ಮೀರತ್‌:ಕ್ಷಣಕ್ಷಣಕ್ಕೂ ಕರೊನಾ ಆತಂಕ ಸೃಷ್ಟಿಸುತ್ತಿರುವ ಬೆನ್ನಲ್ಲೇ ಇದನ್ನೇ ಬಂಡವಾಳ ಮಾಡಿಕೊಂಡಿರುವ ಉತ್ತರ ಪ್ರದೇಶದ ಮೀರತ್‌ನ ನರ್ಸಿಂಗ್‌ ಹೋಂ ಒಂದು ಹಣ ಮಾಡುವ ದಂಧಗೆ ಇಳಿದು ಆತಂಕ ಸೃಷ್ಟಿಸಿದೆ.
ನಿಮಗೆ ಕರೊನಾ ನೆಗೆಟಿವ್‌ ಪ್ರಮಾಣಪತ್ರ ಬೇಕೇ ಇಲ್ಲಿ ಬನ್ನಿ ಎಂದು ಈ ನರ್ಸಿಂಗ್‌ ಹೋಂ ಹೇಳುತ್ತಿದ್ದು, ಅದೆಷ್ಟು ಮಂದಿಗೆ ನಕಲಿ ಪ್ರಮಾಣ ಪತ್ರ ನೀಡಲಾಗಿದೆಯೋ ತಿಳಿಯದಾಗಿದೆ. ಇಂಥ ಆರೋಪ ಹೊತ್ತ ನರ್ಸಿಂಗ್‌ ಹೋಂನ ಪರವಾನಗಿಯನ್ನು ಇದೀಗ ಉತ್ತರ ಪ್ರದೇಶ ಸರ್ಕಾರ ರದ್ದು ಮಾಡಿದೆ.
ಇದನ್ನೂ ಓದಿ:ಖಾಸಗಿ ಲ್ಯಾಬ್​ನಲ್ಲಿ ರಿಯಾಯಿತಿ ದರದಲ್ಲಿ ಪರೀಕ್ಷೆಗೆ ಮೊರೆ: ವರದಿ ವಿಳಂಬಕ್ಕೆ ಖಾಕಿ ಆಕ್ರೋಶ
2500 ರೂಪಾಯಿ ಕೊಟ್ಟರೆ ನೆಗೆಟಿವ್‌ ವರದಿ ನೀಡುವುದಾಗಿ ಈ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಹೇಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ತಮ್ಮ ಆಸ್ಪತ್ರೆಯಲ್ಲಿ ಇಷ್ಟು ಹಣ ಪಾವತಿಸಿದರೆ ಕರೊನಾ ಸೋಂಕು ಇದ್ದರೂ ನೆಗೆಟಿವ್‌ ವರದಿ ನೀಡಲಾಗುವುದು, ಇದರಿಂದ ನೀವು ಯಾವುದೇ ಸಮಸ್ಯೆಯಿಲ್ಲದೇ ಎಲ್ಲೆಡೆ ಓಡಾಡಿಕೊಂಡಿರಬಹುದು ಎನ್ನುವುದು ಈ ಆಸ್ಪತ್ರೆಯ ಹೇಳಿಕೆಯಾಗಿತ್ತು!
ಈ ವಿಡಿಯೋ ವೈರಲ್‌ ಆದ ಬಳಿಕ ಆಸ್ಪತ್ರೆಯ ಪರವಾನಗಿಯನ್ನು ರದ್ದು ಮಾಡಲಾಗಿದೆ. ಪರವಾನಗಿ ರದ್ದತಿ ಕುರಿತು ಜಿಲ್ಲಾಧಿಕಾರಿ ಅನಿಲ್ ಧಿಂಗ್ರಾ ಮಾಹಿತಿ ನೀಡಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಈ ರೀತಿ ಏನಾದರೂ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.ಉತ್ತರ ಪ್ರದೇಶದಲ್ಲಿದಲ್ಲಿ ಇಲ್ಲಿಯವರೆಗೆ 26,554 ಸೋಂಕು ಪ್ರಕರಣಗಳು ಪತ್ತೆಯಾಗಿವೆ. 18,154 ಮಂದಿ ಗುಣಮುಖರಾಗಿದ್ದು 773 ಸಾವು ಸಂಭವಿಸಿದೆ.(ಏಜೆನ್ಸೀಸ್‌)
ಅಪ್ಪ-ಅಮ್ಮನಿಗೂ ಸೋಂಕು: 17 ದಿನದ ಕಂದನಿಗೆ ವೈದ್ಯರ ಕಣ್ಣೀರ ವಿದಾಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 − 5 =
Remember me
