ತಿರುವನಂತಪುರ:ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿ, ಕೆಲ ದಿನಗಳ ಕಾಲ ಜೈಲು ವಾಸ ಅನುಭವಿಸಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೇರಳದ ಇನ್​ಸ್ಟಾಗ್ರಾಂ ಹಾಗೂ ಸೆಲೆಬ್ರಿಟಿ ಹಾಗೂ ರೀಲ್ಸ್​ ಸ್ಟಾರ್​ ವಿನೀತ್​, ಇದೀಗ ಮತ್ತೊಮ್ಮೆ ಬಂಧನಕ್ಕೊಳಗಾಗಿದ್ದಾನೆ.
ಹಾಡಹಗಲಲ್ಲೇ ಪೆಟ್ರೋಲ್​ ಪಂಪ್​ ಮ್ಯಾನೇಜರ್​ನಿಂದ ಬರೋಬ್ಬರಿ 2.5 ಲಕ್ಷ ರೂ. ಸುಲಿಗೆ ಮಾಡಿರುವ ಆರೋಪದ ಮೇಲೆ ವಿನೀತ್​ (26) ಮತ್ತು ಆತನ ಸ್ನೇಹಿತ ಜೀತು (22) ಇಬ್ಬರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:World cup 2023: ವಿಶ್ವಕಪ್​ ಆಡಲು ಪಾಕಿಸ್ತಾನಕ್ಕೆ ಭಾರತದ ಈ 2 ನಗರಗಳು ಮಾತ್ರ ಸುರಕ್ಷಿತವಂತೆ!
ಮೀಸೆಕಾರ ವಿನೀತ್​ಅಂದಹಾಗೆ ವಿನೀತ್​ ಸಾಮಾಜಿಕ ಜಾಲತಾಣದಲ್ಲಿ ಮೀಸೆಕಾರ ವಿನೀತ್​ ಎಂದು ಖ್ಯಾತಿ ಪಡೆದಿದ್ದಾನೆ. ಬಂಧಿತ ವಿನೀತ್​ ಮತ್ತು ಜೀತು ವೆಲಾಲ್ಲೂರ್​ ನಿವಾಸಿಗಳು. ಮಗಳಪುರಂ ಪೊಲೀಸರು ಬಂಧಿದ್ದಾರೆ. ವಿನೀತ್​ ಮೇಲೆ ಸುಮಾರು 10 ಕಳ್ಳತನ ಪ್ರಕರಣಗಳಿವೆ. ಈ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಥಾಂಪನೂರ್​ ಪೊಲೀಸರಿಂದ ಬಂಧನವಾಗಿದ್ದ.
A post shared by Vineeth Vijayan (@vineeth___official)

ಕದ್ದ ಬೈಕ್​ನಲ್ಲಿ ಕಳ್ಳತನಮಾರ್ಚ್ 23 ರಂದು ಕನಿಯಾಪುರಂನಲ್ಲಿ ಕಳ್ಳತನ ನಡೆದಿತ್ತು. ನಿಫಿ ಫ್ಯೂಯೆಲ್ಸ್ ಮ್ಯಾನೇಜರ್ ಬ್ಯಾಂಕ್‌ಗೆ ಡೆಪಾಸಿಟ್​ ಇಡಬೇಕಾದ ಮೊತ್ತದೊಂದಿಗೆ ಪಲ್ಲಿಪುರಂ ಶಾಖೆಗೆ ಬರುವಾಗ ವಿನೀತ್​ ಮತ್ತು ಜೀತು ಈ ಕೃತ್ಯ ಎಸಗಿದ್ದಾರೆ. ಕಳುವು ಮಾಡಿದ್ದ ದ್ವಿಚಕ್ರ ವಾಹನದಲ್ಲಿ ವಿನೀತ್ ಮತ್ತು ಆತನ ಸಹಚರರು ಹಣ ದೋಚಿದ್ದಾರೆ. ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಬದಲಾಯಿಸಿರುವುದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸುಲಿಗೆ ಮಾಡಿದ ಬಳಿಕ ಜಿಲ್ಲೆ ಬಿಟ್ಟು ಹಲವೆಡೆ ಲಾಡ್ಜ್​ಗಳಲ್ಲಿ ಆರೋಪಿಗಳು ತಂಗಿದ್ದರು. ಪೊಲೀಸರು ಆರೋಪಿಯನ್ನು ತ್ರಿಶೂರ್‌ನ ಲಾಡ್ಜ್‌ನಲ್ಲಿ ಬಂಧಿಸಿದ್ದಾರೆ.
ಈ ಹಿಂದೆ ಜೈಲಿಗೆ ಹೋಗಿದ್ದೇಕೆ??ವಿನೀತ್​ ಇನ್​ಸ್ಟಾಗ್ರಾಂ ರೀಲ್ಸ್​ ಮೂಲಕವೇ ಕೇರಳದಲ್ಲಿ ಖ್ಯಾತಿ ಪಡೆದುಕೊಂಡಿದ್ದಾನೆ. ವಿಡಿಯೋ ಮೂಲಕ ಹುಡುಗಿಯರನ್ನು ಮರಳು ಮಾಡುವುದೇ ಈತನ ಕೆಲಸ. ಕೇರಳದ ಥಂಪನೂರ್​ ಪೊಲೀಸರು ಈತನನ್ನು ಕಳೆದ ಆಗಸ್ಟ್​ನಲ್ಲಿ ಬಂಧಿಸಿದ್ದರು. ನಾನು ಪೊಲೀಸ್​ ಕೆಲಸಕ್ಕೆ ರಾಜೀನಾಮೆ ನೀಡಿ, ಚಾನೆಲ್​ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿ ನಂಬಿಸುತ್ತಿದ್ದ. ಆದರೆ, ಆತ ಓದಿರುವುದು ದ್ವಿತೀಯ ಪಿಯುಸಿ ಎಂಬುದು ಪೊಲೀಸ್​ ತನಿಖೆಯಲ್ಲಿ ಬಯಲಾಯಿತು. ರೀಲ್ಸ್​ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿರುತ್ತಿದ್ದ ವಿನೀತ್​, ಜಾಲತಾಣ ಮೂಲಕ ಹುಡುಗಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಪರಿಚಯ ಪ್ರೇಮಕ್ಕೆ ತಿರುಗಿದಾಗ ಹುಡಗಿಯರ ಮೇಲೆ ಅನುಮಾನ ಪಡುತ್ತಿದ್ದ. ಬೇರೊಬ್ಬರ ಜೊತೆ ನಿನಗೆ ಸಂಬಂಧ ಇದೆ ಎಂದು ಕತೆ ಕಟ್ಟುತ್ತಿದ್ದ. ಆತನನ್ನು ನಂಬಿಸಲು ಆತನ ಬಲೆಗೆ ಬಿದ್ದ ಹುಡುಗಿಯರು ತಮ್ಮ ಈಮೇಲ್​ ಮತ್ತು ಇನ್​ಸ್ಟಾಗ್ರಾಂ ಐಡಿ ಹಾಗೂ ಪಾಸ್​ವರ್ಡ್​ ನೀಡುತ್ತಿದ್ದರು. ನಂತರ ಹುಡುಗಿಯರು ಇನ್​ಸ್ಟಾಗ್ರಾಂ ಖಾತೆಗಳನ್ನು ವಿನೀತ್ ನಿರ್ವಹಿಸುತ್ತಿದ್ದ. ತನ್ನ ಸೂಚನೆಗಳನ್ನು ಅನುಸರಿಸಲು ಹುಡುಗಿಯರನ್ನು ಒತ್ತಾಯಿಸುತ್ತಿದ್ದ.
ಇದನ್ನೂ ಓದಿ:ಗೋಮೂತ್ರ ಮಾನವ ಬಳಕೆಗೆ ಅನರ್ಹ; ಹಾನಿಕಾರಕ ಬ್ಯಾಕ್ಟೀರಿಯಾ ಎಂದ ತಜ್ಞರು
A post shared by Vineeth Vijayan (@vineeth___official)

ಹೊಸ ಕಾರು ಖರೀದಿ ಮಾಡಿದ್ದೇನೆ. ಒಂದು ಡ್ರೈವ್​ ಹೋಗೋಣ ನನಗೆ ಕಂಪನಿ ಕೊಡಿ ಎಂದು ಆಹ್ವಾನಿಸುತ್ತಿದ್ದ. ಆತನ ಆಹ್ವಾನವನ್ನು ನಂಬಿ ಆತನೊಂದಿಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ತಿರುವನಂತಪುರದಲ್ಲಿರುವ ಲಾಡ್ಜ್​ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸುಗುತ್ತಿದ್ದ. ವಿದ್ಯಾರ್ಥಿನಿಯೊಬ್ಬಳು ನಡೆದ ಘಟನೆಯನ್ನು ತನ್ನ ಸ್ನೇಹಿತೆಯೊಬ್ಬಳಿಗೆ ಹೇಳಿದ ಬಳಿಕ ಆಕೆ ದೂರು ದಾಖಲಿಸಿದಳು. ತಕ್ಷಣ ತನಿಖೆ ಆರಂಭಿಸಿದ ಪೊಲೀಸರು ವಿನೀತ್​ನನ್ನು ಬಂಧಿಸಿದ್ದರು. ಬಳಿಕ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಆತ ಹೊರಬಂದಿದ್ದ.(ಏಜೆನ್ಸೀಸ್​)
VIDEO| ರೇಪ್​ ಕೇಸ್​ನಲ್ಲಿ ಜಾಮೀನು ಪಡೆದು ಜೈಲಿಂದ ಹೊರ ಬಂದರೂ ಈ ರೀಲ್ಸ್ ಸ್ಟಾರ್​ಗೆ ಕಡಿಮೆಯಾಗಿಲ್ಲ ಸೊಕ್ಕು!

ಹೊಳೆಯುವುದೆಲ್ಲ ಚಿನ್ನವಲ್ಲ! Instagram ರೀಲ್ಸ್ ಸ್ಟಾರ್​ ಬಂಧನದ ಬೆನ್ನಲ್ಲೇ ಪೊಲೀಸರ ಸಂದೇಶ ವೈರಲ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − fifteen =
Remember me
