ಆಗ್ರಾ:ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್​ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲ್​ ಅನ್ನು ಇಂದು ಕಣ್ತುಂಬಿಕೊಂಡರು.
ಮೊದಲ ಬಾರಿಗೆ ತಾಜ್​ ಮಹಲ್​ ನೋಡಿದಾಗ ಟ್ರಂಪ್​ ದಂಪತಿಯ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಎಲ್ಲರಿಗೂ ಇರುತ್ತದೆ. ಹೀಗಾಗಿ ಪ್ರವಾಸೋದ್ಯಮ ಸಚಿವಾಲಯದ ಟೂರಿಸ್ಟ್​ ಗೈಡ್​ ನಿತಿನ್​ ಕುಮಾರ್​ ಸಿಂಗ್​ ಎಲ್ಲರ ಕುತೂಹಲವನ್ನು ತಣಿಸಿದ್ದಾರೆ.
ನಿತಿನ್​ ಇಂದು ಟ್ರಂಪ್​ ದಂಪತಿಗೆ ಪ್ರೇಮಸೌಧದ ಇತಿಹಾಸವನ್ನು ಪರಿಚಯಿಸಿದರು. ಈ ಬಗ್ಗೆ ಮಾತನಾಡಿರುವ ಅವರು ತಾಜ್​ ಮಹಲ್​ ಕುರಿತಾದ ಒಂದೊಂದು ಕ್ಷಣದ ಮಾಹಿತಿಯನ್ನು ಟ್ರಂಪ್​ ಮತ್ತು ಪ್ರಥಮ ಮಹಿಳೆ ಮೆಲಾನಿಯ ಟ್ರಂಪ್​ ಅವರಿಗೆ ನೀಡಿದ್ದೇನೆ ಎಂದು ತಿಳಿಸಿದರು.
ತಾಜ್​ ಮಹಲ್​ ನೋಡಿದ ತಕ್ಷಣ ಅತ್ಯದ್ಭುತ ಎಂದು ಹುಬ್ಬೇರಿಸಿದರು. ಅಲ್ಲದೆ, ಮತ್ತೊಮ್ಮೆ ಭೇಟಿ ನೀಡುವುದಾಗಿ ಟ್ರಂಪ್​ ದಂಪತಿ ಭರವಸೆ ನೀಡಿದರು ಎಂದು ಹೇಳಿದರು.(ಏಜೆನ್ಸೀಸ್​)
Nitin Kumar Singh, Tour Guide, Ministry of Tourism: I gave every minute detail of the Taj Mahal to US President Donald Trump and the First Lady. 'Incredible' was the first word they uttered after seeing the Taj Mahal. President & the First Lady have promised to visit once again.pic.twitter.com/6VRi1yIHRC
— ANI (@ANI)February 24, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
