತಿದ್ದಕ್ಕೆ ಇವರ ಮನೆಯಲ್ಲಿ 6 ವರ್ಷದ ಬಾಲಕನ ಹೆಣ ಬಿತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + thirteen =
Remember me
