ಗುವಾಹಟಿ:ಲವ್​ ಜಿಹಾದ್ ಕಾನೂನು ವಿಚಾರ ದೇಶಾದ್ಯಂತ ಚರ್ಚೆಗೀಡಾಗಿರುವ ಬೆನ್ನಲ್ಲೇ ಅಸ್ಸಾಂ ಸಚಿವ ಹಿಮಂತ ಬಿಸ್ವಾ ಸರ್ಮಾ , ಪುರುಷರೆಲ್ಲರೂ ಅವರವರ ಧರ್ಮ, ಉದ್ಯೋಗ, ಆದಾಯ ಘೋಷಿಸಿಯೇ ಮದುವೆ ಮಾತುಕತೆ ಮುಂದುವರಿಸಬೇಕು. ಈ ಅಂಶವನ್ನು ಒಳಗೊಂಡ ಕರಡು ಮಸೂದೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ತಿಳಿಸಿದ್ದಾರೆ.
ಮಹಿಳಾ ಸಬಲೀಕರಣದ ದೃಷ್ಟಿಯಿಂದ ಈ ಮಸೂದೆಯನ್ನು ರಚಿಸಲಾಗುತ್ತಿದೆ. ಪತಿ-ಪತ್ನಿಯ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಎಲ್ಲ ವಿಷಯಗಳನ್ನೂ ಪರಸ್ಪರ ಅರಿತಿರಬೇಕು. ಮುಖ್ಯವಾಗಿ ಧರ್ಮ, ಉದ್ಯೋಗ, ಆದಾಯದ ವಿಚಾರದಲ್ಲಿ ವಂಚನೆ, ಮೋಸ ನಡೆಯಬಾರದು. ಸಂಸಾರ ನಡೆಸುವಲ್ಲಿ ಇವು ಅತ್ಯಂತ ಪ್ರಾಮುಖ್ಯವಿಚಾರಗಳಾಗಿವೆ.
ಇದನ್ನೂ ಓದಿ:ವಿರಾಟ್ ಕೊಹ್ಲಿಗೆ ಸೆಂಚುರಿ ಟ್ರಬಲ್! 24 ಇನಿಂಗ್ಸ್‌ಗಳಿಂದ ಸಿಡಿದಿಲ್ಲ ಶತಕ
ಲವ್​ ಜಿಹಾದ್ ತಡೆಯುವುದಕ್ಕೆ ಇರುವ ಕಾನೂನು ಇದು ಎಂಬ ವ್ಯಾಖ್ಯೆ ಬೇಕಾಗಿಲ್ಲ. ಅದನ್ನು ಮೀರಿದ ಮಸೂದೆ ಇದಾಗಿದ್ದು, ಸಮಾಜದ ಹಿತದೃಷ್ಟಿ, ಮಹಿಳಾ ಸಬಲೀಕರಣದ ದೃಷ್ಟಿಯಿಂದ ಗಮನಿಸಬೇಕು. ಎಲ್ಲ ಧರ್ಮದವರಿಗೂ, ಜಾತಿಯವರಿಗೂ, ಸಮುದಾಯದವರಿಗೂ ಈ ಕಾನೂನು ಅನ್ವಯವಾಗಲಿದೆ ಎಂದು ಹಿಮಂತ ಬಿಸ್ವಾ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)
Our idea is not the so-called 'Love Jihad'. My idea is that you shouldn't hide your identity, job or income. Assam is going to do something which won't be against any religion. It'll have transparency in marriage. We've started drafting legislation: Assam Minister HB Sarma(30.11)https://t.co/D9x7xqN4rf
— ANI (@ANI)November 30, 2020

ಹಿಂದೂ ಯುವಕನೆಂದು ನಂಬಿಸಿ ಮದುವೆಯಾದ; ಗರ್ಭದಲ್ಲಿದ್ದ ಮಗು ಕೊಂದು ಮತಾಂತರವಾಗೆಂದು ಒತ್ತಾಯಿಸಿದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 9 =
Remember me
