ಚೆನ್ನೈ:ದಕ್ಷಿಣದಲ್ಲಿ ಕರ್ನಾಟಕದ ಹೊರತಾಗಿ ಬೇರೆ ರಾಜ್ಯಗಳಲ್ಲಿ ತನ್ನ ನೆಲೆ ಭದ್ರಪಡಿಸಿಕೊಳ್ಳಲು ಸಾಧ್ಯವಾಗದೆ ಹೆಣಗುತ್ತಿರುವ ಬಿಜೆಪಿಗೆ ತಮಿಳುನಾಡಿನಲ್ಲಿ ಕೊಂಚ ಬಲ ಸಿಕ್ಕಿದೆ.
ಇದನ್ನೂ ಓದಿ:ಸಂಸದ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ದಮ್ಮು, ತಾಖತ್ ಬಿಜೆಪಿಗೆ ಇಲ್ಲ: ಸಿದ್ದರಾಮಯ್ಯ
ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್​ ಅವರ ಅಭಿಮಾನಿಗಳ ಸಂಘದ ಪ್ರಮುಖ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಜ್ಯಾದ್ಯಕ್ಷ ಅಣ್ಣಾಮಲೈ ಅವರು ಕಮಲ ಪಕ್ಷಕ್ಕೆ ಬರಮಾಡಿಕೊಂಡರು. ಅಣ್ಣಾಮಲೈ ಮತ್ತು ಪಕ್ಷದ ಹಿರಿಯ ನಾಯಕ ಎಚ್ ರಾಜಾ ಅವರು ರಜನಿಕಾಂತ್​ ಅವರ ಅಭಿಮಾನಿಗಳಿಗೆ ಶಾಲು ಹೊದಿಸಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಲೋಕಸಭೆ ಚುನಾವಣೆ ವೇಳೆ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆ ಪ್ರಾರಂಭವಾಗಿದೆ. ಇತ್ತೀಚೆಗಷ್ಟೇ ಇತರೆ ಮಾಜಿ ಶಾಸಕರು ಸೇರಿದಂತೆ ಎಐಎಡಿಎಂಕೆ 15 ಮಾಜಿ ಶಾಸಕರು ಮತ್ತು ಒಬ್ಬ ಸಂಸದ ಸೇರಿದಂತೆ ಅನೇಕ ಮುಖಂಡರ ಗುಂಪು ಕೇಸರಿ ಪಕ್ಷ ಸೇರ್ಪಡೆಯಾಗಿತ್ತು.
ಸೋಮವಾರ (ಫೆ.11) ಇಂದು ನಡೆಯಲಿರುವ ಬಿಜೆಪಿಯ ಕೋರ್ ಕಮಿಟಿ ಸಭೆಗೆ ಮುನ್ನ ಈ ಕಾರ್ಯಕ್ರಮ ನಡೆದಿದ್ದು, ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೈತ್ರಿ ಸಂಬಂಧಿತ ವಿಷಯಗಳನ್ನು ಚರ್ಚಿಸುವ ಸಾಧ್ಯತೆ ಇದೆ.
ಎಐಎಡಿಎಂಕೆ ಜತೆಗಿನ ಸಂಬಂಧ ಕಡಿದುಕೊಂಡ ಬಳಿಕ ಮುಂಬರುವ ಲೋಕಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ತೃತೀಯ ರಂಗ ರಚನೆಗೆ ತೀವ್ರ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ಇತರ ಪಕ್ಷಗಳ ನಾಯಕರನ್ನೂ ಸೇರಿಸಿ ಪಕ್ಷದ ನೆಲೆಯನ್ನು ವಿಸ್ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
IPL ಆರಂಭಕ್ಕೂ ಅಂಬಾಟಿ ರಾಯಡು ಮಹತ್ವದ ಹೇಳಿಕೆ..! ಸಿಎಸ್​ಕೆಗೆ ರೋಹಿತ್ ಶರ್ಮ ಕ್ಯಾಪ್ಟನಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + fifteen =
Remember me
