|ರಾಘವ ಶರ್ಮ ನಿಡ್ಲೆನವದೆಹಲಿ
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಗೆ ಸದ್ಯಕ್ಕೆ ಹಸಿರು ನಿಶಾನೆ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಬುಧವಾರಕ್ಕೆ ನಿಗದಿಯಾಗಿದ್ದ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯನ್ನು ಸಮಿತಿ ಅಧ್ಯಕ್ಷರು ಅನಿರ್ಧಿಷ್ಟಾವಧಿಗೆ ಮುಂದೂಡಿರುವುದರಿಂದ ಮೇಕೆದಾಟು ಯೋಜನೆ ಕುರಿತಂತೆ ಸಮಿತಿಯಲ್ಲಿ ಯಾವಾಗ ಚರ್ಚೆ ನಡೆಸಲಿದೆ ಎಂಬ ಸ್ಪಷ್ಟತೆಯೇ ಸಿಗದಂತಾಗಿದೆ.
ಡಿಪಿಆರ್​ಗೆ ಸಮ್ಮತಿ ನೀಡುವಂತೆ ಕರ್ನಾಟಕ ಸರ್ಕಾರ ಕೇಂದ್ರ ಜಲ ಆಯೋಗದ ಮುಂದೆ ಮನವಿಯೊಂದನ್ನು ಸಲ್ಲಿಸಿದೆ. ಆದರೆ ಆಯೋಗ, ನೀರು ನಿರ್ವಹಣಾ ಪ್ರಾಧಿಕಾರ ಮೊದಲು ತನ್ನ ನಿರ್ಣಯ ತಿಳಿಸಲಿ ಎಂದು ನಿರೀಕ್ಷಿಸುತ್ತಿದೆ. ಈ ಹಿಂದೆ ಜೂನ್ 17 ಮತ್ತು 23ಕ್ಕೆ ಸಮಿತಿ ಸಭೆ ನಿಗದಿಯಾಗಿತ್ತು. ತಮಿಳುನಾಡು ಮನವಿಯಿಂದಾಗಿ ಸಮಿತಿ ಸಭೆಗಳನ್ನು ಮುಂದಕ್ಕೆ ಹಾಕಿತು. ಬುಧವಾರದ ಸಭೆಯನ್ನೂ ಮುಂದಕ್ಕೆ ಹಾಕಲಾಗಿದ್ದು, ಮೇಕೆದಾಟು ವಿಷಯದಲ್ಲಿ ರಾಜ್ಯ ಸರ್ಕಾರ ಉದ್ದೇಶ ಈಡೇರುವ ಬಗೆ ಹೇಗೆ ಎಂಬ ಪ್ರಶ್ನೆ ಮತ್ತೆ ಎದುರಾಗಿದೆ.
ಜಲ ವ್ಯಾಜ್ಯಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಯಾವುದೇ ಒಂದು ರಾಜ್ಯದ ಪರವಾಗಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ. ಹೀಗಾಗಿಯೇ ಮೇಕೆದಾಟು ಯೋಜನೆ ಬಗ್ಗೆಯೂ ಕೋರ್ಟ್​ನಿಂದಲೇ ಅಂತಿಮ ತೀರ್ಮಾನ ಬರಲಿ ಎಂದು ಕಾಯುತ್ತಿರುವಂತೆ ಭಾಸವಾಗುತ್ತಿದೆ. ಕರ್ನಾಟಕ ಸರ್ಕಾರ ಕೂಡ ಸುಪ್ರೀಂಕೋರ್ಟ್ ಮುಂದೆ ಮನವಿ ಸಲ್ಲಿಸಿ, ನೀರು ನಿರ್ವಹಣಾ ಪ್ರಾಧಿಕಾರ ತೀರ್ಮಾನ ಪ್ರಕಟಿಸಬೇಕೆಂದು ನಿರ್ದೇಶನ ನೀಡುವಂತೆ ಕೊರಬೇಕು ಎಂದು ಸುಪ್ರೀಂಕೋರ್ಟ್ ವಕೀಲರೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಮೇಕೆದಾಟು ಯೋಜನೆ ಪ್ರಶ್ನಿಸಿ ಈಗಾಗಲೆ ತಮಿಳುನಾಡು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿರುವು ದರಿಂದ ಕರ್ನಾಟಕಕ್ಕೆ ಕೋರ್ಟ್ ಮೂಲಕ ಪರಿಹಾರ ಕಂಡು ಕೊಳ್ಳುವ ಹಾದಿ ಸುಲಭದ್ದೇನಲ್ಲ. ಒಂದುವೇಳೆ ಕೋರ್ಟ್ ಯೋಜನೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದಲ್ಲಿ ರಾಜ್ಯದ ಮುಂದಿರುವ ಎಲ್ಲ ಹಾದಿಗಳೂ ಅಂತ್ಯಗೊಂಡಂತಾಗಲಿದೆ. ಹೀಗಾಗಿ ಕೇಂದ್ರದ ಜತೆಗೆ ಹೊಂದಾಣಿಕೆ ಮಾಡಿಕೊಂಡು ಮಧ್ಯಮ ಮಾರ್ಗ ಕಂಡುಕೊಳ್ಳಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
Video | ಚಲಿಸುತ್ತಿದ್ದ ಕಾರಿನ ಮೇಲೇ ಬಿತ್ತು ಬೃಹತ್ ಕೊಂಬೆ; ಬೆಚ್ಚಿ ಬೀಳಿಸುವಂಥ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
