ನವದೆಹಲಿ :ಡೇಟಿಂಗ್​ ಆ್ಯಪ್​ನ ಮೂಲಕ ಪುರುಷನೊಬ್ಬನನ್ನು ಪುಸಲಾಯಿಸಿ ಕರೆದು, ಅಶ್ಲೀಲ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ನಾಲ್ವರನ್ನು ಗ್ರೇಟರ್​ ನಾಯಿಡಾ ಪೊಲೀಸರು ಬಂಧಿಸಿದ್ದಾರೆ. ಗ್ರೈಂಡರ್​ ಎಂಬ ಸಲಿಂಗಕಾಮಿಗಳ ಡೇಟಿಂಗ್​ ಆ್ಯಪ್​ನಲ್ಲಿ ಆರೋಪಿಗಳು ನಕಲಿ ಖಾತೆಗಳನ್ನು ತೆರೆದು ಜನರಿಗೆ ವಂಚನೆ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.
ವ್ಯಕ್ತಿಯೊಬ್ಬ ಗ್ರೈಂಡರ್​ ಆ್ಯಪ್​ ಮೂಲಕ ಓರ್ವನ ಪರಿಚಯವಾದ ನಂತರ ಖಾಸಗಿ ಸ್ಥಳದಲ್ಲಿ ಭೇಟಿಯಾಗಲು ಹೋಗಿದ್ದು, ಆ ಸಮಯದಲ್ಲಿ ನಾಲ್ಕು ಜನರು ಬಂದು ಚೆನ್ನಾಗಿ ಥಳಿಸಿ, ಅಶ್ಲೀಲ ವಿಡಿಯೋ ಮಾಡಿಸಿ 2 ಲಕ್ಷ ರೂಪಾಯಿ ಕೊಡದಿದ್ದರೆ ವಿಡಿಯೋವನ್ನು ಲೀಕ್ ಮಾಡುವುದಾಗಿ ಬೆದರಿಸಿದರು ಎನ್ನಲಾಗಿದೆ.
ಇದನ್ನೂ ಓದಿ:ಮೊಬೈಲ್​ನಲ್ಲೇ ವ್ಯವಹಾರ ಕುದುರಿಸಿ 3 ದಿನದ ಗಂಡು ಮಗುವನ್ನೇ ಮಾರಿದ ಮಹಿಳೆ!
ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ 50,000 ರೂ.ಗಳನ್ನು ಯುಪಿಐ ಮೂಲಕ ಪಾವತಿಸಿದ್ದ ಸಂತ್ರಸ್ತನು, ಹೆಚ್ಚಿನ ಹಣದ ಬೇಡಿಕೆ ಇಟ್ಟಾಗ ಬೀಟಾ 2 ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದ. ತನಿಖೆ ಕೈಗೊಂಡ ಪೊಲೀಸರು, ಡಿಜಿಟಲ್​ ಸರ್ವಿಯಲೆನ್ಸ್​ ಬಳಸಿ ದುಷ್ಕರ್ಮಿಗಳ ಲೊಕೇಷನ್ ಪತ್ತೆ ಹಚ್ಚಿದ್ದು, ಗೌರವ್, ಮೋಹಿತ್, ಸಚಿನ್ ಮತ್ತು ಗೌತಮ್​ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.(ಏಜೆನ್ಸೀಸ್)
ದೊಡ್ಡವರ ಜಗಳದಲ್ಲಿ ಕೂಸು ಬಲಿಯಾಯ್ತು… ಸುಳ್ಳು ಕೇಸ್ ಹಾಕಲು ಮೊಮ್ಮಗಳನ್ನು ಕೊಂದ ಕಿರಾತಕಿ!

ಐದು ತಿಂಗಳಾದರೂ ಅರ್ಧದಷ್ಟು ಫಲಾನುಭವಿಗಳಿಗೆ ಮಾತ್ರ ಕರೊನಾ ಲಸಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − ten =
Remember me
