ನವದೆಹಲಿ:ಉನ್ನತ ಶಿಕ್ಷಣ ಪಡೆದ ನಂತರ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುತ್ತೇವೆ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ, ಚೆನ್ನಾಗಿ ಓದಿದರೆ ಸಾಲದು ಕೆಲವೊಮ್ಮೆ ಅದೃಷ್ಟವೂ ಇರಬೇಕು. ಚೆನ್ನಾಗಿ ಓದುವ ಭರವಸೆ ಇದ್ದರೂ ಕೆಲವರು ಅಂಗವೈಕಲ್ಯದಿಂದ ತೊಂದರೆ ಅನುಭವಿಸುತ್ತಾರೆ. ಅದರಲ್ಲೂ ಕುಬ್ಜರಾದವರು ತಮ್ಮ ಬಾಲ್ಯದಿಂದಲೂ ಹಲವಾರು ರೀತಿಯ ಅವಮಾನಗಳನ್ನು ಎದುರಿಸುವುದನ್ನು ನಾವು ನೋಡಿದ್ದೇವೆ. ಆದರೂ ಇಂತಹ ನ್ಯೂನತೆಯನ್ನು ಮೆಟ್ಟಿನಿಂತು ಕೆಲವರು ತಮಗೆ ಬೇಕಾದುದನ್ನು ಸಾಧಿಸುತ್ತಾರೆ. ಉತ್ತಮ ಶಿಕ್ಷಣ ಪಡೆದು, ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಆಕ್ರಮಿಸುತ್ತಾರೆ. ಹೀಗೆ ಗಣೇಶ್​ ಬರಯ್ಯ ಎಂಬ ಯುವಕ ತನ್ನ ಅಂಗವೈಕಲ್ಯವನ್ನು ಮೆಟ್ಟಿ ನಿಂತು ತನ್ನಿಷ್ಟದ ವೈದ್ಯ ವೃತ್ತಿಯನ್ನು ಅಲಂಕರಿಸುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ಗುಜರಾತಿನ 23 ವರ್ಷದ ಗಣೇಶ್ ಬರಯ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಬರಯ್ಯ ಇತ್ತೀಚೆಗೆ ಎಂಬಿಬಿಎಸ್ ಮುಗಿಸಿ ಕಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಕೇವಲ 3 ಅಡಿ ಎತ್ತರದ ಬರಯ್ಯ ಆ ಸ್ಥಾನಕ್ಕೆ ಬರಲು ತಮ್ಮ ಜೀವನದ ಉದ್ದಕ್ಕೂ ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ನೀಟ್ ತೇರ್ಗಡೆಯಾದರೂ ಎತ್ತರ ಕಡಿಮೆ ಎಂಬ ಕಾರಣಕ್ಕೆ ಎಂಬಿಬಿಎಸ್ ಓದುವ ಅವಕಾಶವನ್ನು ನಿರಾಕರಿಸಲಾಗಿತ್ತು. ಕುಳ್ಳಗಿರುವ ಕಾರಣ ಶಸ್ತ್ರಚಿಕಿತ್ಸೆ ಮಾಡಲು ಅಡ್ಡಿಯಾಗಲಿದೆ ಎಂದು ಭಾರತೀಯ ವೈದ್ಯಕೀಯ ಮಂಡಳಿ ಹೇಳಿತ್ತು. ಆದರೆ ಶಾಲೆಯ ಪ್ರಾಂಶುಪಾಲರ ನೆರವಿನಿಂದ ಬರಯ್ಯ ಅವರು ಜಿಲ್ಲಾಧಿಕಾರಿ ಹಾಗೂ ರಾಜ್ಯ ಶಿಕ್ಷಣ ಸಚಿವರನ್ನು ಭೇಟಿಯಾಗಿದ್ದರ. ಅಲ್ಲದೆ, ಗುಜರಾತ್ ಹೈಕೋರ್ಟಿ ಮೆಟ್ಟಿಲೇರಿದರೂ ಕೂಡ ಇದೇ ಕಾರಣಕ್ಕೆ ಗಣೇಶ್ ನಿರಾಸೆ ಅನುಭವಿಸಿದ್ದರು.
ಎಷ್ಟೇ ಅಡೆತಡೆಗಳು ಎದುರಾದರೂ ತನ್ನ ಇಚ್ಛೆಯನ್ನು ಈಡೇರಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡಿದ ಬರಯ್ಯ, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, 2018ರಲ್ಲಿ ಗೆಲುವು ಸಾಧಿಸಿದರು. ಅಷ್ಟರಲ್ಲಾಗಲೇ 2018ರ ಬ್ಯಾಚ್​ ಆರಂಭವಾಗಿದ್ದರಿಂದ 2019ರ ಎಂಬಿಬಿಎಸ್ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿತು. ಎಂಬಿಬಿಎಸ್​ ಪ್ರವೇಶ ಪಡೆದ ಬರಯ್ಯ ತಾವು ಬಯಸಿದ್ದನ್ನು ಸಾಧಿಸಿದರು ಮತ್ತು ಡಾಕ್ಟರ್ ಆದರು.
ಪ್ರಸ್ತುತ ಬರಯ್ಯ ಅವರು ಭಾವನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಮಹತ್ತರವಾದ ಮಹತ್ವಾಕಾಂಕ್ಷೆ ಇರುವವರಿಗೆ ಯಾವುದೇ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ. ನಾವು ಏನನ್ನಾದರೂ ಸಾಧಿಸಬೇಕಾದರೆ ಪರಿಶ್ರಮದಿಂದ ಸಾಧಿಸಬೇಕು ಮತ್ತು ಎಷ್ಟೇ ಕಷ್ಟ ಬಂದರೂ ಹಿಂದೆ ಸರಿಯಬೇಡಿ ಎಂದು ಸಂದರ್ಶನವೊಂದರಲ್ಲಿ ಗಣೇಶ್ ಬರಯ್ಯ ಹೇಳಿರುವ ಮಾತು ಸ್ಫೂರ್ತಿದಾಯಕವಾಗಿದೆ.(ಏಜೆನ್ಸೀಸ್​)
ನಮ್ಮ ಬಸವ ಸಿನಿಮಾದ ಗೌರಿ ಈಗ ಹೇಗಿದ್ದಾರೆ? ಏನು ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ…

ಸಿಕ್ಕರೆ ಇಂಥಾ ಗಂಡ ಸಿಗಲಿ ಇಲ್ಲದಿದ್ರೆ ಮದ್ವೆನೇ ಬೇಡ ಅಂತಾರೆ ಹುಡ್ಗೀರು! ಈಕೆ ನಿಜಕ್ಕೂ ಅದೃಷ್ಟವಂತೆ

ಫ್ರೈಡ್​ ಚಿಕನ್​ ತಿನ್ನುವುದು ನಿಮ್ಮ ಸಾವನ್ನು ಖರೀದಿಸಿದಂತೆ! ಇಲ್ಲಿದೆ ಆಘಾತಕಾರಿ ಮಾಹಿತಿ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:sixteen − 13 =
Remember me
