ಹತ್ರಾಸ್​: ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಪ್ರಕ್ಷುಬ್ಧಗೊಂಡಿರುವ ಹತ್ರಾಸ್​ನಲ್ಲಿ ಶುಕ್ರವಾರ ಪೊಲೀಸರ ಬಿಗು ಬಂದೋಬಸ್ತ್​ ಒದಗಿಸಲಾಗಿದ್ದು, ಮಾಧ್ಯಮದವರಿಗೂ ನಿಷೇಧ ಹೇರಲಾಗಿದೆ.
ಹತ್ರಾಸ್​ ಸಂತ್ರಸ್ತೆ ವಾಸಿಸುತ್ತಿದ್ದ ಬೂಲ್​ಗರ್ಹಿ ಗ್ರಾಮದಲ್ಲಿ ಜಿಲ್ಲಾಡಳಿತ ಈ ನಿಷೇಧ ಜಾರಿಗೊಳಿಸಿದ್ದು, ಮಾಧ್ಯಮದವರು ಸಂತ್ರಸ್ತೆಯ ಮನೆಗೆ ತೆರಳದಂತೆ ಹಾಗೂ ಆಕೆಯ ಕುಟುಂಬಸ್ಥರನ್ನು ಭೇಟಿ ಮಾಡದಂತೆ ನಿಷೇಧ ವಿಧಿಸಲಾಗಿದೆ. ಮಾತ್ರವಲ್ಲ ಸ್ಥಳೀಯರ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿದೆ. ಇನ್ನು ಕೆಲವಡೆ 144 ಸೆಕ್ಷನ್​ ಕೂಡ ಜಾರಿಗೊಳಿಸಲಾಗಿದೆ.
ಗುರುವಾರ ಸಂತ್ರಸ್ತೆಯ ಮನೆಗೆ ತೆರಳಲು ಯತ್ನಿಸಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹಾಗೂ ನಾಯಕಿ ಪ್ರಿಯಾಂಕಾ ವಾಧ್ರಾ ಅವರನ್ನು ಪೊಲೀಸರು ತಡೆದಿದ್ದರು. ಇದೀಗ ಮಾಧ್ಯಮದವರಿಗೂ ನಿಷೇಧ ಹೇರಿದ್ದು ಚರ್ಚೆಗೀಡಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + six =
Remember me
