ನವದೆಹಲಿ:ಐಪಿಎಸ್​​​ ಅಧಿಕಾರಿಯಾಗಬೇಕೆಂಬುದು ಅನೇಕ ಮಂದಿಯ ಬಹುದಿನಗಳ ಕನಸು. ಇದಕ್ಕಾಗಿ ಲಕ್ಷಾಂತರ ಯುಪಿಎಸ್​ಸಿ ಆಕಾಂಕ್ಷಿಗಳು ಪರೀಕ್ಷೆಯನ್ನು ಎದುರಿಸುತ್ತಾರೆ. ಆದರೆ, ಅಂತಿಮವಾಗಿ ನೂರಾರು ಮಂದಿ ಮಾತ್ರ ಈ ಗುರಿಯನ್ನು ಮುಟ್ಟುತ್ತಾರೆ. ಇಂತಹ ಕಠಿಣ ಪರೀಕ್ಷೆಯಲ್ಲಿ ಪಾಸಾಗಿ ಉನ್ನತ ಹುದ್ದೆಗೆ ಏರಿದರೂ ಸಹ ಕೆಲ ಐಪಿಎಸ್​ ಅಧಿಕಾರಿಗಳು ಕಾರಣಾಂತರಗಳಿಂದ ಹುದ್ದೆಗಳನ್ನು ತೊರೆದಂತಹ ಸಾಕಷ್ಟು ಉದಾಹರಣೆಗಳನ್ನು ನೋಡಿ ಹುಬ್ಬೇರಿಸಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ.
ಇತ್ತೀಚೆಗಷ್ಟೇ ಐಪಿಎಸ್​ ಅಧಿಕಾರಿ ಆನಂದ್​ ಮಿಶ್ರಾ ಎಂಬುವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಯಾರು ಆನಂದ್​ ಮಿಶ್ರಾ ಎಂಬುವುದನ್ನು ನೋಡುವುದಾದರೆ, ಅಸ್ಸಾಂ-ಮೇಘಾಲಯ ಕೇಡರ್​ನ 2011ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿ. ಆನಂದ್​ ಅವರು ಮೂಲತಃ ಬಿಹಾರದವರು. 2010ರ ಯುಪಿಎಸ್​ಸಿ ಪರೀಕ್ಷೆಯಲ್ಲಿ 225ನೇ ರ್ಯಾಂಕ್​ ಪಡೆದರು. ಪ್ರಸ್ತತು ಅಸ್ಸಾಂನ ಲಖೀಂಪುರ್​ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಣಿಪುರ ಹಿಂಸಾಚಾರ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಎಸ್‌ಐಟಿಯ ಭಾಗವಾಗಿ ಆನಂದ್​ ಮಿಶ್ರಾರನ್ನು ಮಣಿಪುರಕ್ಕೆ ನಿಯೋಜಿಸಲಾಗಿತ್ತು.
ತಮ್ಮ ಪ್ರಾಮಾಣಿಕ ಹಾಗೂ ಖಡಕ್​ ನಡೆಯಿಂದಾಗಿ ಅಸ್ಸಾಂ ಸಿಂಗಂ ಎಂದು ಸಾಮಾಜಿಕ ಜಾಲತಾಣದಲ್ಲಿ ಆನಂದ್​ ಮಿಶ್ರಾ ಖ್ಯಾತರಾಗಿದ್ದರು. ತಮ್ಮ ಇನ್​​ಸ್ಟಾಗ್ರಾಂನಲ್ಲಿ 3 ಲಕ್ಷದ 26 ಸಾವಿರಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. ಇದೀಗ ಆನಂದ್​ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ತಮ್ಮ ರಾಜೀನಾಮೆ ಪತ್ರದಲ್ಲಿ ‘ಸ್ವಾತಂತ್ರ್ಯ’ ಮತ್ತು ‘ಸ್ವಾತಂತ್ರ್ಯ’ದ ಜೀವನವನ್ನು ಅನುಸರಿಸಲು ಈ ನಿರ್ಧಾರವನ್ನು ಮಾಡಿರುವುದಾಗಿ ತಿಳಿಸಿದ್ದಾರೆ.
ಆನಂದ್​ ಮಿಶ್ರಾ ಅವರು ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಕೋಲ್ಕತದಲ್ಲಿ ಪೂರ್ಣಗೊಳಿಸಿದರು. 2005ರಲ್ಲಿ ಪಶ್ಚಿಮ ಬಂಗಾಳದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು 2010ರವರೆಗೆ ಪಶ್ಚಿಮ ಬಂಗಾಳದ ನಾಗರಿಕ ಸೇವಾ ವಲಯದಲ್ಲಿ ಸೇವೆ ಸಲ್ಲಿಸಿದರು. 2010ರಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು ಮತ್ತು IPS ಅಧಿಕಾರಿಯಾಗಿ ಅಧಿಕಾರ ಆರಂಭಿಸಿದರು.
ಆನಂದ್​ ಮಿಶ್ರಾ ಅವರು ಅಸ್ಸಾಂನಲ್ಲಿ ಪ್ರಸಿದ್ಧ ವ್ಯಕ್ತಿಯಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿಹಿಡಿಯುವಲ್ಲಿ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಅವರನ್ನು ಅಸ್ಸಾಂ ಸಿಂಗಂ ಎಂದೇ ಕರೆಯಲಾಗುತ್ತದೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಆನಂದ್​ ಅವರು ಬಿಜೆಪಿ ಸೇರಿ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಸಹ ಹರಿದಾಡುತ್ತಿದ್ದಾರೆ. ಆದರೆ, ಇದಕ್ಕೆಲ್ಲ ಚುನಾವಣೆ ಸಮಯದಲ್ಲಿ ಉತ್ತರ ಸಿಗಲಿದೆ.(ಏಜೆನ್ಸೀಸ್​)
ಫುಟ್ಬಾಲ್ ದಿಗ್ಗಜ ಮಾರಡೊನಾಗೂ ಸಿಗದ ಮನ್ನಣೆ ಮೆಸ್ಸಿಗೆ!: 10ನೇ ಜರ್ಸಿ ಕುರಿತು ಅರ್ಜೆಂಟೀನಾ ಪ್ರಮುಖ ನಿರ್ಧಾರ?

‘ನಾವು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ’: ಸಿಎಂ ಯೋಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
