ಭೋಪಾಲ್​:ಸಾಧಿಸುವ ಛಲವೊಂದಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವ ಮಾತಿಗೆ ಈ ಒಂದು ವ್ಯಕ್ತಿ ತಾಜಾ ಉದಾಹರಣೆ ಆಗಿದ್ದಾರೆ. ತುಂಬಾ ಓದಿದ್ದೇನೆ. ನನಗೆ ಸರಿಸಮನಾದ ಕೆಲಸ ಸಿಗುತ್ತಿಲ್ಲ ಎಂದು ಕೈಕಟ್ಟಿ ಕುಳಿತರೆ ಏನು ಸಾಧಿಸಲಾಗದು. ನಮ್ಮಲ್ಲಿರುವ ಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ಏನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ಮಧ್ಯ ಪ್ರದೇಶದ ಪ್ರಫುಲ್​ ಬಿಲ್ಲೋರ್​ ಸಾಕ್ಷಿಯಾಗಿದ್ದಾರೆ.
ಎಂಬಿಎ ಓದಿರುವ ಪ್ರಫುಲ್​ ಯಾವುದೇ ಕೆಲಸ ಸಿಗಲಿಲ್ಲ ಎಂದು ಕೊರಗದೆ ತಮ್ಮಲ್ಲಿರುವ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಂಡು ಇಂದು ಮಿಲಿಯನೇರ್​ ಆಗಿದ್ದಾರೆ. ಯಾವುದೇ ಕೆಲಸವಾಗಲಿ ಚಿಕ್ಕದು, ದೊಡ್ಡದು ಎಂಬುದಿಲ್ಲ. ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಕಂಡಿತ ಎನ್ನುವ ಮಾತನ್ನು 22 ವರ್ಷದ ಪ್ರಫುಲ್​ ನಿರೂಪಿಸಿದ್ದಾರೆ. ಟೀ ಮಾರಿಯೇ ಕೋಟ್ಯಾಂತರ ರೂಪಾಯಿ ಸಂಪಾದಿಸಿದ್ದಾರೆ.
ಇದನ್ನೂ ಓದಿರಿ:Web Exclusive: ಕುಟುಂಬ ರಕ್ಷಣೆಗೆ ಸುರಕ್ಷಾ, ನಗದು ರಹಿತ ಚಿಕಿತ್ಸಾ ಸೌಲಭ್ಯ: ಧರ್ಮಸ್ಥಳ ಸಂಸ್ಥೆ ನೂತನ ಯೋಜನೆ
ಮಧ್ಯಪ್ರದೇಶದ ಪ್ರಫುಲ್​ ಸದ್ಯ ಗುಜರಾತ್​ನ ಅಹಮದಾಬಾದ್​ನಲ್ಲಿ ನೆಲೆಸಿದ್ದು, ದೇಶಾದ್ಯಂತ ಎಂಬಿಎ ಚಾಯ್​ವಾಲಾ ಎಂದೇ ಪ್ರಖ್ಯಾತಿ ಆಗಿದ್ದಾರೆ. ಬರೋಬ್ಬರಿ 3 ಕೋಟಿ ರೂ. ವಹಿವಾಟು ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಸಿಎಟಿ ಅಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗದಿದ್ದಾಗ ಅಧ್ಯಯನವನ್ನು ಅರ್ಧಕ್ಕೆ ಬಿಡಲು ನಿರ್ಧರಿಸುತ್ತಾರೆ. ಕೊನೆಗೆ ಒಂದು ನಿರ್ಧಾರಕ್ಕೆ ಬರುವ ಪ್ರಫುಲ್ ಬೀದಿ ಬದಿಯಲ್ಲಿ ಟೀ ಮಾರಾಟ ಮಾಡಲು ಆರಂಭಿಸುತ್ತಾರೆ. ಇದಕ್ಕೂ ಮುನ್ನ ಅಹಮದಾಬಾದ್​ನ ರೆಸ್ಟೋರೆಂಟ್​ ಒಂದರಲ್ಲಿ ಪಾರ್ಟ್​ ಟೈಮ್​ ಕೆಲಸ ಮಾಡುತ್ತಿರುತ್ತಾರೆ.
ಇದೇ ವೇಳೆ ಟೀ ಮಾಡುವುದನ್ನು ಚೆನ್ನಾಗಿ ಕಲಿಯುವ ಪ್ರಫುಲ್​ ಕೊನೆಗೆ ತನ್ನದೇ ಸ್ವಂತ ಟೀ ಶಾಪ್​ ತೆರೆಯುತ್ತಾರೆ. ವ್ಯವಹಾರದ ಮೊದಲ ದಿನ, ಹಾಲನ್ನು ಹಾಳು ಮತ್ತು ಹೆಚ್ಚಿನ ಸಕ್ಕರೆ ಹಾಕುವ ಮೂಲಕ ಕೇವಲ ಒಂದು ಕಪ್ ಚಹಾವನ್ನು ಮಾತ್ರ ಪ್ರಫುಲ್​ ಮಾರಾಟ ಮಾಡುತ್ತಾರೆ.
ಇದಾದ ಬಳಿಕ ದಿನ ಕಳೆದಂತೆ ಟೀ ಮಾಡುವುದರಲ್ಲಿ ಪ್ರಫುಲ್​ ನಿಸ್ಸೀಮರಾಗುತ್ತಾರೆ. ವ್ಯವಹಾರ ಚೆನ್ನಾಗಿಯೇ ನಡೆಯಲು ಆರಂಭಿಸುತ್ತದೆ. ಆರಂಭದಲ್ಲಿ ಒಂದು ತಿಂಗಳಿಗೆ 15 ಸಾವಿರ ಸಂಪಾದನೆ ಮಾಡುತ್ತಿರುತ್ತಾರೆ. ಇದರ ನಡುವೆಯೇ ಕುಟುಂಬದ ವಿರೋಧದ ನಡುವೆಯೂ ಎಂಬಿಎಗೆ ಪ್ರಫುಲ್​ ಗುಡ್​ ಬೈ ಹೇಳುತ್ತಾರೆ.
ಇದನ್ನೂ ಓದಿರಿ:ಸ್ಕೂಲ್​ ಬ್ಯಾಗ್​ ಕೊಡಿಸೋ ನೆಪದಲ್ಲಿ ಅಪ್ರಾಪ್ತೆ ಕರೆದೊಯ್ದ ಸ್ನೇಹಿತ: 8 ದಿನ 20 ಮಂದಿಯಿಂದ ನರಕ ದರ್ಶನ!
ಇದಾದ ಬಳಿಕ ಸಾಕಷ್ಟು ಹೋರಾಟ ಮಾಡುವ ಪ್ರಫುಲ್​ ಅಂತಿಮವಾಗಿ ತನ್ನ ಕೆಲಸದಲ್ಲಿ ಯಶಸ್ಸು ಗಳಿಸುತ್ತಾರೆ. ಇದೀಗ ವರ್ಷಕ್ಕೆ 3 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ. ಇವರ ಯಶಸ್ಸಿನ ಕತೆಯನ್ನು ಇತ್ತೀಚೆಗಷ್ಟೇ ಹ್ಯೂಮನ್ಸ್​ ಆಫ್​ ಬಾಂಬೆ ಎಂಬ ಜಾಲತಾಣದಲ್ಲಿ ಶೇರ್​ ಮಾಡಿದ್ದು, ಪ್ರಫುಲ್​ ಅವರಿಗೆ ಸಾಕಷ್ಟು ಮೆಚ್ಚುಗೆ ಮಹಾಪೂರವೇ ಹರಿಯುತ್ತಿದೆ.(ಏಜೆನ್ಸೀಸ್​)
ಇನ್ನೆಷ್ಟು ತಲೆಮಾರು ಮೀಸಲಾತಿ ಮುಂದುವರಿಯಬೇಕು? ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಪ್ರಶ್ನೆ

ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗಕ್ಕೆ ಕರ್ನಾಟಕದ ಹೊಸ ಕೊಡುಗೆ ಪ್ರಸಿದ್ಧಕೃಷ್ಣ

ನಾಯಿಯ ಮಾಲೀಕತ್ವಕ್ಕೆ ಉಂಟಾದ ಜಗಳ ಡಿಎನ್​ಎ ಪರೀಕ್ಷೆಯಲ್ಲಿ ಬಗೆಹರಿಯಿತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
