ತಿರುವನಂತಪುರಂ:ಕೇರಳದಲ್ಲಿ ನಾನ್​ ವೆಜ್​ ಹೋಟೆಲ್​ಗಳ ಕರ್ಮಕಾಂಡ ದಿನಕ್ಕೊಂದು ಬಯಲಾಗುತ್ತಿದೆ. ಚಿಕನ್​ ಶೋರ್ಮಾ ತಿಂದು 16 ವರ್ಷ ಬಾಲಕಿ ಮೃತಪಟ್ಟ ಬಳಿಕವಂತೂ ಕೇರಳದ ಆಹಾರ ಸುರಕ್ಷತಾ ಇಲಾಖೆಯು ಹೋಟೆಲ್​ಗಳ ಮೇಲೆ ದಾಳಿ ಮಾಡಿ, ಈಗಾಗಲೇ ಅನೇಕ ಹೋಟೆಲ್​ಗಳಿಗೆ ಬೀಗ ಜಡಿದಿದೆ. ಇದರ ನಡುವೆಯೇ ಮತ್ತೊಂದು ದುರಂತ ಪ್ರಕರಣ ಸಂಭವಿದೆ. ಶೋರ್ಮಾ ತಿಂದ ಬಳಿಕ ಫುಡ್​ ಪಾಯಿಸನ್​ ಆಗಿ 24 ವರ್ಷದ ಯುವಕ ದುರಂತ ಸಾವಿಗೀಡಾಗಿದ್ದಾನೆ.
ಮೃತ ಯುವಕನನ್ನು ರಾಹುಲ್​ ಡಿ ನಾಯರ್​ ಎಂದು ಗುರುತಿಸಲಾಗಿದೆ. ಈತ ಕೊಟ್ಟಾಯಂ ನಿವಾಸಿ. ಇಂದು (ಅ.25) ಮಧ್ಯಾಹ್ನ 2.55ಕ್ಕೆ ಮೃತಪಟ್ಟನು. ಸೋಂಕಿನಿಂದ ಅಂಗಾಂಗ ವೈಫಲ್ಯಗೊಂಡು ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ರಾಹುಲ್​ಗೆ ತಜ್ಞ ವೈದ್ಯರಿಂದ ಚಿಕಿತ್ಸೆ ದೊರೆಯುತ್ತಿತ್ತು. ಹೆಲ್ತ್​ ಬುಲೆಟಿನ್​ ಪ್ರಕಾರ ಫುಡ್​ ಪಾಯಿಸನ್​ನಿಂದ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ. ಆದರೆ, ತಜ್ಞರ ಪರೀಕ್ಷೆಯ ಫಲಿತಾಂಶದ ನಂತರವೇ ಸಾವಿನ ನಿಖರ ಕಾರಣವನ್ನು ತಿಳಿಯಲು ಸಾಧ್ಯ ಎಂದು ಹೆಲ್ತ್​ ಬುಲೆಟಿನ್ ಹೇಳಿದೆ.
ಗಂಭೀರ ಸ್ಥಿತಿಯಲ್ಲಿದ್ದ ರಾಹುಲ್​ಗೆ ಶನಿವಾರದಿಂದ ಕಾಕ್ಕನಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಂದಿನಿಂದ ಆತನನ್ನು ವೆಂಟಿಲೇಟರ್​ನಲ್ಲಿ ಇಡಲಾಗಿತ್ತು. ಕಿಡ್ನಿ ಫೇಲ್ಯೂರ್​ ಆದ ಬೆನ್ನಲ್ಲೇ ರಾಹುಲ್​ಗೆ ಹೃದಯಾಘಾತವಾಗಿತ್ತು. ಡಯಾಲಿಸಿಸ್​ ಮೂಲಕ ಆತನನ್ನು ಜೀವಂತವಾಗಿ ಇರಿಸಲಾಗಿತ್ತು. ಆದರೆ, ತದನಂತರದಲ್ಲಿ ಸೆಪ್ಟಿಕ್ ಶಾಕ್‌ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅಂದಹಾಗೆ ರಾಹುಲ್​ ಕಾಕ್ಕನಾಡದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಎಸ್​ಎಫ್​ಒ ಕಂಪನಿಯಲ್ಲಿ ಗುತ್ತಿಗೆ ನೌಕರನಾಗಿದ್ದ. ಕಳೆದ ಗುರುವಾರ ಕಾಕ್ಕನಾಡದ ಲೇ ಹಯಾತ್​ ಹೋಟೆಲ್​ನಲ್ಲಿ ಶೋರ್ಮಾ ಆರ್ಡರ್​ ಮಾಡಿದ್ದ. ರಾಹುಲ್​ ಸ್ನೇಹಿತನೂ ಸಹ ಶೋರ್ಮಾ ಸೇವನೆ ಮಾಡಿದ್ದು, ಆತನಿಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ, ರಾಹುಲ್​ಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಸಿಕೊಳ್ಳಲು ಆರಂಭವಾದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದ. ಆದರೆ, ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾದ್ದರಿಂದ ಭಾನುವಾರ ಬೆಳಗ್ಗೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ. ಹೆಲ್ತ್​ ಬುಲೆಟಿನ್​ ಪ್ರಕಾರ ಶೋರ್ಮಾ ತಿಂದ ಬಳಿಕ ಫುಡ್​ ಪಾಯಿಸನ್​ ಆಗಿದ್ದು, ಅಂಗಾಂಗಳ ವೈಫಲ್ಯದಿಂದ ರಾಹುಲ್​ ಮೃತಪಟ್ಟಿದ್ದಾನೆಂದು ಹೇಳಲಾಗಿದೆ.
ರಾಹುಲ್ ಸಾವಿನ ಬಳಿಕ ಆತನ ಸ್ನೇಹಿತರು ತ್ರಿಕಕ್ಕರ ಪುರಸಭೆಯ ಆರೋಗ್ಯ ಇಲಾಖೆಗೆ ದೂರವಾಣಿ ಮೂಲಕ ದೂರು ನೀಡಿದ್ದು, ಪುರಸಭೆಯ ಆರೋಗ್ಯ ಮೇಲ್ವಿಚಾರಕ ಸಹದೇವನ್ ನೇತೃತ್ವದ ತಂಡ, ರಾಹುಲ್​ ಶೋರ್ಮಾ ಖರೀದಿಸಿದ ‘ಲೇ ಹಯಾತ್’ ಮೇಲೆ ದಾಳಿ ಮಾಡಿ ಹೋಟೆಲ್​ ಅನ್ನು ಸ್ಥಗಿತಗೊಳಿಸಿತು. ನಾಳೆ ಕಲಮಶ್ಶೇರಿ ವೈದ್ಯಕೀಯ ಕಾಲೇಜಿನಲ್ಲಿ ರಾಹುಲ್, ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಸಾವಿಗೆ ನಿಖರ ಕಾರಣ ಏನೆಂಬುದು ತಿಳಿಯಲಿದೆ.(ಏಜೆನ್ಸೀಸ್​)
ಚಿಕನ್​ ಶೋರ್ಮಾ ತಿಂದ ಮರುದಿನವೇ ವಿದ್ಯಾರ್ಥಿನಿ ಸಾವು: ಮರಣೋತ್ತರ ವರದಿಯಲ್ಲಿತ್ತು ಸ್ಫೋಟಕ ಸಂಗತಿ

ಫುಡ್​ ಪಾರ್ಸೆಲ್​ ತೆರೆದ ಗ್ರಾಹಕಿಗೆ ಕಾದಿತ್ತು ಶಾಕ್​: ಪರೋಟ ಜತೆಯಿತ್ತು ಭಯ ಹುಟ್ಟಿಸುವ ವಸ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 19 =
Remember me
