ನವದೆಹಲಿ:ಕೋವಿಡ್ ಸಂಕಷ್ಟದ ಕಾಲದಲ್ಲಿ ಎರಡು ಜೀವರಕ್ಷಕ ಔಷಧಗಳ ಮೇಲಿನ ತೆರಿಗೆ ರದ್ದುಗೊಳಿಸುವ ಜತೆಯಲ್ಲೇ ಕರೊನಾ ಔಷಧಗಳ ಮೇಲಿರುವ ತೆರಿಗೆ ವಿನಾಯಿತಿಯನ್ನು ಡಿಸೆಂಬರ್ 31ರ ತನಕ ವಿಸ್ತರಿಸುವ ಮಹತ್ವದ ನಿರ್ಧಾರ 45ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಹೊರಹೊಮ್ಮಿದೆ. ಶುಕ್ರವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಸಭೆಯ ಬಳಿಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜಿಎಸ್​ಟಿ ಸಭೆಯ ತೀರ್ವನಗಳನ್ನು ಪ್ರಕಟಿಸಿದರು. ಭಾರಿ ನಿರೀಕ್ಷೆ ಹುಟ್ಟಿಸಿದ್ದ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ಪ್ರಸ್ತಾವನೆ ವಿಚಾರವಾಗಿ ಸಭೆಯಲ್ಲಿ ಯಾವುದೇ ನಿರ್ಧಾರವಾಗಿಲ್ಲ. ವಿಶೇಷವಾಗಿ ಪೆಟ್ರೋಲಿಯಂ ಉತ್ಪನ್ನಗಳು ಸರ್ಕಾರಕ್ಕೆ ಹೆಚ್ಚಿನ ಆದಾಯ ಒದಗಿಸುತ್ತಿವೆ ಎಂಬುದು ಈ ತೀರ್ವನದ ಹಿಂದಿರುವ ಒಳಸುಳಿ.
‘ಒಂದು ದೇಶ ಒಂದು ತೆರಿಗೆ’ ವ್ಯವಸ್ಥೆಯಾಗಿರುವ ಜಿಎಸ್​ಟಿಯನ್ನು 2017ರ ಜುಲೈ 1ರಂದು ಜಾರಿಗೊಳಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಆದಾಯ ಮೂಲವಾಗಿರುವ ಕಚ್ಚಾ ತೈಲ, ನೈಸರ್ಗಿಕ ಅನಿಲ, ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್​ಗಳನ್ನು ಆ ಸಂದರ್ಭದಲ್ಲಿಯೇ ಜಿಎಸ್​ಟಿ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಈ ಪ್ರಕಾರವಾಗಿ ಕೇಂದ್ರ ಸರ್ಕಾರ ಇವುಗಳ ಮೇಲೆ ಅಬಕಾರಿ ಸುಂಕ ಹೇರಿದರೆ, ರಾಜ್ಯ ಸರ್ಕಾರಗಳು ವ್ಯಾಟ್ ಹೇರುತ್ತಿವೆ. ಈ ತೆರಿಗೆಯನ್ನು ಕಾಲಾನುಕ್ರಮದಲ್ಲಿ ಏರಿಸುತ್ತಲೇ ಬರಲಾಗಿದೆ. ಇಂಧನ ದರ ಹೆಚ್ಚಳ ಅಥವಾ ಕಡಿಮೆಯಾದಾಗಲೂ ತೆರಿಗೆ ದರ ಇಳಿಕೆಯಾಗಿಲ್ಲ ಎಂಬ ಟೀಕೆ ವ್ಯಾಪಕವಾಗಿದೆ. ಪೆಟ್ರೋಲ್ ಮೇಲಿನ ಸಬ್ಸಿಡಿಯನ್ನು 2010ರಲ್ಲೂ, ಡೀಸೆಲ್ ಮೇಲಿನ ಸಬ್ಸಿಡಿಯನ್ನು 2014ರಲ್ಲೂ ಕೇಂದ್ರ ಸರ್ಕಾರ ಕೊನೆಗೊಳಿಸಿತ್ತು.
ಗ್ರಾಹಕರ ಮೇಲಿಲ್ಲ ಹೊರೆ:ಸ್ವಿಗ್ಗಿ, ಜೊಮ್ಯಾಟೊ ಮುಂತಾದ ಡೆಲಿವರಿ ವೇದಿಕೆಗಳ ಮೇಲೆ ಶೇಕಡ 5 ಜಿಎಸ್​ಟಿ ಅನ್ವಯಿಸುತ್ತದೆ. ರೆಸ್ಟೋರೆಂಟ್​ಗಳು ಪಾವತಿಸುತ್ತಿದ್ದ ತೆರಿಗೆಯನ್ನು ಇನ್ನು ಸ್ವಿಗ್ಗಿ ಮತ್ತು ಜೊಮ್ಯಾಟೊ ಮೂಲಕ ಸಂಗ್ರಹಿಸಲಾಗುತ್ತದೆ. ಕೆಲವು ರೆಸ್ಟೋರೆಂಟ್​ಗಳು ತೆರಿಗೆ ಪಾವತಿಸದೆ ವಂಚಿಸುತ್ತಿರುವುದು ಬೆಳಕಿಗೆ ಬಂದ ಕಾರಣ ಜಿಎಸ್​ಟಿ ಕೌನ್ಸಿಲ್ ಈ ತೀರ್ವನಕ್ಕೆ ಬಂದಿದೆ. ಇದುವರೆಗೆ ರೆಸ್ಟೋರೆಂಟ್​ಗಳು ತೆರಿಗೆ ಪಾವತಿಸುತ್ತಿದ್ದವು. ಸ್ವಿಗ್ಗಿ, ಜೊಮ್ಯಾಟೊ ಮುಂತಾದ ವೇದಿಕೆಗಳು ತೆರಿಗೆ ಪಾವತಿಸುವ ಅವಶ್ಯಕತೆ ಇರಲಿಲ್ಲ. ಸ್ವಿಗ್ಗಿ ಅಥವಾ ಜೊಮ್ಯಾಟೊ ಮೇಲೆ ಈ ತೆರಿಗೆ ಭಾರ ಬಿದ್ದರೂ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ತೈಲೋತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ವಿಚಾರ ಪರಿಶೀಲನೆಗೆ ಒಳಗಾಗಿದೆ. ಆದರೆ ಅದಕ್ಕೀಗ ಸಕಾಲವಲ್ಲ.
|ನಿರ್ಮಲಾ ಸೀತಾರಾಮನ್ವಿತ್ತ ಸಚಿವೆ
ಹೊಸ ಸೇರ್ಪಡೆ:ಹೊಸ ಪಾದರಕ್ಷೆ ಮತ್ತು ಜವಳಿ ದರಗಳನ್ನು ಜನವರಿ 1ರಿಂದ ಜಿಎಸ್​ಟಿ ವ್ಯಾಪ್ತಿಗೆ ಅನ್ವಯಿಸಲು ತೀರ್ವನ.
ಬೆಲೆ ಏರಿಕೆ:ಎಲ್ಲ ಮಾದರಿಯ ಪೆನ್​ಗಳ ಮೇಲೆ ಶೇಕಡ 18 ತೆರಿಗೆ ್ಝಶ್ಚಿತ ಮರುಬಳಕೆಯ ಸೆಕ್ಟರ್​ನ ಉಪಕರಣ ಮೇಲೆ ಶೇಕಡ 12 ತೆರಿಗೆ.
ಇಳಿಕೆ:ಕ್ಯಾನ್ಸರ್​ ಸಂಬಂಧಿತ ಡ್ರಗ್ಸ್​ ಮೇಲಿನ ತೆರಿಗೆ ಶೇ.12ರಿಂದ ಶೇಕಡ 5ಕ್ಕೆ ಮತ್ತು ಮಂಡಕ್ಕಿ ಮೇಲಿನ ತೆರಿಗೆ ಶೇಕಡ 18ರಿಂದ ಶೇಕಡ 5ಕ್ಕೆ ಇಳಿಸಲಾಗಿದೆ. ಡೀಸೆಲ್​​ಗೆ ಸೇರಿಸುವ ಬಯೋ ಡೀಸೆಲ್ ಮೇಲಿನ ತೆರಿಗೆ ಶೇಕಡ 12ರಿಂದ ಶೇಕಡ 5ಕ್ಕೆ ಇಳಿಸಲಾಗಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − six =
Remember me
