ಮೇರಠ್​: ದೇಶಾದ್ಯಂತ ಕರೋನಾ ವೈರಸ್​ ಸೋಂಕು ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ ತಬ್ಲಿಘಿ ಜಮಾತ್​ನ ಕೆಲವು ಸದಸ್ಯರ ದುರ್ವರ್ತನೆ ಸಾರ್ವತ್ರಿಕವಾಗಿ ಟೀಕೆಗೆ ಒಳಗಾಗಿದೆ. ಇಂತಹ ವರ್ತನೆಯಿಂದ ಬೇಸತ್ತಿದ್ದ ಉತ್ತರ ಪ್ರದೇಶದ ಹಾಸ್ಪಿಟಲ್​ ಒಂದರ ಆಡಳಿತ ಮಂಡಳಿ ಶುಕ್ರವಾರ ಪತ್ರಿಕೆಗಳಲ್ಲಿ ಪ್ರಕಟಿಸಿದ್ದ ಜಾಹೀರಾತು ಕೂಡ ವ್ಯಾಪಕ ಟೀಕೆಗೆ ಒಳಗಾಯಿತು.
ವಾಲೆಂಟಿಸ್ ಕ್ಯಾನ್ಸರ್ ಹಾಸ್ಪಿಟಲ್ ಜಾಹೀರಾತು ನೀಡಿದ ಆಸ್ಪತ್ರೆ. ಶುಕ್ರವಾರ ಪ್ರಕಟಿಸಿದ ಜಾಹೀರಾತಿನಲ್ಲಿ ಸರ್ಕಾರದ ನಿರ್ದೇಶನ, ಮಾರ್ಗಸೂಚಿಗಳು ಮನವಿಯ ರೂಪದಲ್ಲಿತ್ತು. ಆದರೆ, ಅದರಲ್ಲಿ ತಬ್ಲಿಘಿ ಜಮಾತ್​ನ ಹೆಸರು ಉಲ್ಲೇಖವಾಗಿದ್ದು, ಮುಸ್ಲಿಮರಿಗೆ ಚಿಕಿತ್ಸೆ ಬೇಕು ಎಂದಾದರೆ ಕಡ್ಡಾಯವಾಗಿ ನಿಯಮಪಾಲನೆ ಮಾಡಬೇಕು ಎಂಬ ಅಂಶವೂ ಇತ್ತು. ಈ ಜಾಹೀರಾತು ಪ್ರಕಟವಾದ ಬೆನ್ನಲ್ಲೇ ವ್ಯಾಪಕ ಟೀಕೆಯನ್ನು ಆಸ್ಪತ್ರೆ ಎದುರಿಸಬೇಕಾಯಿತು.
ಪರಿಣಾಮ, ಭಾನುವಾರ ಮತ್ತೊಂದು ಜಾಹೀರಾತು ಪ್ರಕಟಿಸಿದ ಆಸ್ಪತ್ರೆ ಅದರಲ್ಲಿ ಮುಸ್ಲಿಂ ಸಮುದಾಯದ ಕ್ಷಮೆ ಕೋರಿದೆ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದೆ. ಅಲ್ಲದೆ, ಈ ಕುರಿತು ಎಎನ್​ಐಗೆ ಪ್ರತಿಕ್ರಿಯೆ ನೀಡಿರುವ ಆಶ್ಪತ್ರೆಯ ರೇಡಿಯೋ ಆಂಕಾಲಜಿಸ್ಟ್​ ಡಾ. ಅಮಿತ್ ಜೈನ್​, ಎಲ್ಲರೂ ಸುರಕ್ಷಿತವಾಗಿ ಇರುವುದಕ್ಕೆ ಸರ್ಕಾರದ ಮಾರ್ಗಸೂಚಿ ಅನುಸರಿಸಬೇಕು ಎಂಬ ಮನವಿಯನ್ನು ಜಾಹೀರಾತು ಮೂಲಕ ನೀಡಲಾಗಿತ್ತು. ಧರ್ಮಕ್ಕೂ ಅದಕ್ಕೂ ಸಂಬಂಧವಿಲ್ಲ. ಕೆಲವು ಶಬ್ದಗಳು ಜನರ ಭಾವನೆಯನ್ನು ಘಾಸಿಗೊಳಿಸಿದೆ ಎಂಬುದು ವೇದ್ಯವಾಗಿದೆ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ಆಸ್ಪತ್ರೆಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಪೊಲೀಸ್ ಕೇಸ್ ದಾಖಲಾಗಿದೆ. ಅಲ್ಲದೆ, ಮೇರಠ್​ನ ಮುಖ್ಯ ವೈದ್ಯಕೀಯ ಅಧಿಕಾರಿ ರಾಜ್ ಕುಮಾರ್ ಅವರು ಆಸ್ಪತ್ರೆಗೆ ನೋಟಿಸ್ ಕಳುಹಿಸಲಾಗುವುದು. ಈ ರೀತಿ ಮಾಡಬಾರದಾಗಿತ್ತು. ಅದು ನಿಜವಾಗಿಯೂ ತಪ್ಪು ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಎಚ್​ಐವಿ ರೋಗಿಯ ಶವ ಸಾಗಿಸೋಕೆ ವಾಹನಗಳೇ ಸಿಗಲಿಲ್ಲ- ಕೊನೆಗೆ ಸೈಕಲ್​ ಮೇಲೆ ಹೊತ್ತೊಯ್ಯ ಬೇಕಾಯಿತು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
