ನವದೆಹಲಿ:ಭಾರತೀಯ ಅಂಚೆ ಸೇವೆಗಳು ಮೊದಲಿನಿಂದಲೂ ದೇಶದ ಜೀವನಾಡಿಯಾಗಿದೆ. ಅಂಚೆಯಣ್ಣ ಸೇವೆ ಇಲ್ಲದ ದಿನಗಳನ್ನು ಊಹಿಸಲೂ ಸಾಧ್ಯವಿಲ್ಲ. ಹೀಗಿದ್ದೂ ಆಧುನಿಕತೆಯ ಈ ಕಾಲಘಟ್ಟದಲ್ಲಿ ಅಂಚೆ ಸೇವೆಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ, ಅಗತ್ಯದ ಸಂದರ್ಭದಲ್ಲಿ ಈ ಸೇವೆ ಜೀವನಾಡಿ ಎಂಬ ಪದಕ್ಕೆ ನಿಜಕ್ಕೂ ಅನ್ವರ್ಥಕವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಅದು 8 ವರ್ಷದ ಮಗು. ಕ್ಯಾನ್ಸರ್​ನಿಂದ ಬಳಲುತ್ತಿದೆ. ಈ ಮಗು ಇರುವುದು ಹಿಮಾಚಲ ಪ್ರದೇಶದ ಉನಾದಲ್ಲಿ. ಕ್ಯಾನ್ಸರ್​ ಚಿಕಿತ್ಸೆಗೆ ಅಗತ್ಯವಾದ ಔಷಧ ಮುಗಿದು ಹೋಗಿತ್ತು. ಲಾಕ್​ಡೌನ್​ ಅವಧಿಯಲ್ಲಿ ಈ ಔಷಧವನ್ನು ದೆಹಲಿಯಿಂದ ತರಿಸಬೇಕಿತ್ತು.
ಅದಕ್ಕಾಗಿ ಮಗುವಿನ ತಾಯಿ ಶಾಲಿನಿ ಅವರು ದೆಹಲಿಯಲ್ಲಿದ್ದ ಸ್ನೇಹಿತೆಯನ್ನು ಸಂಪರ್ಕಿಸಿದರು. ಔಷಧವೇನೋ ಸಿಕ್ಕಿತು. ಆದರೆ ಲಾಕ್​ಡೌನ್​ನಿಂದಾಗಿ ಕೊರಿಯರ್​ ಸೇವೆ ಲಭ್ಯವಿರಲಿಲ್ಲ. ಹಾಗಾಗಿ ಅಂಚೆ ಸೇವೆಗಳನ್ನು ಬಳಸುವುದು ಅನಿವಾರ್ಯವಾಗಿತ್ತು. ಆದರೆ, ಲಾಕ್​ಡೌನ್​ ಈ ಸೇವೆಯನ್ನು ಬಾಧಿಸುತ್ತಿದುದರಿಂದ ಮುಂದೇನು ಎಂಬ ಪ್ರಶ್ನೆ ಎದುರಾಯಿತು.
ತಕ್ಷಣವೇ ಶಾಲಿನಿ ಅವರ ಸ್ನೇಹಿತೆ ಕೇಂದ್ರ ಸಂಪರ್ಕ ಸಚಿವ ರವಿಶಂಕರ್​ ಪ್ರಸಾದ್​ ಅವರನ್ನು ಸಂಪರ್ಕಿಸಿ, ಪರಿಸ್ಥಿತಿಯನ್ನು ವಿವರಿಸಿದರು. ಮಗುವಿನ ಪರಿಸ್ಥಿತಿ ಅರ್ಥ ಮಾಡಿಕೊಂಡ ರವಿಶಂಕರ್​ ಪ್ರಸಾದ್​, ಹೇಗಾದರೂ ಮಾಡಿ ಔಷಧವನ್ನು ಸಕಾಲದಲ್ಲಿ ಹಿಮಾಚಲಪ್ರದೇಶದ ವಿಳಾಸಕ್ಕೆ ತಲುಪಿಸುವಂತೆ ಅಂಚೆ ಇಲಾಖೆಗೆ ಸೂಚಿಸಿದರು.
ಅದರಂತೆ ದೆಹಲಿ, ಹರಿಯಾಣ, ಪಂಜಾಬ್​ ಮತ್ತು ಹಿಮಾಚಲ ಪ್ರದೇಶ ಅಂಚೆ ವೃತ್ತದ ಅಧಿಕಾರಿಗಳು ಒಟ್ಟಾಗಿ ಔಷಧದ ರವಾನೆಗೆ ತಂತ್ರಗಾರಿಕೆ ರೂಪಿಸಿದರು. ಆಯಾ ವೃತ್ತದ ಅಂಚೆ ವಾಹನಗಳ ನೆರವಿನಿಂದ ಔಷಧವನ್ನು ರವಾನಿಸಲಾಯಿತು. ಕೊನೆಯ ಘಟ್ಟದಲ್ಲಿ ಪಂಜಾಬ್​ ವೃತ್ತದ ಅಂಚೆ ವಾಹನದಲ್ಲಿ ಏಪ್ರಿಲ್​ 19ರ ಬೆಳಗ್ಗೆ ಉನಾದಲ್ಲಿರುವ ಮಗುವಿನ ಮನೆ ಬಾಗಿಲಿಗೇ ಔಷಧವನ್ನು ತಲುಪಿಸಲಾಯಿತು.
ತಮ್ಮ ಪುತ್ರನಿಗೆ ಅಗತ್ಯವಾದ ಔಷಧವನ್ನು ಸಕಾಲದಲ್ಲಿ ತಲುಪಿಸಿದ್ದಕ್ಕಾಗಿ ಶಾಲಿನಿ ಅಂಚೆ ಇಲಾಖೆಗೆ ಕೃತಜ್ಞತೆ ಅರ್ಪಿಸಿದ್ದಾರೆ. ತಮ್ಮ ಸೂಚನೆಯ ಮೇರೆಗೆ ಔಷಧ ತಲುಪಿಸಿ ಮಾನವೀಯತೆ ಮೆರೆದಿದ್ದಕ್ಕಾಗಿ ಸಚಿವ ರವಿಶಂಕರ್​ ಪ್ರಸಾದ್​ ಅವರು ಇಲಾಖೆಗೆ ಧನ್ಯವಾದ ಹೇಳಿದ್ದಲ್ಲದೆ, ಔಷಧ ತಲುಪಿಸಲು ಶ್ರಮಿಸಿದ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ಅಲ್ಲದೆ, ಸಂಕಷ್ಟದ ಸಂದರ್ಭದಲ್ಲಿ ಇಲಾಖೆಯ ಶುಲ್ಕರಹಿತ ಸಂಖ್ಯೆ1800 266 6868ಸಂಖ್ಯೆ ಸಂಪರ್ಕಿಸಿ ಸೇವೆ ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಭಾರತದ ಪ್ರವಾಸಕ್ಕೆಂದು ವಿದೇಶಗಳಿಂದ ಬಂದರು, ಲಾಕ್​ಡೌನ್​ನಲ್ಲಿ ಸಿಲುಕಿಕೊಂಡು ಗುಹೆ ಸೇರಿದರು… ಮುಂದೆ…!?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − seven =
Remember me
