ದುಬೈ:ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ತಮಿಳುನಾಡುವ ಮೂಲದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಶುಕ್ರವಾರ ಎಮಿರೇಟ್ಸ್ ಲಕ್ಕಿ ಡ್ರಾ ಫಾಸ್ಟ್​ 5 ಗ್ರ್ಯಾಂಡ್​ ಬಹುಮಾನ ವಿಜೇತನ ಹೆಸರನ್ನು ಘೋಷಣೆ ಮಾಡಲಾಯಿತು. ಇದರಲ್ಲಿ ಮೊದಲ ಬಹುಮಾನಕ್ಕೆ ತಮಿಳುನಾಡಿನ ಅಂಬರ್​ ಮೂಲದ ಮಗೇಶ್​ ನಟರಾಜನ್​ ಭಾಜನರಾಗಿದ್ದು, 16 ಕೋಟಿ ರೂಪಾಯಿ ಒಲಿದು ಬಂದಿದೆ.
ಮೊದಲ ಬಹುಮಾನದಲ್ಲಿ ಗಳಿಸಿರುವ ಹಣವನ್ನು ಮಗೇಶ್​ ಅವರಿಗೆ ಒಟ್ಟಿಗೆ ನೀಡುವುದಿಲ್ಲ. ಬದಲಾಗಿ ಮುಂದಿನ 25 ವರ್ಷಗಳವರೆಗೆ ಪ್ರತಿ ತಿಂಗಳು 5.5 ಲಕ್ಷ ರೂ. ಹಣವನ್ನು ಮಗೇಶ್​ ಪಡೆಯಲಿದ್ದಾರೆ. ಅದು ಕೂಡ ಏನೂ ಕೆಲಸ ಮಾಡದೆ ಹಣ ಗಳಿಸಲಿದ್ದಾರೆ. ಇದನ್ನು ಕೇಳಿದವರು ಇದಲ್ವಾ ನಿಜವಾದ ಅದೃಷ್ಟ ಎಂದು ಹೇಳುತ್ತಿದ್ದಾರೆ.
ಈ ಮಗೇಶ್​ ಯಾರು?ಮಗೇಶ್​ ನಟರಾಜನ್​ ಅವರು ತಮಿಳುನಾಡಿನ ಆಂಬೂರ್​ ಮೂಲದವರು. ಯುಎಇನಲ್ಲಿ ಪ್ರಾಜೆಕ್ಟ್​ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಗೇಶ್ ಅವರು ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್‌ ವಿಭಾಗದಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಇದಾದ ಬಳಿಕ ಅಣ್ಣಾಮಲೈ ಕಾಲೇಜಿನಲ್ಲಿ ಬಿಬಿಎ ಡಿಗ್ರಿ ಪಡೆದರು. ನಟರಾಜನ್ ಪ್ರಸ್ತುತ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ಜರ್ಮನ್ ಎಂಎನ್​ಸಿ ಕಂಪನಿ ಸೀಮೆನ್ಸ್‌ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಲಾಟರಿ ಬಗ್ಗೆ ಹೇಗೆ ತಿಳಿದುಕೊಂಡರು?ನಟರಾಜನ್​​ ಅವರು ತಮ್ಮ ಜೀವನದ ಬಹುಪಾಲು ತಮಿಳುನಾಡಿನ ಅಂಬೂರಿನಲ್ಲಿ ವಾಸಿಸುತ್ತಿದ್ದರು. 2019ರಿಂದ ಈವರೆಗೆ ಸೌದಿ ಅರೇಬಿಯಾದಲ್ಲಿ ಅವರ ನಾಲ್ಕು ವರ್ಷಗಳ ವೃತ್ತಿ ಜೀವನವೂ ಒಂದು ಹೊಸ ತಿರುವು ನೀಡಿತು. ದುಬೈ ಪ್ರವಾಸದ ಸಮಯದಲ್ಲಿ ದುಬೈನ ಪ್ರಸಿದ್ಧ ಆಕರ್ಷಣೆಗಳಲ್ಲಿ ಒಂದಾದ ಎಮಿರೇಟ್ಸ್ ಲಕ್ಕಿ ಡ್ರಾ ಫಾಸ್ಟ್​ 5 ಗ್ರ್ಯಾಂಡ್​ ಬಹುಮಾನದ ಬಗ್ಗೆ ತಿಳಿದುಕೊಂಡರು. ತಾನು ಲಕ್ಕಿ ಡ್ರಾ ಗೆಲ್ಲುತ್ತೇನೆ ಎಂದು ಕನಸು ಕೂಡ ಕಂಡಿರಲಿಲ್ಲ ಎಂದು ಮಗೇಶ್​ ಹೇಳಿದ್ದಾರೆ.
ನಾನು ಓದುವ ಸಂದರ್ಭದಲ್ಲಿ ನನ್ನ ಜೀವನದಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದೇನೆ. ನನ್ನ ವಿದ್ಯಾಭ್ಯಾಸವನ್ನು ಮುಗಿಸಿದಂತೆ ನನಗೆ ಸಾಕಷ್ಟು ಸಾಮಾಜಿಕ ಬೆಂಬಲವೂ ಸಿಕ್ಕಿತು. ಇದೀಗ ನಾನು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಸಮಯ ಬಂದಿದೆ. ಅಗತ್ಯವಿರುವ ಜನರಿಗೆ ನೆರವಾಗುತ್ತೇನೆ ಎಂದಿರುವ ಮಗೇಶ್​, ತನ್ನಿಬ್ಬರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಖರ್ಚು ಮಾಡುತ್ತೇನೆ ಮತ್ತು ಕುಟುಂಬದ ಉಜ್ವಲ ಭವಿಷ್ಯಕ್ಕಾಗಿ ಹಣ ಸದುಪಯೋಗಪಡಿಸಿಕೊಳ್ಳುತ್ತೇನೆ ಎಂದು ಮಗೇಶ್​ ಹೇಳಿದ್ದಾರೆ.
ಜುಲೈನಲ್ಲಿ ಆದಿಲ್​ ಖಾನ್​ಗೆ ಅದೃಷ್ಟಕಳೆದ ಜುಲೈನಲ್ಲಿ ಉತ್ತರ ಪ್ರದೇಶ ಮೂಲದ ಮೊಹಮ್ಮದ್​ ಆದಿಲ್​ ಖಾನ್​ ಅವರಿಗೆ ಫಾಸ್ಟ್​ 5 ಲಕ್ಕಿ ಡ್ರಾ ಒಲಿದಿತ್ತು. ಮೊಹಮ್ಮದ್​ ಆದಿಲ್​ ಖಾನ್​ ಎಂಬುವರು ದುಬೈನಲ್ಲಿ ಆರ್ಕಿಟೆಕ್ಟ್​ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಸಹ ಮುಂದಿನ 25 ವರ್ಷಗಳವರೆಗೆ ಪ್ರತಿ ತಿಂಗಳು 5.5 ಲಕ್ಷ ರೂ. ಹಣವನ್ನು ಪಡೆಯಲಿದ್ದಾರೆ.(ಏಜೆನ್ಸೀಸ್​)
ಇದು ಅದೃಷ್ಟ ಅಂದ್ರೆ! ಕೆಲ್ಸ ಮಾಡದೇ ಮುಂದಿನ 25 ವರ್ಷ ಪ್ರತಿ ತಿಂಗಳು 5.5 ಲಕ್ಷ ರೂ. ಗಳಿಸಲಿದ್ದಾರೆ ಈ ವ್ಯಕ್ತಿ

ಸುಖೋಯ್‌ ಯುದ್ಧ ವಿಮಾನದ ರಾಡಾರ್‌ಗೆ ವಿಶ್ವಪ್ರಸಿದ್ಧ ಹಂಪಿ ‘ವಿರೂಪಾಕ್ಷ’ ದೇವರ ಹೆಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
