ಮೇಘಾಲಯ:ನೆರೆಯ ಬಾಂಗ್ಲಾದೇಶದಲ್ಲಿ ಇತ್ತೀಚಿನ ಹಿಂಸಾತ್ಮಾಕ ಪ್ರತಿಭಟನೆ ನಂತರ, ಮೇಘಾಲಯವು ಬಾಂಗ್ಲಾದೇಶದ ಗಡಿಯ ಬಳಿ ರಾತ್ರಿ ಕರ್ಫ್ಯೂ ವಿಧಿಸಿದೆ. ಈ ಬಗ್ಗೆ ಮೇಘಾಲಯದ ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟೈನ್ಸಾಂಗ್ ಮಾತನಾಡಿ, ನೆರೆಯ ದೇಶದಲ್ಲಿ ಅಶಾಂತಿಯ ನಡುವೆ ಬಾಂಗ್ಲಾದೇಶದೊಂದಿಗಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಕರ್ಫ್ಯೂ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.
ಇದನ್ನೂ ಓದಿ:ವಿನೇಶ್ ಫೋಗಟ್ ಪರಾಕ್ರಮ: ಟೊಕಿಯೋ ಒಲಿಂಪಿಕ್ಸ್​ ಚಾಂಪಿಯನ್​ಗೆ ಸೋಲುಣಿಸಿ ಕ್ವಾರ್ಟರ್ ಫೈನಲ್ ಲಗ್ಗೆ
444 ಕಿಮೀ ಗಡಿಯಲ್ಲಿ ಕರ್ಫ್ಯೂ ಮುಂದಿನ ಸೂಚನೆ ಬರುವವರೆಗೆ ಪ್ರತಿದಿನ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಜಾರಿಯಲ್ಲಿರುತ್ತದೆ. ಬಿಎಸ್ಎಫ್ ಅಧಿಕಾರಿಗಳು ಮತ್ತು ಮೇಘಾಲಯ ಪೊಲೀಸರೊಂದಿಗೆ ಸಭೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೆ, BSF 4,096 ಕಿಮೀ ಉದ್ದದ ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ ತನ್ನ ಎಲ್ಲಾ ಘಟಕಗಳಿಗೆ ‘ಹೈ ಅಲರ್ಟ್’ ನೀಡಿದೆ.
ಬಾಂಗ್ಲಾ ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ನಂತರ ಸೋಮವಾರದಂದು ಶೇಖ್ ಹಸೀನಾ ಅವರ 15 ವರ್ಷಗಳ ದೀರ್ಘಾವಧಿಯ ಅವಧಿಯು ಅಂತ್ಯಗೊಂಡಿದ್ದರಿಂದ ಬಾಂಗ್ಲಾದೇಶವು ನಾಟಕೀಯ ಘಟನೆಗಳಿಗೆ ಸಾಕ್ಷಿಯಾಗಿದೆ.
1971ರ ಯುದ್ಧ ಪರಿಣತರ ವಂಶಸ್ಥರ ಕೋಟಾದ ವಿರುದ್ಧ ವಿದ್ಯಾರ್ಥಿ ಪ್ರತಿಭಟನೆಯು ಶೇಖ್ ಹಸೀನಾ ಅವರ ರಾಜೀನಾಮೆಗೆ ಆಗ್ರಹಿಸಿ ಭಾರೀ ಪ್ರತಿಭಟನೆ ನಡೆಸಿತು. ಕಳೆದೊಂದು ವಾರದ ಹಿಂಸಾಚಾರದಲ್ಲಿ ಪೊಲೀಸರು ಸೇರಿದಂತೆ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
ಅವರ ರಾಜೀನಾಮೆಯ ನಂತರ, ಶೇಖ್ ಹಸೀನಾ ಭಾರತಕ್ಕೆ ಬಂದರು. ಸೋಮವಾರ ಸಂಜೆ, ಅವರ ವಿಮಾನವು ಘಟಿ ವಾಯುಪಡೆಯ ಹಿಂಡನ್ ಏರ್‌ಬೇಸ್‌ನಲ್ಲಿ ಇಳಿಯಿತು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಹಿಂಡನ್ ವಿಮಾನ ನಿಲ್ದಾಣದಲ್ಲಿ ಶೇಖ್ ಹಸೀನಾ ಅವರನ್ನು ಭೇಟಿಯಾದರು. ಈ ವೇಳೆ ಹಿರಿಯ ಸೇನಾಧಿಕಾರಿಗಳೂ ಅವರೊಂದಿಗೆ ಉಪಸ್ಥಿತರಿದ್ದರು.
ಮೂಲಗಳ ಪ್ರಕಾರ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಿಂಡನ್ ಏರ್‌ಬೇಸ್‌ನ ಸುರಕ್ಷಿತ ಮನೆಗೆ ಸ್ಥಳಾಂತರಿಸಲಾಗಿದೆ. ಆಕೆಯ ಭದ್ರತೆಗಾಗಿ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ. ವರದಿಗಳ ಪ್ರಕಾರ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಆಶ್ರಯ ಕೋರಿಕೆಯನ್ನು ಯುಕೆ ಅನುಮೋದಿಸಿದ ನಂತರ ಲಂಡನ್‌ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.
ಈ ಮಧ್ಯೆ ಸರ್ಕಾರ ದೆಹಲಿಯಲ್ಲಿ ಸರ್ವಪಕ್ಷ ಸಭೆಗೆ ಕರೆ ನೀಡಿದೆ. ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈ ಶಂಕರ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸಭೆಯಲ್ಲಿ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ. ಇಎಎಂ ಜೈಶಂಕರ್ ಅವರು ನೆರೆಯ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಎಲ್ಲಾ ಪಕ್ಷಗಳಿಗೆ ಮಾಹಿತಿ ನೀಡಲಿದ್ದಾರೆ.
ಕಪ್ಪಾಗಿ ದಪ್ಪಗಿದ್ದೀಯ..ಯಾರು ಆಫರ್ ಕೊಡ್ತಾರೆ? ಅವಮಾನಗಳನ್ನು ಮೆಟ್ಟಿನಿಂತ ಈಕೆ ಸ್ಟಾರ್ ಹೀರೋಯಿನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eight =
Remember me
