ನವದೆಹಲಿ:ಮಿನಿ ಸ್ಕರ್ಟ್​ ಮತ್ತು ಬ್ರಾ ಧರಿಸಿ ದೆಹಲಿ ಮೆಟ್ರೋ ರೈಲಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ ಅಪರಿಚಿತ ಯುವತಿಯ ಗುರುತು ಕೊನೆಗೂ ಪತ್ತೆಯಾಗಿದೆ.
ನಿನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿತ್ತು. ವಿಡಿಯೋದಲ್ಲಿದ್ದ ಯುವತಿ ಬಾಲಿವುಡ್​ ಬಿಚ್ಚಮ್ಮ ಉರ್ಫಿ ಜಾವೇದ್​ ರೀತಿ ವಿಭಿನ್ನವಾಗಿ ಅರೆಬೆತ್ತಲೆ ಉಡುಗೆ ತೊಟ್ಟಿದ್ದಳು. ಬಿಳಿ ಬಣ್ಣದ ಸ್ಕರ್ಟ್​ ಮತ್ತು ಬ್ರಾ ಧರಿಸಿ ಜನನಿಬಿಡ ಮೆಟ್ರೋ ರೈಲಿ ಕಾಣಿಸಿಕೊಂಡಿದ್ದಳು. ರೈಲಿನಲ್ಲಿದ್ದ ಸಹ ಪ್ರಯಾಣಿಕರು ವಿಡಿಯೋ ಸೆರೆಹಿಡಿದು ಹಂಚಿಕೊಂಡಿದ್ದರು. ಆ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಸಾಕಷ್ಟು ಮಂದಿ ಯಾರು ಆ ಯುವತಿ ಎಂಬ ಪ್ರಶ್ನೆ ಕೇಳಿದ್ದರು.
ಇದನ್ನೂ ಓದಿ:ಮೂರು ಪ್ರಕರಣಗಳಲ್ಲಿ ಪಾಕ್​​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಮಧ್ಯಂತರ ಜಾಮೀನು!
Seriously this is in delhi
Akhir Majburi kya hai ?#Delhi#delhimetro#PriyankaChopra#ChitrangdaSinghpic.twitter.com/x2BkeJsINz
— Tanisha Batra (@TanishaBatra80)March 31, 2023

ಇದೀಗ ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಆ ಯುವತಿಯ ಹೆಸರು ರಿಧಮ್​ ಚಾನನ ಎಂದು. ಈಕೆ @prettypastry11112222 ಹೆಸರಿನಲ್ಲಿ ಇನ್​ಸ್ಟಾಗ್ರಾಂ ಖಾತೆ ಹೊಂದಿದ್ದಾಳೆ. ರಿಧಮ್​, ಪಂಜಾಬ್​ನ ಫತೇಹಗಢ ಸಾಹೀಬ್ ನಗರದ ನಿವಾಸಿ. ಈ ಯುವತಿ ಸಾಂಪ್ರದಾಯಿಕ ಕುಟುಂಬದಿಂದ ಬಂದವಳಾಗಿದ್ದರೂ ಅವಳ ಮುಕ್ತ ದೃಷ್ಟಿಕೋನದಿಂದಾಗಿ, ಅವಳು ಕುಟುಂಬದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಿಲ್ಲ.
ಇದನ್ನೂ ಓದಿ:80 ಲಕ್ಷ ರೂ. ಲಾಟರಿ ಬಹುಮಾನ ಗೆದ್ದ ಮಾರನೇ ದಿನವೇ ಯುವಕನ ಬದುಕು ದುರಂತ ಅಂತ್ಯ!
ದೆಹಲಿ ಮೆಟ್ರೋದಲ್ಲಿ ರಿಧಮ್​ ಧರಿಸಿದ್ದ ಬಟ್ಟೆಗಳ ಮಾದರಿಯಲ್ಲೇ ಆಕೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿಯು ಅದೇ ರೀತಿಯ ಉಡುಗೆ ಇವೆ. ಫ್ಯಾಶನ್​ ಕಳೆಗುಂದಬಹುದು ಆದರೆ, ಸ್ಟೈಲ್​ ಮಾತ್ರ ಎಂದಿಗೂ ಉಳಿಯುತ್ತದೆ ಎಂದು ಅಡಿಬರಹ ಬರೆದುಕೊಂಡಿದ್ದಾಳೆ.
A post shared by Rhythm Chanana (@prettypastry11112222)

ರಿಧಮ್​ ಅವರ ಇನ್​ಸ್ಟಾಗ್ರಾಂ ತುಂಬೆಲ್ಲ ಅರೆಬೆತ್ತಲೆ ಫೋಟೋಗಳೇ ತುಂಬಿವೆ. ನಾನು ಉರ್ಫಿ ಜಾವೇದ್​ನಿಂದ ಪ್ರಭಾವಿತಳಾಗಿಲ್ಲ. ಆದರೆ ನನ್ನ ಸ್ವಂತ ಆಯ್ಕೆಯ ಬಟ್ಟೆಗಳನ್ನು ಧರಿಸುವುದನ್ನು ನಾನು ನಂಬುತ್ತೇನೆ ಎಂದು ಹೇಳಿದ್ದಾಳೆ. ಸದ್ಯ ರಿಧಮ್ ಪ್ರಸ್ತುತ ನಟನಾ ಶಾಲೆಯಲ್ಲಿ ಆ್ಯಕ್ಟಿಂಗ್​ ಕೋರ್ಸ್ ಮಾಡುತ್ತಿದ್ದಾಳೆ ಮತ್ತು ಅವರು ಯಶಸ್ವಿ ಮಾಡೆಲ್ ಆಗುವ ಹಾದಿಯಲ್ಲಿದ್ದಾಳೆ. ದೆಹಲಿಯ ಪಿಂಕ್ ಲೈನ್ ಮೆಟ್ರೊ ಹೊರತುಪಡಿಸಿ ಎಲ್ಲಿಯೂ ತನ್ನ ಬಟ್ಟೆಯಿಂದ ಯಾವುದೇ ಸಮಸ್ಯೆ ಎದುರಿಸಲಿಲ್ಲ ಎಂದು ಹೇಳಿದ್ದಾಳೆ.
ಇದನ್ನೂ ಓದಿ:ಮೊದಲ ಮೊಬೈಲ್ ಕರೆ ಮಾಡಿ 50 ವರ್ಷ; ಅಂದು ಮೊದಲು ಕರೆ ಮಾಡಿದ್ದು ಯಾರು!
ರಿಧಮ್​ ಅವರ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಈ ವಿಷಯದ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದೆ. DMRCಯು ತನ್ನ ಪ್ರಯಾಣಿಕರು ಸಮಾಜದಲ್ಲಿ ಸ್ವೀಕಾರಾರ್ಹವಾದ ಎಲ್ಲ ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕೆಂದು ನಿರೀಕ್ಷಿಸುತ್ತದೆ. ಪ್ರಯಾಣಿಕರು ಯಾವುದೇ ಅಸಭ್ಯ ಚಟುವಟಿಕೆಯಲ್ಲಿ ತೊಡಗಬಾರದು ಅಥವಾ ಇತರ ಸಹ ಪ್ರಯಾಣಿಕರ ಸಂವೇದನೆಗೆ ಧಕ್ಕೆ ತರುವಂತಹ ಯಾವುದೇ ಉಡುಗೆಯನ್ನು ಧರಿಸಬಾರದು. ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸುವಾಗ ಸಭ್ಯತೆಯಿಂದ ನಡೆದುಕೊಳ್ಳಲು ಎಲ್ಲ ಪ್ರಯಾಣಿಕರಿಗೆ ನಾವು ಮನವಿ ಮಾಡುತ್ತೇವೆ ಎಂದಿದೆ.(ಏಜೆನ್ಸೀಸ್​)
A post shared by Rhythm Chanana (@prettypastry11112222)

ತುಂಡುಡುಗೆ ತೊಟ್ಟು ಯುವತಿಯ ಮೆಟ್ರೋ ಪ್ರಯಾಣ; ಇದು ಊರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು!

ಈ ಫೋಟೋದಲ್ಲಿರೋ ಗೂಬೆಯನ್ನು 10 ಸೆಕೆಂಡ್​ನಲ್ಲಿ ಗುರುತಿಸುವಿರಾ? ಶೇ.90 ಮಂದಿಯ ಕೈಯಲ್ಲಿ ಆಗಿಲ್ಲ!

ಅಗತ್ಯ ಔಷಧಿಗಳ ಬೆಲೆಯಲ್ಲಿ ಶೇ.6.73ರಷ್ಟು ಇಳಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
