ನವದೆಹಲಿ:ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಎಂಬಿಬಿಎಸ್ ಮತ್ತು ಪಿಜಿ ಸೀಟುಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಮಾಹಿತಿ ನೀಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ದೇಶದ ಒಟ್ಟು ಎಂಬಿಬಿಎಸ್ ಸೀಟುಗಳ ಸಂಖ್ಯೆ 1,08,940ಕ್ಕೆ ಅಂದರೆ ಶೇ.112ರಷ್ಟು ಹೆಚ್ಚಳ ಮತ್ತು ಪಿಜಿ ಸೀಟುಗಳು 70,674ಕ್ಕೆ ಏರಿಕೆ ಆಗಿದೆ. 2014ರವರೆಗೆ ದೇಶದಲ್ಲಿ 51,348 ಎಂಬಿಬಿಎಸ್ ಸೀಟುಗಳು ಮಾತ್ರ ಇದ್ದವು. 2014ರಿಂದ 10 ವರ್ಷಗಳಲ್ಲಿ 57,592 ಹೆಚ್ಚಿನ ಸ್ಥಾನಗಳನ್ನು ಸೇರಿಸಲಾಗಿದೆ ಎಂದು ಸಚಿವರು ತಮ್ಮ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ 39,489 ಪಿಜಿ ಸೀಟುಗಳನ್ನು ಹೆಚ್ಚಿಸಲಾಗಿದೆ. 65 ವರ್ಷಗಳಲ್ಲಿ ದೇಶದಲ್ಲಿ ಕೇವಲ 31,185 ಪಿಜಿ ಸೀಟುಗಳು ಮಾತ್ರ ಇದ್ದವು. ಈಗ ಈ ಹೆಚ್ಚುವರಿ ಸೀಟುಗಳೊಂದಿಗೆ, ದೇಶದಲ್ಲಿ ನೀಡಲಾಗುವ ಒಟ್ಟು ಪಿಜಿ ಸೀಟುಗಳು 70,674 ಆಗಿದೆ. ಈ 10 ವರ್ಷಗಳಲ್ಲಿ (2014 ರಿಂದ 2024) ದೇಶದಲ್ಲಿ ಪಿಜಿ ಸೀಟುಗಳಲ್ಲಿ ಶೇ.127ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಬ್ರೇಕ್​ಅಪ್​ ವದಂತಿ ನಡುವೆಯೇ ಒಟ್ಟಾಗಿ ಕಾಣಿಸಿಕೊಂಡ ಅರ್ಜುನ್​-ಮಲೈಕಾ
ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಡಾ ಭಾರತಿ ಪ್ರವೀಣ್ ಪವಾರ್ ಅವರು ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್ಎಸ್) ಅಡಿಯಲ್ಲಿ 157 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಮೂರು ಹಂತಗಳಲ್ಲಿ ಅನುಮೋದಿಸಲಾಗಿದೆ ಎಂದಿರುವ ಅವರು ಒಟ್ಟು 157ರಲ್ಲಿ 108 ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
ಸರ್ಕಾರ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಳದೊಂದಿಗೆ ಮತ್ತು ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಿದೆ. ಸೀಟು ಹೆಚ್ಚಳ ನಿರ್ಧಾರದಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೂ ವೈದ್ಯಕೀಯ ಶಿಕ್ಷಣ ದೊರಕಲಿದೆ. ದೇಶದಲ್ಲಿನ ವೈದ್ಯರ ಕೊರತೆ ನೀಗಲಿದೆ ಎಂದು ಪವಾರ್​ ಪ್ರತಿಪಾದಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 1 =
Remember me
