ಕೋಟಾ:ಮೆಡಿಕಲ್ ಸ್ಟೂಡೆಂಟ್​ ಆಗಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ, ಮೇ.05 ರಂದು ನೀಟ್ ಪರೀಕ್ಷೆ ಬರೆದ ಬಳಿಕ ತನ್ನ ಮನೆಯಿಂದ ಕಾಣೆಯಾದ ಘಟನೆ ರಾಜಸ್ಥಾನದ ಕೋಟಾದಲ್ಲಿ ವರದಿಯಾಗಿದೆ. ಕೋಟಾದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ, ತನ್ನ ಎಕ್ಸಾಂ ಮುಗಿಸಿದ ಮರುದಿನವೇ ದಿಢೀರ್​ ಎನ್ನುವಂತೆ ಮನೆಯಿಂದ ನಾಪತ್ತೆಯಾಗಿದ್ದಾನೆ. ಇದರಿಂದ ಆತನ ಪೋಷಕರು ಕಂಗಾಲಾಗಿದ್ದು, ಸ್ಥಳೀಯ ಪೊಲೀಸರಲ್ಲಿ ತಮ್ಮ ಪುತ್ರನನ್ನು ಹುಡುಕಿಕೊಡಿ ಎಂದು ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಬೆಂಬಲಿತ ಐಪಿಒ: ಗ್ರೇ ಮಾರ್ಕೆಟ್​ನಲ್ಲಿ ಭರ್ಜರಿ ಪ್ರೀಮಿಯಂ, ಹೂಡಿಕೆದಾರರಿಗೆ ಲಾಭ ಖಚಿತ
ಮನೆ ಬಿಟ್ಟು ಹೋದ ಯುವಕನನ್ನು ರಾಜೇಂದ್ರ ಮೀನಾ ಎಂದು ಹೇಳಲಾಗಿದ್ದು, ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ನಿವಾಸಿ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕ, ಮೇ.05ರಂದು ಎಕ್ಸಾಂಗೆ ಹಾಜರಾಗಿದ್ದ ಎಂದು ವರದಿಯಾಗಿದೆ.
ಪರೀಕ್ಷೆ ಬರೆದ ರಾಜೇಂದ್ರ ಮನೆಗೆ ಬಂದ ಬಳಿಕ ಊರು ಬಿಡಲು ಚಿಂತಿಸಿದ್ದು, “ನನಗೆ ಓದನ್ನು ಮುಂದುವರೆಸಲು ಸಾಧ್ಯವಾಗ್ತಿಲ್ಲ. ಹಾಗಾಗಿ ಐದು ವರ್ಷಗಳ ಕಾಲ ನಾನು ನಿಮ್ಮಿಂದ ದೂರ ಉಳಿಯುತ್ತೇನೆ. 5 ವರ್ಷಗಳ ಬಳಿಕ ಮನೆಗೆ ಹಿಂತಿರುಗುವೆ. ಸದ್ಯಕ್ಕೆ ನನ್ನ ಬಳಿ 8 ಸಾವಿರ ರೂ. ಹಣವಿದೆ. ಪ್ರಮಾಣ ಮಾಡಿ ಹೇಳ್ತೀನಿ ಅಪ್ಪ-ಅಮ್ಮ, ವರ್ಷಕ್ಕೆ ಒಂದು ಬಾರಿಯಾದರೂ ಕರೆ ಮಾಡಿ, ನಿಮ್ಮೊಂದಿಗೆ ಮಾತನಾಡ್ತೀನಿ” ಎಂದು ವಾಟ್ಸ್​ಆ್ಯಪ್​ ಸಂದೇಶದಲ್ಲಿ ತಿಳಿಸಿದ್ದಾನೆ.
ಇದನ್ನೂ ಓದಿ:ಎರಡು ತಲೆ ಹಾವನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರ ಪ್ರಾಮಾಣಿಕತೆ; ನಿಸರ್ಗ ಹೋಟೆಲ್ ಮಾಲೀಕರ ಸೇವೆಗೆ ಮೆಚ್ಚುಗೆ
ಈ ವಿಷಯಕ್ಕೆ ಪ್ರತಿಕ್ರಿಯಿಸಿದ ರಾಜೇಂದ್ರ ತಂದೆ, “ನನ್ನ ಹೆಂಡತಿಯ ಆರೋಗ್ಯ ಸರಿಯಿಲ್ಲ. ಆಕೆ ಪ್ರತಿದಿನ ಕಣ್ಣೀರಿಡುತ್ತಿದ್ದಾಳೆ. ಅವನು ನನ್ನ ಕಿರಿಯ ಪುತ್ರ, ತನ್ನ ಸ್ವಇಚ್ಛೆಯಿಂದ ಕೋಟಾಗೆ ತೆರಳಿ, ವಿದ್ಯಾಭ್ಯಾಸ ಮಾಡ್ತೀನಿ ಎಂದು ಹೋದವನು. ನಾವೇನು ಬಲವಂತದಿಂದ ಓದು ಎಂದು ಹೇಳಿದ್ದಲ್ಲ. ಆದರೆ, ಈ ಘಟನೆ ಇದೀಗ ನಮಗೆ ಭಾರೀ ಆಘಾತ ತಂದೊಡ್ಡಿದ್ದು, ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ. ದಯವಿಟ್ಟು ನಮ್ಮ ಮಗನನ್ನು ಹುಡುಕಿಕೊಡಿ” ಎಂದು ಅಳಲು ತೋಡಿಕೊಂಡಿದ್ದಾರೆ,(ಏಜೆನ್ಸೀಸ್).
ಅಶ್ಲೀಲ ವಿಡಿಯೋ ವಿವಾದ: ನಟಿ ಜ್ಯೋತಿ ರೈ ಪರ ಫ್ಯಾನ್ಸ್​ ಮಾಡಿಕೊಂಡ ಮನವಿ ಇದು!

ಧೋನಿ ಸಹ ಪಾಠ ಕಲಿಸಲು ಸಾಧ್ಯವಿಲ್ಲ… ಶಾಕಿಂಗ್ ಹೇಳಿಕೆ ನೀಡಿದ ಹಾರ್ದಿಕ್ ಪಾಂಡ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
