ನವದೆಹಲಿ:ಸ್ನೇಹಿತರ ಜತೆ ಮದ್ಯದ ಪಾರ್ಟಿಗೆ ಹೋಗಿದ್ದ ಯುವಕನೊಬ್ಬ, ತನ್ನ ಸಹೋದರಿಯ ಬಗ್ಗೆ ಸ್ನೇಹಿತರು ಕೆಟ್ಟದಾಗಿ ಮಾತನಾಡಿದ್ದನ್ನು ಆಕ್ಷೇಪಿಸಿ ಕೊಲೆಯಾಗಿದ್ದಾನೆ. ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಕೊಳವೆಬಾವಿಯೊಂದರ ಒಳಗೆ ಎಸೆದಿರುವುದಾಗಿ ಆರೋಪಿಗಳು ಹೇಳಿರುವ ಹಿನ್ನೆಲೆಯಲ್ಲಿ ಶವದ ಭಾಗಗಳನ್ನು ಸಂಗ್ರಹಿಸಲು ಪೊಲೀಸರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಯ ಅಧಿಕಾರಿಗಳು ತುಂಬಾ ಎಚ್ಚರಿಕೆಯಿಂದ ಬೋರ್​ವೆಲ್​ ಸುತ್ತ ಅಗೆಯುತ್ತಿದ್ದಾರೆ. ಮೂರು ದಿನಗಳಿಂದ 50 ಅಡಿ ಆಳ ಅಗೆದರೂ ಶವ ಭಾಗಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.
ಜೂ.25ರಂದು ರೂಪಕ್​ ಎಂಬ ಯುವಕ ಮೇರಠ್​ನಲ್ಲಿ ಕಾಣೆಯಾಗಿದ್ದ. ಸ್ನೇಹಿತರ ಜತೆ ಮದ್ಯದ ಪಾರ್ಟಿ ಮಾಡಲೆಂದು ಹೋಗಿದ್ದ ಆತ ಮರುದಿನ ಬೆಳಗ್ಗೆಯಾದರೂ ಮನೆಗೆ ಮರಳಿರಲಿಲ್ಲ. ಇದರಿಂದ ಅನುಮಾನಗೊಂಡ ಆತನ ಮನೆಯವರು ವ್ಯಕ್ತಿ ಕಾಣೆಯಾಗಿರುವ ದೂರು ದಾಖಲಿಸಿದ್ದರು. ಜತೆಗೆ ಅಂದು ಆತನನ್ನು ಕರೆದೊಯ್ದ ಸ್ನೇಹಿತರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಇದನ್ನು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ವಿಕಾಸ್​ ಎಂಬಾತ ಸೇರಿ ಅಂದು ರೂಪಕ್​ನನ್ನು ಕರೆದೊಯ್ದಿದ್ದ ಎಲ್ಲ ನಾಲ್ವರು ಸ್ನೇಹಿತರನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದನ್ನೂ ಓದಿ:ಮದುವೆ ನಿರಾಕರಿಸಿದಕ್ಕೆ ಕುಪಿತನಾಗಿ ಪ್ರೇಯಸಿಯನ್ನು ಇರಿದು ಕೊಂದೇ ಬಿಟ್ಟ!
ವಿಚಾರಣೆಗೆ ಒಳಪಡಿಸಿದಾಗ ನಾಲ್ವರು ಕೂಡ, ಮದ್ಯದ ಅಮಲಿನಲ್ಲಿ ರೂಪಕ್​ನ ಸಹೋದರಿ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದಾಗ ರೂಪಕ್​ ಕುಪಿತನಾದ. ಜತೆಗೆ ನಮ್ಮೆಲ್ಲರ ಮೇಲೆ ಹಲ್ಲೆ ಮಾಡಲು ಮುಂದಾದ. ಆಗ ಆತನನ್ನು ಹಿಡಿದು ಚೆನ್ನಾಗಿ ಥಳಿಸಿ ಸಾಯಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದರು.
ಮೊದಲಿಗೆ ರೂಪಕ್​ನ ದೇಹವನ್ನು ಇಟ್ಟಿಗೆ ಭಟ್ಟಿಯೊಂದರಲ್ಲಿ ಹೂಳಿದ್ದರು. ಆದರೆ, ಸಿಕ್ಕಿಬೀಳುವ ಭೀತಿಯಲ್ಲಿ ಶವವನ್ನು ಹೊರತೆಗೆದೆರು. ಬಳಿಕ ವಿಕಾಸ್​ ಅದನ್ನು ತುಂಡು ತುಂಡಾಗಿ ಕತ್ತರಿಸಿದ. ತುಂಡಾದ ಶವದ ಭಾಗಗಳನ್ನು ಕೊಂಡೊಯ್ದು ಬೋರ್​ವೆಲ್​ನಲ್ಲಿ ವಿಸರ್ಜಿಸಿದ್ದಾಗಿ ನಾಲ್ವರು ಸ್ನೇಹಿತರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಶವದ ತುಂಡುಗಳು ಮತ್ತು ಕೊಲೆ ಮಾಡಲು ಬಳಸಿರಬಹುದಾದ ಆಯುಧವನ್ನು ಪತ್ತೆ ಮಾಡಲು ಆರೋಪಿಗಳು ತೋರಿಸಿರುವ ಬೋರ್​ವೆಲ್​ ಸುತ್ತ ಅಗೆಯುತ್ತಿದ್ದಾರೆ. ಅಗೆಯುವಾಗ ಉಂಟಾಗುವ ಕಂಪನದಿಂದ ಶವದ ತುಂಡುಗಳು ಮತ್ತಷ್ಟು ಆಳಕ್ಕೆ ಹೋಗುವ ಭಯದಲ್ಲಿ ಪೊಲೀಸರು ಮತ್ತು ಮೇರಠ್​ನ ಸ್ಥಳೀಯ ಆಡಳಿತ ಸಂಸ್ಥೆ ಅಧಿಕಾರಿಗಳು ತುಂಬಾ ಎಚ್ಚರಿಕೆಯಿಂದ ಬೋರ್​ವೆಲ್​ ಸುತ್ತ ಅಗೆಯುತ್ತಿದ್ದಾರೆ ಎನ್ನಲಾಗಿದೆ. ಶವದ ತುಂಡುಗಳು ಸಿಗದೇ ಹೋಗಿರುವುದರಿಂದ, ಸದ್ಯಕ್ಕೆ ನಾಲ್ವರನ್ನು ತಮ್ಮ ವಶದಲ್ಲೇ ಇರಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಫೇಸ್​ಬುಕ್​ ಖಾತೆ ರದ್ದುಗೊಳಿಸಿ, ಇಲ್ಲವೇ ಸೇನೆಯಿಂದ ಹೊರನಡಿಯಿರಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − 11 =
Remember me
