ಪೆರಂಬಲೂರ್​:23 ವರ್ಷದ ಯುವತಿ ತನ್ನದೇ ಫೋಟೋ ಇರುವ ಶ್ರದ್ಧಾಂಜಲಿ ಪೋಸ್ಟರ್​ಗಳನ್ನು ನೋಡಿ ಕಕ್ಕಾಬಿಕ್ಕಿಯಾದ ಘಟನೆ ತಮಿಳುನಾಡಿನ ಪೆರಂಬಲೂರಿನಲ್ಲಿ ನಡೆದಿದೆ.ತನ್ನ ಫೋಟೋ ಹಾಕಿ ಶ್ರದ್ಧಾಂಜಲಿ ಕೋರಿದ ಪೋಸ್ಟರ್​ಗಳನ್ನು ಅಂಟಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪೆರಂಬಲೂರ್​ ಜಿಲ್ಲೆಯ ಎಲಂಬಲೂರು ರಸ್ತೆಯಲ್ಲಿರುವ ಮೆಟ್ಟುಥೇರು ನಿವಾಸಿ ರೋಶನಿಗೆ ಈ ಕೆಟ್ಟ ಅನುಭವ ಆಗಿದೆ. ಪದವೀಧರೆಯಾಗಿರುವ ಇವರು ಸೇಲಂ ಜಿಲ್ಲೆಯ ಕಟ್ಟುಕೊಟ್ಟೈಗಿ ಗ್ರಾಮದ ವೀರರಾಘವನ್​ ಎಂಬುವನನ್ನು ವಿವಾಹವಾಗಿದ್ದು ದಂಪತಿ ಹೊಸುರ್​​ನಲ್ಲಿ ವಾಸವಾಗಿದ್ದರು. ರೋಶಿನಿ ಸದ್ಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಆದರೆ ವೀರರಾಘವನ್​ ಮತ್ತು ರೋಶಿನಿ ಕುಟುಂಬದ ಮಧ್ಯೆ ಕೆಲವು ವಿಚಾರಕ್ಕೆ ಜಗಳ ನಡೆದಿತ್ತು. ಇದರಿಂದ ಮನನೊಂದಿದ್ದ ವೀರರಾಘವನ್​ ಮಾರ್ಚ್​​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾದ ಮೇಲೆ ರೋಶಿನಿ ತನ್ನ ತಂದೆ-ತಾಯಿಯೊಂದಿಗೆ ತವರು ಮನೆಯಲ್ಲೇ ನೆಲೆಸಿದ್ದರು.ಇದನ್ನೂ ಓದಿ:ರವಿಕುಮಾರ್‌ಗೆ ಕರೊನಾ ಸೋಂಕು; ಶಿರಾ ಬಿಜೆಪಿ ಪ್ರಚಾರಕ್ಕೆ ಹಿನ್ನಡೆ
ಆದರೆ ಶುಕ್ರವಾರ ಬೆಳಗ್ಗೆ ಒಮ್ಮೆಲೇ ಪೆರಂಬೂರು ಜಿಲ್ಲೆಯ ಹಲವು ಕಡೆಗಳಲ್ಲಿ ರೋಶಿನಿಗೆ ಶ್ರದ್ಧಾಂಜಲಿ ಸಲ್ಲಿಸಲಾದ ಪೋಸ್ಟರ್​​ಗಳು ಕಂಡುಬಂದವು. ರೋಶಿನಿ ಅಕ್ಟೋಬರ್​ 7ರಂದು ಮೃತಪಟ್ಟಿದ್ದಾಳೆ ಎಂದು ಪ್ರಕಟಿಸಿ, ಫೋಟೋವನ್ನೂ ಹಾಕಲಾಗಿತ್ತು. ಅದನ್ನು ನೋಡಿದ ರೋಶಿನಿ ಸಂಬಂಧಿಕರು ಕರೆ ಮಾಡಿ ವಿಚಾರಿಸಿದರು. ಅಷ್ಟೇ ಅಲ್ಲ ಅನೇಕರು ಸಾಂತ್ವನವನ್ನೂ ಹೇಳಿದರು. ಇದೆಲ್ಲದರಿಂದ ಕಂಗಾಲಾದ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.ಈ ಕೃತ್ಯದ ಹಿಂದೆ ತನ್ನ ಮೃತ ಪತಿಯ ಕುಟುಂಬದವರ ಕೈವಾಡ ಇದೆ ಎಂದು ಆರೋಪಿಸಿರುವ ರೋಶಿನಿ, ಅವರು ನನ್ನ ಪತಿ ತೀರಿಕೊಂಡ ಬಳಿಕ ನನ್ನನ್ನು ಮನೆಯಿಂದ ಓಡಿಸಿದ್ದಾರೆ. ಇದೀಗ ಹೀಗೆ ಮಾಡಿ ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ:ಟಿಟಿಡಿಯ ಹೊಸ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ಅಧಿಕಾರ ಸ್ವೀಕರಿಸಿದ ಜವಾಹರ ರೆಡ್ಡಿ
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)
ಅಮೆರಿಕಕ್ಕೆ 18 ಲಕ್ಷ ಮಾಸ್ಕ್‌ಗಳನ್ನು ದಾನ ಮಾಡಿದ ಭಾರತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 20 =
Remember me
