ನವದೆಹಲಿ:ಮಂಗಳವಾರ ಮಧ್ಯಾಹ್ನ ಪ್ರಕಟವಾದ 2019ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ ಪ್ರಚಂಡ ಯಶಸ್ಸು ಸಾಧಿಸಿದ ಸಾಧಕರ ಯಶೋಗಾಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಓರ್ವ ಸಾಧಕಿಯ ಸಾಧನೆ ವಿಶೇಷ ಕಾರಣದಿಂದ ಇದೀಗ ನೆಟ್ಟಿಗರ ಮನ ಸೆಳೆದಿದೆ.
ಯುಪಿಎಸ್​ಸಿ ಸಾಧಕಿಯ ಹೆಸರು ಐಶ್ವರ್ಯಾ ಶಿಯೊರನ್​. ನಿನ್ನೆ ಪ್ರಕಟವಾದ ಫಲಿತಾಂಶದಲ್ಲಿ 93ನೇ ರ್ಯಾಂಕ್​ ಪಡೆದು ಮಿಂಚಿದ್ದಾರೆ. ವಿಶೇಷವೆಂದರೆ ಐಶ್ವರ್ಯಾ ಓರ್ವ ಮಾಡೆಲ್​. 2016ರ ಮಿಸ್​ ಇಂಡಿಯಾ ಸ್ಪರ್ಧೆಯ ಫೈನಲಿಸ್ಟ್​ ಆಗಿದ್ದರು.
Aishwarya Sheoran, Femina Miss India 2016 finalist, Campus Princess Delhi 2016, Freshface winner Delhi 2015 made us immensely proud as she scored the All India Rank 93 in the Civil Services Examination. A huge congratulations to her on this achievement!#AishwaryaSheoran#CSEpic.twitter.com/SrDu4iK6T0
— Miss India (@feminamissindia)August 4, 2020

ಇದೀಗ ಐಶ್ವರ್ಯ ಯುಪಿಎಸ್​ಸಿಯಲ್ಲಿ ಸಾಧನೆ ಮಾಡಿರುವುದನ್ನು ಸ್ವತಃ ಮಿಸ್​ ಇಂಡಿಯಾ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದೆ. 2015ರ ದೆಹಲಿ ಫ್ರಶ್​ಫೇಸ್ ವಿನ್ನರ್​,​ 2016ರ ದೆಹಲಿ ಕ್ಯಾಂಪಸ್​ ಪ್ರಿನ್ಸೆಸ್​​ ಹಾಗೂ 2016ರ ಫೆಮಿನಾ ಮಿಸ್​ ಇಂಡಿಯಾ ಫೈನಲಿಸ್ಟ್​ ಐಶ್ವರ್ಯಾ ಶಿಯೊರನ್​ 2019ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ 93ನೇ ರ್ಯಾಂಕ್​ ಪಡೆದಿದ್ದಾರೆ. ಈ ಸಾಧನೆ ಮಾಡಿದ ಅವರಿಗೆ ಬಹುದೊಡ್ಡ ಅಭಿನಂದನೆಗಳು ಎಂದು ಮಿಸ್​ ಇಂಡಿಯಾ ಟ್ವೀಟ್​ ಮಾಡಿದೆ.
“Civil Services had always been my dream,” says Aishwarya Sheoran, Miss India 2016 finalist.#MissIndia#congratulations#Finalist#civilservicespic.twitter.com/EHPZINnPB7
— Miss India (@feminamissindia)August 5, 2020

ವಾಸ್ತವವಾಗಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವುದು ಐಶ್ವರ್ಯಾರ ಬಹುದೊಡ್ಡ ಕನಸು ಕೂಡ ಆಗಿತ್ತು. ಇದೀಗ ತಮ್ಮ ಕನಸನ್ನು ಐಶ್ವರ್ಯಾ ನನಸು ಮಾಡಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ.
ಐಶ್ವರ್ಯಾರ ಯಶೋಗಾಥೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸುತ್ತಿದ್ದಂತೆ ಅನೇಕ ನೆಟ್ಟಿಗರು ಐಶ್ವರ್ಯಾರಿಗೆ ಶುಭಾಶಯಗಳ ಸುರಿಮಳೆಗೈದಿದ್ದಾರೆ. ಐಶ್ವರ್ಯಾ ಅವರು ಸೌಂದರ್ಯ ಹಾಗೂ ಬುದ್ಧಿವಂತಿಕೆಗೆ ನಿಜವಾದ ಉದಾಹರಣೆ ಎಂದು ಕೊಂಡಾಡಿದ್ದಾರೆ.
ಅಂದಹಾಗೆ ಐಶ್ವರ್ಯಾ ಅವರ ತಂದೆ ಕರ್ನಲ್​ ಅಜಯ್​ ಕುಮಾರ್​ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರೀಮ್​ ನಗರದ ಎನ್​ಸಿಸಿ ತೆಲಂಗಾಣ ಬೆಟಾಲಿಯನ್​ನ ಕಮಾಂಡಿಂಗ್​ ಅಧಿಕಾರಿ ದೇಶ ಸೇವೆಯಲ್ಲಿ ನಿರತರಾಗಿದ್ದಾರೆ. ಇದೀಗ ಮಗಳು ಸಹ ನಾಗರಿಕ ಸೇವಾ ಮೂಲಕ ಜನರ ಸೇವೆ ಮಾಡಲು ಎದುರು ನೋಡುತ್ತಿದ್ದಾರೆ.(ಏಜೆನ್ಸೀಸ್​)
Fashion to Civil Services!!! Rank 93. You will rouse millions to seek after different and assorted interests.#AishwaryaSheoranpic.twitter.com/IJKBupVC12
— Abhinov Pratap Singh 🇮🇳 (@abhinov_pratap)August 4, 2020

A benchmark has been set on phrase#beautywithbrainsas#Aishwaryasheoranwho was Miss India finalist had secured AIR 93 in UPSC civil services exam.
It happens only in#Indiapic.twitter.com/QkrmKwuJ1G
— Sunny Panwar (@sunnsky)August 4, 2020

ಹೊಟ್ಟೆ ನೋವೆಂದು ಹೆರಿಗೆ ಆಸ್ಪತ್ರೆಗೆ ಬಂದ ಮಹಿಳೆಗೆ ಆಪರೇಷನ್​ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
