ಶ್ರೀನಗರ:ಕಾಂಗ್ರೆಸ್​ ಪಕ್ಷದ ನಾಯಕ ರಾಹುಲ್​ ಗಾಂಧಿಯವರನ್ನು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೊಗಳಿ ಟ್ವೀಟ್​ ಮಾಡಿದ್ದಾರೆ. ದೇಶದ ರಾಜಕೀಯದಲ್ಲಿ ಸತ್ಯ ಹೇಳಲು ಹೆದರದ ರಾಜಕಾರಣಿ ಎಂದರೆ ಅದು ರಾಹುಲ್​ ಗಾಂಧಿ ಎಂದು ಅವರು ಟ್ವೀಟ್​ನಲ್ಲಿ ತಿಳಿಸಿದ್ದಾರೆ.
ನೂತನ ಭಾರತವು ಆಯ್ದ ಕೆಲವೇ ಕೆಲವು ಬಂಡವಾಳಶಾಹಿಗಳ ಹಿಡಿತದಲ್ಲಿದೆ ಎನ್ನುವುದು ಸತ್ಯವಾದ ಮಾತು. ರಾಹುಲ್​ ಗಾಂಧಿ ಅವರ ಬಗ್ಗೆ ಯಾರು ಏನು ಹಾಸ್ಯವನ್ನಾದರೂ ಮಾಡಬಹುದು ಆದರೆ ಅವರು ಸತ್ಯವನ್ನು ಮಾತನಾಡುವ ಧೈರ್ಯಶಾಲಿ ರಾಜಕಾರಣಿ. ಪ್ರಸ್ತುತ ಆಡಳಿತದಲ್ಲಿರುವ ಸರ್ವಾಧಿಕಾರಿಗಳ ವಿರುದ್ಧ ನಿಂತಿದ್ದಕ್ಕೆ ಇತಿಹಾಸ ಅವರನ್ನು ನೆನಪಿಸಿಕೊಳ್ಳಲಿದೆ ಎಂದು ಮುಫ್ತಿ ಅವರು ಟ್ವೀಟ್​ ಮಾಡಿದ್ದಾರೆ.
ಇನ್ನೊಂದು ಟ್ವೀಟ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಅವರು, “ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳ (ಎನ್​ಐಎ)ವನ್ನು ಕೃಷಿ ಕಾಯ್ದೆಯ ವಿರುದ್ಧ ಹೋರಾಡುತ್ತಿರುವ ರೈತರ ಮೇಲೆ ಪ್ರಯೋಗಿಸುತ್ತಿದೆ. ಕಾಶ್ಮೀರಿಗಳು, ರೈತರು ಮತ್ತು ಸರ್ಕಾರದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರ ಮೇಲೆ ಎನ್​ಐಎ ತೆಗೆದುಕೊಳ್ಳುತ್ತಿರುವ ಕ್ರಮವನ್ನು ನೋಡಿದರೆ ಸಂಸ್ಥೆ ಎಷ್ಟು ಹಾಳಾಗಿದೆ ಎನ್ನುವುದುನ್ನು ಹೇಳಬಹುದು” ಎಂದು ಹೇಳಿದ್ದಾರೆ. (ಏಜೆನ್ಸೀಸ್​)
Ridicule Rahul Gandhi all you want but he’s the only politician who dares to speak the truth. Its a fact that new India is in the grip of a select few & crony capitalists. History will remember him for standing upto the present dictatorial regime.
— Mehbooba Mufti (@MehboobaMufti)January 16, 2021

ಕೊನೆಯುಸಿರೆಳೆವ ಮುನ್ನ ಐವರಿಗೆ ಹೊಸ ಜೀವನ ಕೊಟ್ಟ 20 ತಿಂಗಳ ಮಗು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − six =
Remember me
