ನವದೆಹಲಿ:ಹೆದ್ದಾರಿಯಲ್ಲಿ ಹೋಗುವ ವಾಹನಗಳನ್ನು ಅಡ್ಡಗಟ್ಟಿ ಲಿಫ್ಟ್ ಕೇಳುವುದೇನೂ ಹೊಸದಲ್ಲ. ಹಾಗೆ ಯಾರಿಗಾದರೂ ಡ್ರಾಪ್​ ಕೊಡುವುದು ಒಳ್ಳೆಯದೇ ಆದರೂ ಒಮ್ಮೊಮ್ಮೆ ಅದು ಒಳ್ಳೆಯದು ಮಾಡಲು ಹೋದವರಿಗೇ ಕೆಡುಕಾಗಿ ಪರಿಣಮಿಸಿದ್ದೂ ಇದೆ. ಇಲ್ಲೊಂದು ಹೆದ್ದಾರಿಯಲ್ಲಿ ಇಬ್ಬರು ನಿಂತು ವಾಹನಗಳಿಗೆ ಕೈತೋರುತ್ತಿದ್ದರು. ಆದರೆ ಅಂದು ಅವರ ಗ್ರಹಚಾರ ಸರಿ ಇರಲಿಲ್ಲ ಅನಿಸುತ್ತದೆ.
ಹೌದು.. ಅಂದು ತಡರಾತ್ರಿ ಹೆದ್ದಾರಿಯಲ್ಲಿ ನಿಂತು ವಾಹನ ಅಡ್ಡಗಟ್ಟಿದ್ದ ಅವರಿಗೆ ಅದೇ ತಮಗೆ ಮುಳುವಾಗುತ್ತದೆ ಎಂಬ ಅಂದಾಜೂ ಇರಲಿಲ್ಲ. ಏಕೆಂದರೆ ಕತ್ತಲೆಯಲ್ಲಿ ಅವರು ಅಡ್ಡಗಟ್ಟಿದ್ದ ವಾಹನ ಹತ್ತಿರ ಬಂದಾಗಲೇ ಗೊತ್ತಾಗಿದ್ದು, ಅದು ಪೊಲೀಸ್​ ವಾಹನ ಅಂತ. ಅದು ಗೊತ್ತಾಗುತ್ತಿದ್ದಂತೆ ಡ್ರಾಪ್​ಗಾಗಿ ಅಡ್ಡಗಟ್ಟಿದ್ದ ಅವರು ಅಲ್ಲಿಂದ ಓಡಲಾರಂಭಿಸಿದರು.
ಇದನ್ನೂ ಓದಿ:ಹೆಂಡತಿಯ ಮೇಲಿನ ಕೋಪಕ್ಕೆ ನಾಲ್ಕು ಗಂಡು ಮಕ್ಕಳನ್ನು ಕೊಂದ ಅಪ್ಪ! ಸ್ವಲ್ಪ ಸಮಯದಲ್ಲಿ ತಾನೂ ಹೆಣವಾದ!
ರಾತ್ರಿಯಲ್ಲಿ ಮಹಿಳೆಯರು ಏನೋ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿರಬೇಕು, ನೆರವಾಗೋಣ ಎಂದು ಹತ್ತಿರಕ್ಕೆ ಹೋಗಿದ್ದ ಪೊಲೀಸರಿಗೆ ಅನುಮಾನ ಮೂಡಿ ಬೆನ್ನತ್ತಿದ್ದಾಗ ಅವರಿಬ್ಬರು ಮಹಿಳೆಯರ ವೇಷದಲ್ಲಿದ್ದ ಪುರುಷರು ಎಂಬುದು ಗೊತ್ತಾಗಿದೆ. ಬಳಿಕ ಇಬ್ಬರನ್ನೂ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂದಹಾಗೆ ಇದು ನಡೆದಿದ್ದು ಪಶ್ಚಿಮ ಬಂಗಾಳದ ನಡಿಯಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ -34ರಲ್ಲಿ. ಮಂಗಳವಾರ ತಡರಾತ್ರಿ ಗಸ್ತಿನಲ್ಲಿದ್ದ ರಣಘಾಟ್ ಠಾಣಾ ಪೊಲೀಸರಿಗೆ ಇವರಿಬ್ಬರು ಸಿಕ್ಕಿಬಿದ್ದಿದ್ದು, ಇವರಿಬ್ಬರೂ ರಾತ್ರಿಯಲ್ಲಿ ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ಮಹಿಳೆಯರ ಸೋಗಿನಲ್ಲಿ ಅಡ್ಡಗಟ್ಟಿ ಬಳಿಕ ದರೋಡೆ ಇತ್ಯಾದಿ ಅಪರಾಧ ಎಸಗುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಸಿನಿಮಾದಲ್ಲಿ ಛಾನ್ಸ್​ ಕೊಡ್ತೇನಂತ ಎನರ್ಜಿ ಡ್ರಿಂಕ್ಸ್​ ಕುಡಿಸಿ ಬೆತ್ತಲು ಮಾಡಿ ಚಿತ್ರೀಕರಣ: ಸಿನಿತಂಡ ಅರೆಸ್ಟ್​

ಮಗನಿಲ್ಲವೆಂದು ಇದ್ದ ನಾಲ್ಕು ಹೆಣ್ಣು ಮಕ್ಕಳನ್ನು ಕೊಂದ ತಾಯಿ! ಅಮ್ಮಾ ಎನ್ನುತ್ತಲೇ ಪ್ರಾಣ ಬಿಟ್ಟ ಅಪ್ರಾಪ್ತೆಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 1 =
Remember me
