ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಗುರುವಾರ ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಪಾಕಿಸ್ತಾನ ಮತ್ತು ಸಿರಿಯಾಕ್ಕೆ ಹೋಲಿಸಿದ್ದಾರೆ. “ಜನರು ಬಂದೂಕುಗಳನ್ನು ಹಿಡಿದುಕೊಂಡು ಪರಸ್ಪರ ಕೊಲ್ಲುತ್ತಿದ್ದಾರೆ. ಇದನ್ನು ಭಾರತವು ಇಲ್ಲಿಯವರೆಗೆ ನೋಡಿಲ್ಲ” ಎಂದು ಅವರು ಹೇಳಿದರು.
ಅವರು “ಎಲ್ಲೆಡೆ ಹರಡುತ್ತಿರುವ ದ್ವೇಷದ ಪ್ರಮಾಣವನ್ನು ನೀವು ನೋಡಬಹುದು. ಸಾಮಾನ್ಯ ಜನರು ಪರಸ್ಪರ ಕೊಲ್ಲಲು ಬಂದೂಕುಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆ. ಇದನ್ನು ನಾವು ಪಾಕಿಸ್ತಾನದಲ್ಲಿ ನೋಡಿದ್ದೇವೆ. ಇದು ಸಿರಿಯಾದಲ್ಲಿ ನಡೆಯುತ್ತಿರುವ ವಿಷಯ. ಅಲ್ಲಿ ಅವರು ಅಲ್ಲಾಹು ಅಕ್ಬರ್ ಎಂದು ಕೂಗುತ್ತಾ ಜನರನ್ನು ಕೊಲ್ಲುತ್ತಾರೆ. ಇಲ್ಲಿ ನಾವು ಜೈ ಶ್ರೀ ರಾಮ್ ಎಂದು ಹೇಳುತ್ತಾ ಕೊಲ್ಲುತ್ತೇವೆ. ಈಗ ವ್ಯತ್ಯಾಸವೇನು?” ಎಂದು ಅವರು ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಇದನ್ನೂ ಓದಿ:ಅವಶೇಷಗಳ ಅಡಿ ಸಿಲುಕಿದ್ದರೂ ಸಾವನ್ನೇ ಸೋಲಿಸಿದರು! ಟರ್ಕಿ- ಸಿರಿಯಾದಲ್ಲಿ ರಕ್ಷಣಾ ಕಾರ್ಯ ವೇಳೆ ಹಲವು ಅಚ್ಚರಿ
ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು “ಬಂದೂಕು ಹೊಂದಿರುವ ಜನರು ಪರಸ್ಪರ ಕೊಲ್ಲುವ” ಪರಿಸ್ಥಿತಿಗೆ ತಂದಿದ್ದಾರೆ ಎಂದು ಅವರು ಆರೋಪಿಸಿದರು. “ಅಂತಿಮವಾಗಿ ದ್ವೇಷದ ಮೇಲೆ ಪ್ರೀತಿ ಮೇಲುಗೈ ಸಾಧಿಸುತ್ತದೆ” ಎಂದು ಅವರು ಹೇಳಿದರು.
ಎನ್‍ಡಿಎ ಮೈತ್ರಿಕೂಟದ ರಚನೆಯ ಬಗ್ಗೆ ಪ್ರತಿಕ್ರಿಯಿಸಿದ ಮುಫ್ತಿ, “ಇದು ಗೋಡ್ಸೆಯ ಭಾರತ ಮತ್ತು ಗಾಂಧಿ, ನೆಹರೂ ಮತ್ತು ಸರ್ದಾರ್ ಪಟೇಲ್ ಕಲ್ಪಿಸಿದ ಭಾರತದ ಕಲ್ಪನೆಯ ನಡುವಿನ ಯುದ್ಧವಾಗಲಿದೆ. ಬಿಜೆಪಿ ಗೋಡ್ಸೆಯ ಭಾರತವನ್ನು ಸೃಷ್ಟಿಸಲು ಬಯಸಿದೆ. I.N.D.I.A ಮೈತ್ರಿಕೂಟವು ಸರಿಯಾದ ಕಾರಣಕ್ಕಾಗಿ ಹೋರಾಡುತ್ತಿದ್ದು ಧರ್ಮಾಂಧತೆಯ ವಿರುದ್ಧದ ಈ ಹೋರಾಟವನ್ನು ರಾಹುಲ್ ಗಾಂಧಿ ಮುನ್ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮುಫ್ತಿ ಹೇಳಿದರು.
ಇದನ್ನೂ ಓದಿ:ಸಿರಿಯಾ ಭೂಕಂಪದ ಅವಶೇಷಗಳಡಿ ಜನಿಸಿದ ಮಗುವಿಗೆ ಅಯಾ ಎಂದು ನಾಮಕರಣ! ಹೆಸರಿನ ಅರ್ಥ ಹೀಗಿದೆ….
ಇದೇ ವೇಳೆ ಅವರು, “ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಲು ಬಿಜೆಪಿ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂದು ಅವರು ಆರೋಪಿಸಿದರು. “ಬಿಜೆಪಿಯನ್ನು ಸೋಲಿಸುವುದು ಸವಾಲಿನ ಕೆಲಸವಾಗಲಿದೆ. ಏಕೆಂದರೆ I.N.D.I.A ಬಿಜೆಪಿಯನ್ನು ಮಾತ್ರವಲ್ಲ, ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳದಂತಹ ಸಂಸ್ಥೆಗಳನ್ನು ಸಹ ಎದುರಿಸಲಿದೆ” ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮುಫ್ತಿ, “ಅವರು ಭೂತಕಾಲದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಅವರು ಜನರಿಗೆ ನೀಡಿದ ಭರವಸೆಯ ಬಗ್ಗೆ ಮಾತನಾಡುತ್ತಿಲ್ಲ. ಅವರು ದೇಶದ ಭವಿಷ್ಯದ ಬಗ್ಗೆ ಮೌನವಾಗಿದ್ದಾರೆ.
ಇದನ್ನೂ ಓದಿ:ಐಸಿಸ್​ ನೇಮಕಕ್ಕೆ ನೆರವಾಗುತ್ತಿದ್ದ ಬೆಂಗಳೂರಿನ ಯುವಕ ಸಿರಿಯಾದಲ್ಲಿ ಹತ್ಯೆ; ಶ್ರೀಮಂತ ಕುಟುಂಬದವ 7 ವರ್ಷದಿಂದ ಕಣ್ಮರೆ…!
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಮಾತನಾಡಿದ ಅವರು, “ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿ ಮರಳಿರುವುದು ಒಂದು ಮಿಥ್ಯೆಯಾಗಿದೆ. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ತೊಂದರೆ ಅನುಭವಿಸಿದೆ” ಎಂದು ಅವರು ಹೇಳಿದ್ದಾರೆ.(ಏಜೆನ್ಸೀಸ್)
ಚಂದ್ರಯಾನ-3 ಮಹತ್ವದ ಮೈಲಿಗಲ್ಲು; ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್ ಮಾಡ್ಯೂಲ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
