ಲಖನೌ:ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಟೊಮ್ಯಾಟೋ ತುಂಬಿರುವ ಲಾರಿ ಕಳ್ಳತನವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದೀಗ ಖದೀಮರು ಮೊಟ್ಟೆ ಸಾಗಿಸುತ್ತಿದ್ದ ಕಂಟೇನರ್​ಅನ್ನು ಕದ್ದು ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ರಾಜಧಾನಿ ಲಖನೌನಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದು, ಬಂಧಿತರನ್ನು ಮೊಹಮ್ಮದ್​ ಫರಾಜ್, ಮುಮ್ತಾಜ್​, ಅಜ್ಮತ್​, ಸೂಫಿಯಾನ್​ ಹಾಗೂ ಇಷ್ತಿಯಾಕ್​ ಎಂದು ಗುರುತಿಸಲಾಗಿದೆ. ಬಂಧಿತರಿಂದ ಐದು ಲಕ್ಷ ರೂಪಾಯಿ ಮೌಲ್ಯದ ಮೊಟ್ಟೆ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಲಖನೌ ಉತ್ತರ ಡಿಸಿಪಿ ಕಾಸಿಮ್​ ಅಬ್ದಿ ಹರಿಯಾಣದಿಂದ ಮೊಟ್ಟೆಗಳನ್ನು ಮೋತಿಲಾಲ್​ ಮತ್ತು ಮುನ್ನಾಲಾಲ್​ ಎಂಬುವವರು ತಮ್ಮ ಲಾರಿಯಲ್ಲಿ ಸಾಗಿಸುತ್ತಿದ್ದರು. ಈ ವಿಚಾರ ತಿಳಿದು ಕಂಟೇನರ್​ ಇತೌಂಜಾ ಪ್ರದೇಶ ತಲುಪಿದಾಗ ಕಾರಿನಲ್ಲಿ ಬಂದ ಐವರು ಆರೋಪಿಗಳು ಲಾರಿಯನ್ನು ಅಡ್ಡಗಟ್ಟಿ ಮೋತಿಲಾಲ್​ ಮತ್ತು ಮುನ್ನಾಲಾಲ್​ ಅವರ ಮೇಲೆ ಕಾರಣ ಇಲ್ಲದೆ ಹಲ್ಲೆ ನಡೆಸಲು ಶುರು ಮಾಡಿದ್ದಾರೆ.
ಇದನ್ನೂ ಓದಿ:VIDEO| ಉಕ್ಕಿ ಹರಿದ ಯಮುನೆ; ನೆರೆಯಿಂದ ತತ್ತರಿಸಿದ ದೆಹಲಿ
ಇದಾದ ಬಳಿಕ ಆರೋಪಿಗಳು ಲಾರಿಯನ್ನು ಕದ್ದು ಪರಾರಿಯಾಗಿದ್ದಾರೆ. ಗಾಯಾಳುಗಳು ಈ ಸಂಬಂಧ ಹತ್ತಿರದ ಪೊಲೀಸ್​ ಠಾಣೆಗೆ ತೆರಳಿ ನಡೆದ ಘಟನೆ ಕುರಿತು ವಿವರಿಸಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಘಟನೆ ನಡೆದ ಸ್ಥಳದ ಸುತ್ತ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರ ಪೈಕಿ ಮೊಹಮ್ಮದ್​ ಫರಾಜ್​ ಮೊಟ್ಟೆ ಅಂಗಡಿ ಮಾಲೀಕನಾಗಿದ್ದು, ಮುಮ್ತಾಜ್​ ಈತನ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಉಳಿದವರು ಈತನಿಗೆ ಕಳ್ಳತನ ಮಾಡಲು ಸಾಥ್​ ನೀಡಿದ್ದಾರೆ ಎಂದು ಲಖನೌ ಉತ್ತರ ಡಿಸಿಪಿ ಕಾಸಿಮ್​ ಅಬ್ದಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 1 =
Remember me
