ನವದೆಹಲಿ:ಗೂಗಲ್​, ಅಮೇಜಾನ್, ಟ್ವಿಟರ್​ನಂತಹ​ ದೈತ್ಯ ಕಂಪನಿಗಳೇ ಉದ್ಯೋಗ ಕಡಿತದ ಹಿಂದೆ ಬಿದ್ದಿರುವ ಸಂಕಷ್ಟದ ಸಮಯದಲ್ಲಿ ಗುಜರಾತಿನ ಅಹಮದಾಬಾದ್​ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಪ್ರೀಮಿಯಂ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಕಂಪನಿಯು ಎಂಟು ವರ್ಷಗಳ ಹಿಂದೆ ಆರಂಭವಾಗಿದ್ದು, ಇಂದು ಕೋಟಿಗಟ್ಟಲೆ ಟರ್ನ್​ಒವರ್​ ಹೊಂದಿದೆ.
ಕಂಪನಿಯ ಹೆಸರು ತ್ರಿಧ್ಯ ಟೆಕ್​ ಲಿಮಿಟೆಡ್​. ಇದು ಅಹಮದಾಬಾದ್​ನಲ್ಲಿದೆ. ಕಂಪನಿಯ ಏಳಿಗೆಗೆ ದುಡಿದ ಉದ್ಯೋಗಿಗಳಿಗೆ ಟೊಯೋಟಾ ಗ್ಲಾಂಜಾ ಕಾರುಗಳನ್ನು ಗಿಫ್ಟ್​ ಆಗಿ ನೀಡುವ ಅವರ ಶ್ರಮವನ್ನು ಗೌರವಿಸಿದ್ದಾರೆ.
ಈ ಬಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಮರಂದ್ ಮಾತನಾಡಿದ್ದು, ಕಂಪನಿಯು ಆರಂಭವಾದ ಸಮಯದಲ್ಲಿ ಈ ಉದ್ಯೋಗಿಗಳು ಕೆಲಸಕ್ಕೆ ಸೇರಿದರು. ಎಲ್ಲರು ತಮ್ಮ ಸ್ಥಿರವಾದ ಕೆಲಸವನ್ನು ತೊರೆದು, ಕಂಪನಿಯನ್ನು ಯಶಸ್ವಿಗೊಳಿಸಲು ತುಂಬಾ ಶ್ರಮಿಸಿದರು ಎಂದಿದ್ದಾರೆ. ಅಲ್ಲದೆ, ಇತರೆ ಉದ್ಯೋಗಿಗಳಿಗೂ ಕಾರು ನೀಡಲು ಮುಂದಾಗಿದ್ದಾರೆ.
ರಮೇಶ್​ ಮರಂದ್​ ಅವರ ಕಂಪನಿಗೆ ಏಷ್ಯಾ, ಯೂರೋಪ್​ ಮತ್ತು ಆಸ್ಟ್ರೇಲಿಯಾದಲ್ಲಿ ಗ್ರಾಹಕರನ್ನು ಹೊಂದಿದ್ದಾರೆ. ಇವರ ಕಂಪನಿ, ಹೆಲ್ತ್​ಕೇರ್​, ಇನ್ಶುರೆನ್ಸ್​, ಚಿಲ್ಲರೆ ವ್ಯಾಪಾರ, ಇಂಧನ ವಲಯ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಸಾಫ್ಟ್​ವೇರ್​ ಡೆವೆಲಪ್​ ಮಾಡಿಕೊಡುತ್ತದೆ. ಅಲ್ಲದೆ, ಟೆಕ್ನಾಲಜಿ ಬೆಂಬಲವನ್ನು ನೀಡುತ್ತದೆ.
ಯಾರು ಈ ರಮೇಶ್​ ಮರಂದ್​?ರಮೇಶ್​ ಮರಂದ್​ ಅವರು ತ್ರಿಧ್ಯ ಇನ್ಫೋಟೆಕ್​ ಕಂಪನಿಯ ಸಿಇಒ ಮತ್ತು ಐಟಿ ನಿರ್ದೇಶಕ. ಅವರಿಗೆ 12 ವರ್ಷಗಳ ಬಿಸಿನೆಸ್​ ಡೆವಲಪ್​ಮೆಂಟ್​ ಮತ್ತು ಮಾರ್ಕೆಟಿಂಗ್​ ಅನುಭವ ಇದೆ. ರಮೇಶ್​ ಅವರು ಯುಕೆ ಮೂಲದ ಸಾಫ್ಟ್​ವೇರ್​ ಪ್ರಾಡಕ್ಟ್​ ಡೆವಲಪ್​ಮೆಂಟ್​ ಕಂಪನಿಯ ಪಾಲುದಾರರು ಆಗಿದ್ದಾರೆ. ಲಿಂಕ್​ಡಿನ್​ನಲ್ಲಿ ಸ್ಟಾರ್​ ಆಗಿರುವ ರಮೇಶ್​ ಮರಂದ್​ ಅವರು ಸುಮಾರು 30 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.(ಏಜೆನ್ಸೀಸ್​)
ಮದ್ವೆ ಬಳಿಕ ಮೊದಲ ಬಾರಿ ಮನೆಗೆ ಬಂದ ಅಳಿಯನಿಗೆ 108 ಬಗೆಯ ಖಾದ್ಯ ತಯಾರಿಸಿದ ಅತ್ತೆ!

ಈ ಫೋಟೋದಲ್ಲಿರೋ ಚಿರತೆ ಪತ್ತೆಹಚ್ಚುವಲ್ಲಿ ಶೇ. 90 ಮಂದಿ ಫೇಲ್​! ಸಾಧ್ಯವಾದ್ರೆ ನೀವು ಪತ್ತೆ ಹಚ್ಚಿ…

2 ವರ್ಷಗಳ ಬಳಿಕ ಲಖನೌ ಜೈಲಿನಿಂದ ಬಿಡುಗಡೆಯಾದ ಕೇರಳ ಪತ್ರಕರ್ತ ಸಿದ್ದಿಖ್​ ಕಪ್ಪನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 5 =
Remember me
