ಕೊಚ್ಚಿ:ಕರೊನಾ ವೈರಸ್​ ಬಂದಾಗಿನಿಂದ ದೇಶದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್​ಗಳ ಬೇಡಿಕೆ ಹೆಚ್ಚಾಗಿದೆ. ಸೋಂಕು ಹರಡುವಿಕೆಯನ್ನು ತಟೆಗಟ್ಟುವ ಸಲುವಾಗಿ ಜನರು ಮಾಸ್ಕ್​, ಸ್ಯಾನಿಟೈಸರ್​ಗಳನ್ನು ಕೊಳ್ಳಲು ಮೆಡಿಕಲ್​ ಶಾಪ್​ಗಳಿಗೆ ಮುಗಿಬಿದ್ದಿದ್ದಾರೆ. ಪೂರೈಕೆಗಿಂತ ಬೇಡಿಕೆ ಹೆಚ್ಚಾದ ಕಾರಣ ಮೆಡಿಕಲ್​ ಶಾಪ್​ಗಳು ಅವುಗಳ ಬೆಲೆಯನ್ನು ಹೆಚ್ಚಿಸಿ ಮಾರಾಟ ಮಾಡಲಾರಂಭಿಸಿವೆ. ಆದರೆ ಇಲ್ಲೊಂದು ಮೆಡಿಕಲ್​ ಶಾಪ್​ನಲ್ಲಿ ಕೇವಲ 2 ರೂಪಾಯಿಗೆ ಮಾಸ್ಕ್​ಗಳನ್ನು ಮಾರಾಟ ಮಾಡುತ್ತಿದ್ದು, ಜನರ ಮೆಚ್ಚುಗೆಗೆ ಈ ಶಾಪ್​ ಪಾತ್ರವಾಗಿದೆ.
ಕೇರಳದ ಕೊಚ್ಚಿಯಲ್ಲಿರುವ ಮೆಡಿಕಲ್​ ಶಾಪ್​ ಒಂದರಲ್ಲಿ ಮಾಸ್ಕ್​ಗಳನ್ನು ಕೇವಲ 2 ರೂಪಾಯಿಗೆ ಮಾರಲಾಗುತ್ತಿದೆ. ಕಳೆದ ಎಂಟು ವರ್ಷಗಳಿಂದ 2 ರೂಪಾಯಿಗೆ ಮಾಸ್ಕ್​ ಮಾರಾಟ ಮಾಡಲಾಗುತ್ತಿದ್ದು, ಕರೊನಾ ಹಿನ್ನೆಲೆ ಅದರ ಬೆಲೆಯನ್ನು ಏರಿಕೆ ಮಾಡದೆ ಅದೇ ಬೆಲೆಗೆ ನೀಡುತ್ತಿದ್ದೇವೆ ಎನ್ನುತ್ತಾರೆ ಅಂಗಡಿಯ ಮಾಲೀಕರಲ್ಲಿ ಒಬ್ಬರಾದ ನಾಧೀಮ್​. ಮಾಸ್ಕ್​ನ್ನು ಕೊಳ್ಳುವಾಗ ಇವರಿಗೆ ಒಂದು ಮಾಸ್ಕ್​ಗೆ 8ರಿಂದ 10 ರೂಪಾಯಿ ಖರ್ಚು ಬೀಳುತ್ತದೆಯಂತೆ. ಈ ವಿಚಾರದಲ್ಲಿ ಲಾಭಕ್ಕಿಂತ ಮಾನವೀಯತೆ ದೊಡ್ಡದು ಎನ್ನುವ ಕಾರಣದಿಂದ ಕಡಿಮೆ ಬೆಲೆಯಲ್ಲಿ ಮಾಸ್ಕ್​ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಬೇರೆ ಶಾಪ್​ಗಳಲ್ಲಿ ಇದೇ ಮಾಸ್ಕ್​ನ್ನು 25 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ದೇಶದಲ್ಲಿ ಕರೊನಾ ಭೀತಿ ಹೆಚ್ಚಾದ ಹಿನ್ನೆಲೆ ಕಳೆದ ಎರಡೇ ದಿನಗಳಲ್ಲಿ 5000ಕ್ಕೂ ಹೆಚ್ಚು ಜನರು ಈ ಮೆಡಿಕಲ್ ಶಾಪ್​ನಲ್ಲಿ ಮಾಸ್ಕ್​ ಖರೀದಿ ಮಾಡಿದ್ದಾರಂತೆ. ವಿದ್ಯಾರ್ಥಿಗಳು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ನರ್ಸ್​ಗಳು ಮತ್ತು ಇತರೆ ಸಿಬ್ಬಂದಿಗೆ ಮಾಸ್ಕ್​ನ ಅಗತ್ಯತೆ ಜಾಸ್ತಿ ಇದ್ದು ಅಂತವರಿಗೆ ಸಂತೋಷದಿಂದ ಮಾಸ್ಕ್​ ನೀಡುತ್ತೇವೆ ಎಂದು ಮೆಡಿಕಲ್​ ಶಾಪ್​ನ ಮಾಲೀಕರು ತಿಳಿಸಿದ್ದಾರೆ.(ಏಜೆನ್ಸೀಸ್​)
ಏನೇ ಮಾಡಿದರೂ ಸೋಂಕಿನಲ್ಲಿ ಕಂಡಿಲ್ಲ ಇಳಿಕೆ; ಭಾರತದಲ್ಲಿ 93ಕ್ಕೆ ಏರಿದ ಕರೊನಾ ಸೋಂಕಿತರ ಸಂಖ್ಯೆ

ಕಾಂಗ್ರೆಸ್​ಗೆ ಶಾಕ್​ ಮೇಲೆ ಶಾಕ್​: ಮಧ್ಯಪ್ರದೇಶ ಬೆನ್ನಲ್ಲೇ ಗುಜರಾತಿನ ಇಬ್ಬರು ಶಾಸಕರಿಂದ ರಾಜೀನಾಮೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 20 =
Remember me
