ಪಟನಾ:ಭಾರತದಲ್ಲಿನ ಪ್ರಖ್ಯಾತ ಚಾಯ್​ವಾಲಾಗಳ ಬಗ್ಗೆ ನಾವು ಕೇಳಿದ್ದೇವೆ. ಅಲ್ಲದೆ, ಪ್ರತಿಯೊಬ್ಬ ಚಹಾ ಪ್ರೇಮಿಗೂ ಓರ್ವ ಫೇವರಿಟ್​ ಚಾಯ್​ವಾಲಾ ಇದ್ದೇ ಇರುತ್ತಾನೆ. ಇದೀಗ ಈ ಪಟ್ಟಿಗೆ ಮತ್ತೊಬ್ಬರು ಸೇರಿದ್ದಾರೆ. ಆದರೆ, ಇವರು ಚಾಯ್​ವಾಲಾ ಅಲ್ಲ ಚಾಯ್​ವಾಲಿ. ಈ ಖ್ಯಾತ ಚಾಯ್​ವಾಲಿ ಬಿಹಾರ ಮೂಲದವರಾಗಿದ್ದು, ಅರ್ಥಶಾಸ್ತ್ರದಲ್ಲಿ ಪದವೀಧರೆಯಾಗಿದ್ದಾರೆ.
ಎರಡು ವರ್ಷಗಳ ಕಾಲ ಉದ್ಯೋಗಕ್ಕಾಗಿ ಅಲೆದಾಡಿ ಕೊನೆಗೆ ಕೆಲಸ ಸಿಗದಿದ್ದಾಗ ಬಿಹಾರ ರಾಜಧಾನಿ ಪಟನಾದಲ್ಲಿರುವ ಮಹಿಳಾ ಕಾಲೇಜಿನ ಬಳಿ ಟೀ ಸ್ಟಾಲ್​ ಅಳವಡಿಸಿಕೊಂಡಿರುವ ಚಾಯ್​ವಾಲಿ ಸ್ವಂತ ದುಡಿಮೆ ಮಾಡುತ್ತಿದ್ದಾರೆ.
ಈ ಚಾಯ್​ವಾಲಿ ಹೆಸರು ಪ್ರಿಯಾಂಕಾ ಗುಪ್ತ. 2019ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿ ಮುಗಿಸಿದ್ದಾರೆ. ಮಧ್ಯಪ್ರದೇಶದ ಖ್ಯಾತ ಚಾಯ್​ವಾಲಾ ಹಾಗೂ ಎಂಬಿಎ ಪದವೀಧರ ಪ್ರಫುಲ್​ ಬಿಲ್ಲೋರ್ ಅವರಿಂದ ಸ್ಪೂರ್ತಿಗೊಂಡಿರುವ ಪ್ರಿಯಾಂಕಾ, ಹಿಂಜರಿಕೆಯನ್ನು ಬಿಟ್ಟು, ಟೀ ಅಂಗಡಿ ಸ್ಥಾಪಿಸಿ ಸ್ವಂತ ಕಾಲ ಮೇಲೆ ನಿಂತಿದ್ದಾರೆ.
ತನ್ನ ಜೀವನ ಕತೆಯನ್ನು ಹಂಚಿಕೊಂಡರುವ ಪ್ರಿಯಾಂಕಾ, ಅನೇಕ ಚಾಯ್​ವಾಲಾಗಳು ಇರುವಾಗ, ಚಾಯ್​ವಾಲಿ ಯಾಕಾಗಬಾರದು? ನಾನು ನನ್ನ ಪದವಿ ಶಿಕ್ಷಣವನ್ನು 2019ರಲ್ಲಿ ಮುಗಿಸಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಯಾವುದೇ ಉದ್ಯೋಗ ಸಿಗಲಿಲ್ಲ. ಪ್ರಫುಲ್ಲ್​ ಬಿಲ್ಲೋರ್​ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡೆ ಎಂದು ಹೇಳಿದ್ದಾರೆ.
24 ವರ್ಷದ ಪ್ರಿಯಾಂಕಾ ಕುಲ್ಹದ್​ ಚಾಯ್​ನಿಂದ ಪಾನ್​ ಚಾಯ್​ವರೆಗೂ ವಿವಿಧ ರೀತಿಯ ಚಹಾವನ್ನು ಮಾರಾಟ ಮಾಡುತ್ತಾರೆ. ಒಂದು ಕಪ್​ ಚಹಾ 15 ರಿಂದ 20 ರೂ. ಶ್ರೇಣಿಯಲ್ಲಿರುತ್ತದೆ.
ಇನ್ನೂ ಪ್ರಫುಲ್​ ಬಿಲ್ಲೋರ್ ಬಗ್ಗೆ ಹೇಳುವುದಾದರೆ, ಮಧ್ಯಪ್ರದೇಶದ ಪ್ರಫುಲ್​ ಸದ್ಯ ಗುಜರಾತ್​ನ ಅಹಮದಾಬಾದ್​ನಲ್ಲಿ ನೆಲೆಸಿದ್ದು, ದೇಶಾದ್ಯಂತ ಎಂಬಿಎ ಚಾಯ್​ವಾಲಾ ಎಂದೇ ಪ್ರಖ್ಯಾತಿ ಆಗಿದ್ದಾರೆ. ಬರೋಬ್ಬರಿ 3 ಕೋಟಿ ರೂ. ವಹಿವಾಟು ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಸಿಎಟಿ ಅಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗದಿದ್ದಾಗ ಅಧ್ಯಯನವನ್ನು ಅರ್ಧಕ್ಕೆ ಬಿಡಲು ನಿರ್ಧರಿಸುತ್ತಾರೆ. ಕೊನೆಗೆ ಒಂದು ನಿರ್ಧಾರಕ್ಕೆ ಬರುವ ಪ್ರಫುಲ್ ಬೀದಿ ಬದಿಯಲ್ಲಿ ಟೀ ಮಾರಾಟ ಮಾಡಲು ಆರಂಭಿಸುತ್ತಾರೆ. ಇದಕ್ಕೂ ಮುನ್ನ ಅಹಮದಾಬಾದ್​ನ ರೆಸ್ಟೋರೆಂಟ್​ ಒಂದರಲ್ಲಿ ಪಾರ್ಟ್​ ಟೈಮ್​ ಕೆಲಸ ಮಾಡುತ್ತಿರುತ್ತಾರೆ. ಇದೇ ವೇಳೆ ಟೀ ಮಾಡುವುದನ್ನು ಚೆನ್ನಾಗಿ ಕಲಿಯುವ ಪ್ರಫುಲ್​ ಕೊನೆಗೆ ತನ್ನದೇ ಸ್ವಂತ ಟೀ ಶಾಪ್​ ತೆರೆಯುತ್ತಾರೆ. ಆರಂಭದಲ್ಲಿ ವ್ಯಾಪಾರ ಇಲ್ಲದೇ ಸಮಸ್ಯೆ ಎದುರಾದರೂ ನಂತರದ ದಿನಗಳಲ್ಲಿ ವ್ಯವಹಾರ ಚೆನ್ನಾಗಿಯೇ ನಡೆಯಲು ಆರಂಭಿಸುತ್ತದೆ.(ಏಜೆನ್ಸೀಸ್​)
Bihar: Priyanka Gupta, an economics graduate sets up a tea stall near Women's College in Patna
I did my UG in 2019 but was unable to get a job in the last 2 yrs. I took inspiration from Prafull Billore. There are many chaiwallas, why can't there be a chaiwali?, she sayspic.twitter.com/8jfgwX4vSK
— ANI (@ANI)April 19, 2022

ಎಂಬಿಎ ಬಿಟ್ಟು ಟೀ ಮಾರಾಟಕ್ಕಿಳಿದ ಯುವಕನ ಯಶೋಗಾಥೆ ಕೇಳಿದ್ರೆ ಫಿದಾ ಆಗೋದು ಗ್ಯಾರೆಂಟಿ!

ನಾಗಚೈತನ್ಯ 2ನೇ ಮದ್ವೆಗೆ ರೆಡಿಯಾಗಿರುವ ಸುದ್ದಿ ನಿಜವೋ? ವದಂತಿಯೋ?…ಇಲ್ಲಿದೆ ಅಸಲಿ ವಿಚಾರ

ಜೈನ ಭಗವತಿ ದೀಕ್ಷೆ ಸ್ವೀಕರಿಸಲಿದ್ದಾರೆ ಶಿವಮೊಗ್ಗದ ಬಾಲಕಿ! ಅತ್ತೆಯ ಪ್ರಭಾವ… ಸುಖ-ವೈಭೋಗಕ್ಕೆ ವಿದಾಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − 4 =
Remember me
