ಮೀರತ್​ (ಉತ್ತರಪ್ರದೇಶ):ಫೇಸ್​ಬುಕ್​ನಲ್ಲಿ ಅವಹೇಳಕಾರಿ ಪೋಸ್ಟ್​ ಮಾಡಿದ ಆರೋಪಕ್ಕೆ ಗುರಿಯಾಗಿರುವ ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ನವೀನ್​ ತಲೆ ತಗೆಯಿರಿ ಎಂದು ಕರೆ ನೀಡಿದ್ದವನಿಗೆ ಪೊಲೀಸರು ಶಾಕ್​ ನೀಡಿದ್ದಾರೆ.
ಸಮಾಜವಾದಿ ಪಕ್ಷದ ಯುವ ಮುಖಂಡ ಉತ್ತರಪ್ರದೇಶ ಮೀರತ್​ನ ಫಲ್ವಾಡಾ ನಿವಾಸಿಯಾಗಿರುವ ಶಾಝೇಬ್​ ರಿಜ್ವಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ನವೀನ್​ ತಲೆ ತೆಗೆದವರಿಗೆ 51 ಲಕ್ಷ ರೂ. ನೀಡುವುದಾಗಿ ಈತ ಘೋಷಿಸಿದ್ದ.
ಇದನ್ನೂ ಓದಿ;ಎಸ್​ಡಿಪಿಐ, ಪಿಎಫ್​ಐ ನಿಷೇಧ ಆಗಲಿದೆ: ಸಚಿವ ಆರ್​. ಆಶೋಕ್​
ಧರ್ಮದ ಆಧಾರದಲ್ಲಿ ಎರಡು ಗುಂಪುಗಳ ನಡುವೆ ಕಲಹ ಉಂಟುಮಾಡುವ ಯತ್ನದ ಆರೋಪದಲ್ಲಿ ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಆರೋಪಿಯನ್ನು ಇನ್ನೂ ಬಂಧಿಸಿಲ್ಲ. ಏಕೆಂದರೆ, ಹೇಳಿಕೆ ನೀಡಿದ ರಿಜ್ವಿ ತಲೆಮರೆಸಿಕೊಂಡಿದ್ದಾನೆ. ಆತನನ್ನು ಶೀಘ್ರದಲ್ಲಿಯೇ ಬಂಧಿಸಿ ಜೈಲಿಗಟ್ಟುತ್ತೇವೆ ಎಂದು ಫಲ್ವಾಡಾ ಠಾಣಾಧಿಕಾರಿ ಮನೀಷ್​ ಬಿಸ್ತ್​ ತಿಳಿಸಿದ್ದಾರೆ.
ಇದನ್ನೂ ಓದಿ;ಡಿಜೆ ಹಳ್ಳಿ ಗಲಭೆಕೋರರಿಗೆ ಸರ್ಕಾರದ ಸೌಲಭ್ಯ ಕೊಡದಿರಲು ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಆಗ್ರಹ
ರಿಜ್ವಿ ಸಮಾಜವಾದಿ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿಯಾಗಿದ್ದ. ಕೋಮು ಸಾಮರಸ್ಯವನ್ನು ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮೀರತ್​ ಎಸ್ಪಿ ಎಚ್ಚರಿಕೆ ನೀಡಿದ್ದು, ಆರೋಪಿಯ ಹೇಳಿಕೆ ನೀಡಿದ್ದ ವಿಡಿಯೋ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯರಿಗೆ ಶುಭಸುದ್ದಿ; ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಮಾನವರ ಬಳಕೆಗೆ ಸುರಕ್ಷಿತ; ಆರಂಭಿಕ ಯಶಸ್ಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
